ಉಡುಪಿ: ಖಾಸಗಿ ಬಸ್ ಮಾಲಕರ ಒತ್ತಡಕೆ ಮಣಿಯಿತಾ ಜಿಲ್ಲಾಡಳಿತ? ಸರಕಾರಿ ಬಸ್ ಸಂಚಾರಕ್ಕೆ ಆಗ್ರಹ
ಉಡುಪಿ: ಜಿಲ್ಲೆ ಹಸಿರು ವಲಯಕ್ಕೆ ತರುವಲ್ಲಿ ಬಹುತೇಕ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಖಾಸಗಿ ಬಸ್ ಸಂಚಾರ ಪ್ರಾರಂಭಿಸುವಲ್ಲಿ ರಾಜಕೀಯ ತಾಳಕ್ಕೆ ಗುರಿಯಾದರೆ ಎಂಬ ಸಂದೇಹ ಜನಸಾಮಾನ್ಯರಲ್ಲಿ ಮೂಡುತ್ತಿದೆ.
ಯಾಕೆಂದರೆ ಉಡುಪಿ ಹಸಿರು ವಲಯವಾಗಿ ಘೋಷಣೆಯಾಗಿ ಒಂದು ವಾರ ಕಳೆದರೂ ಜಿಲ್ಲೆಯಲ್ಲಿ ಯಾವುದೇ ಒಂದು ಬಸ್ ಸಂಚಾರ ಪ್ರಾರಂಭವಾಗಿಲ್ಲ ಇದಕ್ಕೆ ಪ್ರಮುಖ ಕಾರಣವೆಂದರೆ ಬಸ್ಸಿನಲ್ಲಿ ಶೇಕಡ 50 ರಷ್ಟು ಮಾತ್ರ ಪ್ರಯಾಣಿಕರನ್ನು ಸಾಗಿಸಬೇಕೆಂಬ ಕಟ್ಟುನಿಟ್ಟಿನ ನಿಯಮ. ಈ ನಿಯಮಕ್ಕೆ ಖಾಸಗಿ ಬಸ್ಸಿನವರು ಒಪ್ಪಿಲ್ಲದ ಕಾರಣ ಅವರು ಹಸಿರು ವಲಯವಾಗಿ ವಾರ ಕಳೆದರೂ ಬಸ್ ಸಂಚಾರವನ್ನು ಪುನರ್ ಪ್ರಾರಂಭಿಸಿಲ್ಲ.
ಈ ನಿಯಮದಿಂದ ಇವರಿಗೆ ನಷ್ಟವಾಗುತ್ತದೆ ಎನ್ನುವ ಏಕೈಕ ವಾದ. ಈ ಹಿಂದೆ ಕುರಿಮಂದೆಯಂತೆ ಸಾಗಿಸುತ್ತಿದ್ದ ಸಿಟಿಬಸ್ ಮಾಲಕರು ಈಗ ಶೇಕಡ 50 ರಷ್ಟು ಮಾತ್ರ ಪ್ರಯಾಣಿಕರನ್ನು ತುಂಬಿಸಬೇಕು ಎನ್ನುವ ಸರಕಾರದ ಕಾನೂನನ್ನು ಸಾರಾಸಗಟವಾಗಿ ಪಾಲನೆ ಮಾಡದೆ ಕೇವಲ ತಮ್ಮ ಖಜಾನೆ ಭರ್ತಿ ಮಾಡುವ ಉದ್ದೇಶದಿಂದ ಜಿಲ್ಲಾಡಳಿತದ ನಿಯಮವನ್ನು ಉಲ್ಲಂಘಿಸಿ ಯಾವುದೇ ಕಾರಣಕ್ಕೆ ಬಸ್ ಸಂಚಾರ ಪ್ರಾರಂಭಿಸಲ್ಲ ಎಂಬ ಹಠಕ್ಕೆ ಬಿದ್ದಿದ್ದಾರೆ.
ಈ ಮೊದಲು ತಮಗೆ ಬೇಕಾಬಿಟ್ಟಿ ಎನ್ನುವಂತೆ ಪ್ರಯಾಣಿಕರನ್ನು ಬಸ್ಸಿನಲ್ಲಿ ತುಂಬಿಸಿಕೊಂಡು ಕುರಿಮಂದೆ ಸಾಗಿಸುವಂತೆ ಸಾಗಿಸಿ ಸರಕಾರಿ ನಿಯಮವನ್ನು ಉಲ್ಲಂಘಿಸಿ ಹಣ ದೋಚುತ್ತಿದ್ದ ಬಸ್ ಮಾಲಕರು ಈಗ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯತೆ ಮೆರೆಯಬೇಕಾದ ಮಾಲಕರು, ಕೇವಲ ಹಣ ದೊಚುವುದು ತಮ್ಮ ಗುರಿಯೆಂದು ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈಗ ಸರ್ಕಾರಿ ನಿಯಮವನ್ನು ಪಾಲಿಸುವುದಿಲ್ಲ ಎನ್ನುವ ಈ ಬಸ್ ಮಾಲಕರು ಈ ಹಿಂದೆ ಇರುವಂತಹ ಸರ್ಕಾರಿ ನಿಯಮವನ್ನು ಎಷ್ಟು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸಾರಿಗೆ ವ್ಯವಸ್ಥೆ ಎನ್ನುವುದು ಸಾರ್ವಜನಿಕರ ಸೇವೆ ಇದನ್ನು ಕೇವಲ ವ್ಯಾಪಾರ ದೃಷ್ಟಿಯಿಂದ ನೋಡದೆ ಇಂತಹ ಸಂದರ್ಭದಲ್ಲಿ ಮಾನವೀಯತೆ ಎನ್ನುವಂತಹದ್ದು ಅವರ ಕಣ್ಣಿಗೆ ಕಾಣಿಸಿಲ್ಲವೇ?. ಎಂಬುದು ಜನಸಾಮಾನ್ಯರ ಪ್ರಶ್ನೆ.
ಈಗಾಗಲೇ ರಿಕ್ಷಾ ಚಾಲಕರು ಮನಬಂದಂತೆ ಸಾರ್ವಜನಿಕರನ್ನು ದೊಚಲು ಪ್ರಾರಂಭಿಸಿದ್ದಾರೆ, ಬಸ್ ಮಾಲಕರ ಬೇಡಿಕೆ ಎಂದರೆ ಈಗಿದ್ದ ಟಿಕೆಟ್ ದರವನ್ನು ಶೇಕಡ 50 ರಷ್ಟು ಏರಿಸಿ ಸಾರ್ವಜನಿಕರಿಗೆ ಸೇವೆಯನ್ನು ನೀಡಬೇಕೆಂಬುದು ಅವರ ವಾದ. ಆದರೆ ಇದಕ್ಕೆ ಉಡುಪಿ ಜಿಲ್ಲಾಧಿಕಾರಿ ಸೊಪ್ಪು ಹಾಕದೆ ಯಾವುದೇ ಕಾರಣಕ್ಕೂ ಈ ಮನವಿಯನ್ನು ಅವರು ಸಾರಾಸಗಟವಾಗಿ ತಳ್ಳಿಹಾಕಿದ್ದಾರೆ. ಅಷ್ಟಾದರೂ ಸರಕಾರಿ ಬಸ್ ಅನ್ನು ಯಾಕೆ ಪ್ರಾರಂಭಿಸಿಲ್ಲ ಎನ್ನುವುದು ಜನಸಾಮಾನ್ಯರ ಪ್ರಶ್ನೆ. ಜಿಲ್ಲಾಧಿಕಾರಿ ಅವರ ಈ ನಡವಳಿಕೆಯಿಂದ ಸಾರ್ವಜನಿಕರಿಗೆ ಹಲವಾರು ಸಂಶಯಗಳು ಮೂಡಿ ಬಂದಿದೆ.
ಇಂತಹ ಸಮಯದಲ್ಲಿ ಕೆಎಸ್ಸಾರ್ಟಿಸಿ ಬಸ್ಸನ್ನು ಬಿಡಬೇಕಾಗಿತ್ತು. ಜನರು ಯಾವುದೇ ಕೆಲಸವಿಲ್ಲದೆ ಉಪವಾಸ ಇರುವ ಸಂದರ್ಭದಲ್ಲಿ ಸರಕಾರದ ಬಸ್ಸನ್ನು ಚಲಾಯಿಸುವುದರಲ್ಲಿ ಯಾವುದೇ ಮೂಲಾಜು ತೋರಿಸದೇ ಪ್ರಾರಂಭಿಸಬೇಕೆನ್ನುವುದು ಸಾಮಾನ್ಯ ಜನರ ವಾದ. ಉಡುಪಿ ಜಿಲ್ಲೆಯಲ್ಲಿ ಮಾತ್ರ ಕೆಎಸ್‌ಆರ್ಟಿಸಿ ಬಸ್ಸನ್ನು ಸಂಚರಿಸಲು ಇಲ್ಲಿನ ಖಾಸಗಿ ಮಾಫಿಯ ತಡೆಯೊಡ್ಡುತ್ತದೆ, ದಕ್ಷ ಜಿಲ್ಲಾಧಿಕಾರಿ ಎಂದು ಹೆಸರುವಾಸಿಯಾದ ಜಗದೀಶ್ ಅವರು ತಕ್ಷಣ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕೆಎಸ್‌ಆರ್ಟಿಸಿ ಬಸ್ ಉಡುಪಿ ಜಿಲ್ಲೆಯಾದ್ಯಂತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಇಲ್ಲಿನ ನಾಗರಿಕರ ಒತ್ತಾಯವಾಗಿದೆ.
ಕೇವಲ ರಾಜಕೀಯ ನಾಯಕರ ದಾಳವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸದ ಜಿಲ್ಲಾಧಿಕಾರಿಯವರು, ಜನಸಾಮಾನ್ಯರ ಆಳಲನ್ನು ಕೇಳಿಸಿಕೊಂಡು ಕರ್ತವ್ಯ ನಿರ್ವಹಿಸುವರೇ ಎನ್ನುವುದು ಜನ ಸಾಮಾನ್ಯರ ಆಶಯವಾಗಿದೆ. ಸದ್ಯ ಸಾರಿಗೆ ಸಚಿವರ ಅಂಗಳದಲ್ಲಿ ಚೆಂಡು ಇದೆ. ಇವರೂ ಕೂಡ ಖಾಸಗಿ ಬಸ್ ಮಾಲಕರ ಲಾಬಿಗೆ ಮಣಿಯುತ್ತಾರಾ? ಎಂದು ಖಾದು ನೋಡಬೇಕು.