ಉಡುಪಿ: ವೈದ್ಯ ಶವಗಾರದಲ್ಲಿ, ರೋಗಿ ಯಮಲೋಕಕ್ಕೆ!ಜಿಲ್ಲಾಸ್ಪತ್ರೆಯ ಕರ್ಮಕಾಂಡ
ಉಡುಪಿ : ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯತೆಯಿಂದ ಚೇರ್ಕಾಡಿ ಮಡಿ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ . ಬ್ರಹ್ಮಾವರ ಚೇರ್ಕಾಡಿಯ ಸುಧಾಕರ್ ನಾಯ್ಕ(51) ರಿಕ್ಷಾ ಚಾಲಕರಾಗಿದ್ದು, ಶುಕ್ರವಾರ ಬಾಡಿಗೆಗೆಂದು ಪೇತ್ರಿಯಲ್ಲಿದ್ದಾಗ ಕುಸಿದು ಬಿದ್ದಿದ್ದರು. ಇವರನ್ನು ಸ್ಥಳೀಯರು ಮತ್ತು ಮನೆಯವರು 2 ಗಂಟೆಗೆ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.
ವೈದ್ಯರು ಆತ್ಮಹತ್ಯೆಯಲ್ಲಿ ಮೃತಪಟ್ಟ ವ್ಯಕ್ತಿಯ ಶವ ಮಹಜರು ತೊಡಗಿದ್ದ ಸಂದರ್ಭ ಸಂಜೆ 5 ಗಂಟೆಗೆ ಸುಧಾಕರ್ ತೀವ್ರ ಅಸ್ವಸ್ಥಗೊಂಡಿದ್ದರು. ಆಗ ನಾನು ಎಷ್ಟೇ ಬೊಬ್ಬೆ ಹಾಕಿ ಕರೆದರೂ ಯಾವೋಬ್ಬ ಡಾಕ್ಟರ್ ಇವರಿಗೆ ಸೂಕ್ತ ಚಿಕಿತ್ಸೆ ನೀಡದೆ ತನ್ನ ತಂದೆ ಮೃತಪಟ್ಟರೆಂದು ಸುಧಾಕರ್ ನಾಯ್ಕ ಮಗಳು ಹರ್ಷಿತ ದೂರಿದ್ದಾರೆ.
ವೈದ್ಯರು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ರೋಗಿ ಮೃತಪಟ್ಟರೆಂದು ಮನೆಯವರು ಮತ್ತು ಸಾರ್ವಜನಿಕರು ಜಿಲ್ಲಾಸ್ಪತ್ರೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
ವೈದ್ಯರು ಬಂದು ರೋಗಿಯನ್ನು ಪರೀಕ್ಷಿಸಲು ಹೋದಾಗ ತಂದೆ ಆದಾಗಲೇ ಮೃತಪಟ್ಟಿದ್ದಾರೆಂದು ಮಗಳು ತಿಳಿಸಿದ್ದಾರೆ. ಆಸ್ಪತ್ರೆಯ ನರ್ಸ್ ನವರು ಕೂಡ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ರೋಗಿಯ ಮನೆಯವರು ದೂರಿದ್ದಾರೆ . ಸುಧಾಕರ್ ನಾಯ್ಕ್ ಸಾವಿನ ಬಗ್ಗೆ ಸಾರ್ವಜನಿಕರು ವೈದ್ಯರ ನಿರ್ಲಕ್ಷ್ಯತನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಕ್ಷಣ ವೇದಿಕೆಯ ಅಧ್ಯಕ್ಷ ಅನ್ಸಾರ್ ಅಹಮ್ಮದ್ ಕೂಡಲೇ ಕಾರ್ಯಕರ್ತರ ಜೊತೆ ಆಗಮಿಸಿ ಪ್ರತಿಭಟನೆ ನಡೆಸಿದಿದ್ದಾರೆ.
ಜಿಲ್ಲಾಸ್ಪತ್ರೆಯ ವೈದ್ಯರಿಗೆ ಖಾಸಗಿ ಆಸ್ಪತ್ರೆಯ ರೋಗಿಗಳಿಗೆ ನೀಡುವ ಚಿಕಿತ್ಸೆಯ ಉಮೇದುವಾರಿಕೆ ಜಿಲ್ಲಾಸ್ಪತ್ರೆ ದಾಖಲಾದ ರೋಗಿಗಳಿಗೆ ಚಿಕಿತ್ಸೆ ನೀಡುವ ಇರಾದೆ ಇಲ್ಲದಂತೆ ಕಾಣುತ್ತಿದೆ . ಇಂಥ ನಿರ್ಲಕ್ಷದ ದಿಂದ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಆದರೆ ವೈದ್ಯಾಧಿಕಾರಿಗಳಿಗೆ ಇದಕ್ಕೆ ಸಿಗುವ ಏಕೈಕ ಕಾರಣ ಆಸ್ಪತ್ರೆಯಲ್ಲಿ ಬೇಕಾದಷ್ಟು ವೈದ್ಯರಿಲ್ಲ ,ದಾದಿಯರು, ಸವಲತ್ತುಗಳಿಲ್ಲ ಎಂಬ ಕಾರಣ. ಆದರೆ ಸಾರ್ವಜನಿಕರ ಪ್ರಕಾರ ಇಲ್ಲಿನ ವೈದ್ಯಾಧಿಕಾರಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಚಿಕಿತ್ಸೆಯ ಹುಮ್ಮಸ್ಸು ಸರಕಾರ ನೀಡುವ ಸಂಬಳಕ್ಕೆ ಪ್ರತಿಯಾಗಿ ಕರ್ತವ್ಯ ನಿರ್ವಹಿಸದೆ ಬೇಜವಾಬ್ದಾರಿತನ ಪ್ರದರ್ಶಸಿಸುತ್ತಾರೆಂಬ ಸಾರ್ವಜನಿಕರ ಆರೋಪವಾಗಿದೆ.