ಉಡುಪಿ: “ಹಿಂದೂ ಜನ ಸಂಘ” ಉದ್ಘಾಟನೆ
ಉಡುಪಿ: ಮಾರ್ಚ್ 15. ಉಡುಪಿಯ ಕಿನ್ನಿಮೂಲ್ಕಿ ವೀರಭದ್ರ ಕಲಾಭವನದಲ್ಲಿ ಸ್ವಾಭಿಮಾನಿ, ಸ್ವಾವಲಂಭಿ ಹಿಂದೂ ಸಮಾಜ ನಿರ್ಮಾಣದ ಕನಸಿನೊಂದಿಗೆ ನಾಡಿನ ಹಿರಿಯ ಹಿಂದೂ ಮುಖಂಡರ ಸಮ್ಮುಖದಲ್ಲಿ “ಹಿಂದೂ ಜನ ಸಂಘ” ಅಧಿಕೃತ ಉದ್ಘಾಟನೆ ನಡೆಯಿತು.
ಹಿಂದೂ ಸಮಾಜವನ್ನು ಸಶಕ್ತಶಾಲಿ, ಸದೃಢ ಸಮಾಜವನ್ನಾಗಿ ಮಾಡುವಲ್ಲಿ ಹಿಂದೂ ಸಂಘಟನೆಗಳ ಅಗತ್ಯವಿದೆ, ಈ ದೇಶದ ರಕ್ಷಣೆಗೆ ಹಿಂದೂ ಸಂಘಟನೆಗಳು ಸದಾ ಸಿದ್ದವಿದೆ ಎಂದು ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಗಂಗಾಧರ ಕುಲಕರ್ಣಿ ಅವರು ತಮ್ಮ ಉದ್ಘಾಟಕರ ಮಾತಿನಲ್ಲಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಹಿಂದೂ ಜನಸಂಘದ ಸಂಸ್ಥಾಪಕಿಯಾದ ಅಂಬಿಕಾ ಪ್ರಭು ಸಂಘಟನೆಯ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಹಿಂದೂ ಮುಖಂಡರಾದ ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ಶ್ರೀರಾಮ ಸೇನೆಯ ಜಿಲ್ಲಾದ್ಯಕ್ಷರಾದ ಜಯರಾಮ ಅಂಬೆಕಲ್ಲು, ಹಿಂದೂ ಜನಜಾಗೃತಿಯ ವಿಜಯಕುಮಾರ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಪ್ರದೀಪ್ ಬೇಲಾಡಿ ಅವರು ಆಯ್ಕೆಯಾದರು. ಬೆಳಗಾವಿ ಜಿಲ್ಲಾ ಪ್ರಮುಖರಾಗಿ ವೀರೇಶ್ ಹಡಪದ್ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ನಿತಿನ್ ಬೆಳುವಾಯಿ, ವಿನೋದ್ ಕರ್ಕೇರ, ಜಿಲ್ಲಾ ಕಾರ್ಯದರ್ಶಿಯಾಗಿ ಶರತರಾಜ್ ಉಡುಪಿ, ಕೋಶಾಧಿಕಾರಿಯಾಗಿ ಸಂಪತ್, ಹಾಗೂ ಇತರ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಿ. ರಾಧಾಕೃಷ್ಣ ಶೆಟ್ಟಿ, ಮಧುಕರ ಮುದ್ರಾಡಿ, ವಿಕ್ರಮ್ ಬಾಳಿಗ, ಸುಶಾಂತ್ ಅಮೀನ್ ಉಪಸ್ಥಿತರಿದ್ದರು.
ಪ್ರದೀಪ್ ಬೇಲಾಡಿ ಪ್ರಸ್ತಾವನೆಗೈದು, ಶರತರಾಜ್ ಧನ್ಯವಾದ ಸಲ್ಲಿಸಿದರು. ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು.