ಆಶ್ಲೇಷನ ಆರ್ಭಟಕ್ಕೆ ನಲುಗಿದ ಉಡುಪಿ ಕೋಟ್ಯಂತರ ನಷ್ಟ

ಉಡುಪಿ: ಜಿಲ್ಲೆಯಲ್ಲಿ ಆಶ್ಲೇಷಾ ಮಳೆಯ ಅಬ್ಬರ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲವಾದ್ದರಿಂದ ಜಿಲ್ಲೆಯಲ್ಲಿ ಜನ ಜೀವನ ಅಸ್ತವ್ಯಸ್ಥವಾಗಿದೆ.ಕಳೆದ ಮೂರು ದಿನದಿಂದ ಸುರಿಯುತ್ತಿರುವ ನಿರಂತರ ಮಳೆ,ಗಾಳಿ,ಸಿಡಿಲಿನ ಆರ್ಭಟಕ್ಕೆ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ.

ನಿನ್ನೆ ಮತ್ತು ಇಂದು ಸುರಿದ ಭಾರಿ ಮಳೆಗೆ ಉಡುಪಿ ತಾಲೂಕಿನಾದ್ಯಾಂತ 70 ಕ್ಕೂ ಹೆಚ್ಚು ಕಡೆಗಳಲ್ಲಿ ಮರ,ವಿದ್ಯುತ್ ಕಂಬ ಧರೆಗುಳಿದ್ದು ಕೋಟ್ಯಾಂತರ ರೂ.ನಷ್ಟ ಸಂಭವಿಸಿದೆಂದು ಉಡುಪಿ ತಾಲೂಕು ಕಛೇರಿ ಮೂಲಗಳು ತಿಳಿಸಿವೆ.

ನಿನ್ನೆ ತಡ ರಾತ್ರಿ ಉಡುಪಿ ಚರ್ಚ್ ಹಿಂಬದಿ ರಸ್ತೆ , ಡಯಾನ ಚಿತ್ರ ಮಂದಿರದ ಕಸ್ತುರ್ಭಾ ನಗರ, ಕುಕ್ಕಿಕಟ್ಟೆಯ ಮುಚ್ಲ್‌ಕೋಡು, ಅಲೆವೂರು ಭಾಸ್ಕರ ಗ್ಯಾರೇಜ್, ಉದ್ಯಾವರ ಹಲೀಮಾ ಸಾಬ್ಜು ಬಳಿ ,ಕಡೆಕಾರ್ , ಮಲ್ಪೆ, ತೊಟ್ಟಂ, ಗುಂಡಿಬೈಲ್ , ಮಣಿಪಾಲ ಸಹಿತ ಹಲವು ಕಡೆಗಳಲ್ಲಿ ಮರಗಳು ಉರುಳಿಬಿದ್ದ ಪರಿಣಾಮ ಅಪಾರ ಹಾನಿ ಸಂಭವಿಸಿದೆ.

ನೆರೆ ಪೀಡಿತ  ನಾವುಂದ  ಮತ್ತು ಮರವಂತೆ  ಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ  ಮತ್ತು ಜಿ.ಪಂ.CEO ಸಿಂಧೂ ಬಿ ರೂಪೇಶ್ , ಮಂಗಳವಾರ ಭೇಟಿ ಪರಿಶೀಲನೆ ನಡೆಸಿದರು.

1 thought on “ಆಶ್ಲೇಷನ ಆರ್ಭಟಕ್ಕೆ ನಲುಗಿದ ಉಡುಪಿ ಕೋಟ್ಯಂತರ ನಷ್ಟ

Leave a Reply to Nihal Cancel reply

Your email address will not be published. Required fields are marked *

error: Content is protected !!