ಉಡುಪಿ: ಮೇ 18ರಿಂದ ‘ಸೆಲೂನ್’ ತೆರೆಯಲು ಜಿಲ್ಲಾಧಿಕಾರಿ ಅನುಮತಿ: ಸವಿತಾ ಸಮಾಜ
ಉಡುಪಿ: ಕೊರೋನಾ ಸಮಸ್ಯೆಯಿಂದ ಇಡೀ ದೇಶವೇ ತತ್ತರಿಸುತ್ತಿದ್ದಾಗ ಲಾಕ್‌ಡೌನ್ ಘೋಷಣೆ ಮೂರು ದಿನಗಳ ಮುಂಚೆಯೇ ‘ಸೆಲೂನ್’ ಅಂಗಡಿಗಳನ್ನು ಮುಚ್ಚಿ ಬೆಂಬಲವನ್ನು ಸೂಚಿಸಿದ್ದು 53 ದಿನಗಳಿಂದ ಸಮಸ್ಯೆಗಳ ನಡುವೆಯೂ ಬದುಕುತ್ತಿದ್ದು, ಮೇ 18 ರಿಂದ ಜಿಲ್ಲೆಯಲ್ಲಿ ಎಲ್ಲಾ ಸೆಲೂನ್ ಗಳನ್ನು ಪುನರಾರಂಭ ಮಾಡಲು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಷರತ್ತು ಬದ್ದ ಅನುಮತಿಯನ್ನು ನೀಡಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷರಾದ ಭಾಸ್ಕರ್ ಭಂಡಾರಿ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಲಾಕ್ ಡೌನ್ ಸಂದರ್ಭದಲ್ಲಿ ಕ್ಷೌರಿಕರ ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ಉಡುಪಿಯ ಕೊಡುಗೈ ದಾನಿ ಉದ್ಯಮಿ ನಾಡೋಜ ಡಾ. ಜಿ. ಶಂಕರ್ ಮತ್ತು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮೂಲಕ ಜಿಲ್ಲೆಯ ಎಲ್ಲಾ ಕ್ಷೌರಿಕ ಬಂಧುಗಳಿಗೆ ಹಾಗೂ ಬಡ ಅರ್ಹ 2000 ಕುಟುಂಬಕ್ಕೆ ಅಕ್ಕಿ ಮತ್ತು ದಿನಸಿ ಕಿಟ್ಟನ್ನು ನೀಡಿ ಮಾನವೀಯತೆಯನ್ನು ಮರೆದಿದ್ದಾರೆ.