ಮಣಿಪಾಲ: ಲ್ಯಾಬ್ ಟೆಕ್ನಿಶನ್ ಗೆ ಕೊರೋನಾ ಸೋಂಕು ದೃಢ
ಮಣಿಪಾಲ: (ಉಡುಪಿ ಟೈಮ್ಸ್ ವರದಿ) ದುಬೈನಿಂದ ಮಂಗಳೂರಿಗೆ ವಿಮಾನದಿಂದ ಬಂದಿದ್ದ 34 ವರ್ಷದ ಮಣಿಪಾಲದ ಲ್ಯಾಬ್ ಟೆಕ್ನಿಶನ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದು ಉಡುಪಿ ಜಿಲ್ಲೆಯ ಮೊದಲ ಕೊರೋನಾ ಸೋಂಕು ಎಂದು ಡಿಎಚ್ಓ ತಿಳಿಸಿದ್ದಾರೆ.
ದಾವಣಗೆರೆ ಮೂಲದ ಲ್ಯಾಬ್ ಟೆಕ್ನಿಶನ್ ಮಾ.18 ಕ್ಕೆ ದುಬೈನಿಂದ ತನ್ನ ಹೆಂಡತಿ ಮನೆಯಾದ ಪರ್ಕಳಕ್ಕೆ ಬಂದಿದ್ದರು, ಮಾ.23 ಕ್ಕೆ ಜ್ವರದ ಲಕ್ಷಣ ಕಾಣಿಸಿಕೊಂಡ ಪರಿಣಾಮ ಉಡುಪಿ ಅಜ್ಜರಕಾಡಿನ ಕೊರೋನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬುಧವಾರ ಈ ವ್ಯಕ್ತಿಯ ವೈದ್ಯಕೀಯಾ ವರದಿ ಬಂದಿದ್ದು, ಅದರಲ್ಲಿ ಕೊರೋನಾ ಸೋಂಕು ಇರುವುದು ದೃಢ ಪಟ್ಟಿದೆಂದು ಜಿಲ್ಲಾ ಅರೋಗ್ಯಾಧಿಕಾರಿ ಸುಧೀರ್‍ಚಂದ್ರ ಸೂಡ ತಿಳಿಸಿದ್ದಾರೆ.
ಇವರು ದುಬೈನಿಂದ ಮಣಿಪಾಲಕ್ಕೆ ಬಂದು ಐದಾರು ದಿನ ಎಲ್ಲಿ ಎಲ್ಲಾ ಬೇಟಿ ನೀಡಿದ್ದಾರೆ, ಹಾಗೂ ಯಾರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
Lok Dawn madidre tumba olledu ennu artha agall janarige 31 thanaka eddaddu 14 thanaka hoithu janara sahakara edre ellige mugiyuthe navella sahakara kotre tumbane volledu janagalu angadi market edethara open edre tumbane problem aagalu saadya north nalli yaru horage baralla
This is very bad to hear..in 18 Feb he came to india why our govt. do not cheked here showing very careless govt. in Karnataka. So peoples be careful and save yourself. There are no medichine to corona so fallow govt. rules and dont go outside from home. Staying in house is best medichine. Don’t meet antibodies for some days.
Thank you.