ಉಡುಪಿ: ಲಾಕ್ ಡೌನ್ ಬಿಗಿಗಾಗಿ ಖುದ್ದು ರಸ್ತೆಗಿಳಿದ ಡಿಸಿ-ಎಸ್ಪಿ
ಉಡುಪಿ: ಜಿಲ್ಲೆಯಲ್ಲಿ ಲಾಕ್ ಡೌನ್ ಆರಂಭದದ ದಿನಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಿದ ಜನರು, ನಿಧಾನವಾಗಿ ಉಲ್ಲಂಘಿಸಲು ಪ್ರಾಂಭಿಸಿದಕ್ಕೆ ಖುದ್ದು ಡಿಸಿ ಜಿ.ಜಗದೀಶ್ ಮತ್ತು ಎಸ್ಪಿ ಎನ್.ವಿಷ್ಣುವರ್ಧನ್ ಶುಕ್ರವಾರ ಸಂಜೆ ನಗರದಲ್ಲಿ ಸಿಟಿ ರೌಂಡ್ ನಡೆಸಿದರು.
ಕಲ್ಸಂಕ ರಸ್ತೆಯಲ್ಲಿ ಕಾಲ್ನಡಿಗೆ ಮಾಡಿದ ಇಬ್ಬರು ಅಧಿಕಾರಿಗಳು ರಸ್ತೆಯಲ್ಲಿ ಓಡಾಡುತಿದ್ದ ವಾಹನ ಸವಾರರನ್ನು ನಿಲ್ಲಿಸಿ ತರಾಟೆಗೆ ತೆಗೆದುಕೊಂಡರು. ಪಾಸ್ ಇಲ್ಲದೇ, ತಿರುಗಾಡುತ್ತಿದ್ದ ಹತ್ತಾರು ವಾಹನಗಳನ್ನು ಸ್ಥಳದಲ್ಲಿಯೇ ಜಫ್ತು ಮಾಡಿ, ಅವುಗಳನ್ನು ಲಾಕ್ ಔಟ್ ಮುಗಿದ ಮೇಲೆ ಕೋರ್ಟಿನಿಂದ ಬಿಡಿಸಿಕೊಂಡು ಹೋಗುವಂತೆ ನಿರ್ದಾಕ್ಷಿಣವಾಗಿ ಹೇಳಿದರು.
ರಸ್ತೆಯ ಪಕ್ಕ ವಾಕಿಂಗ್ ಮಾಡುತ್ತಿದ್ದವರಿಗೂ ಎಚ್ಚರಿಕೆ ನೀಡಿ ಕಳುಹಿಸಿದರು. ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಕಡಿಮೆಯಾಗುತ್ತಿದೆ, ಸಂತೋಷದ ಸಂಗತಿ, ಆದರೇ ಅದೇ ಕಾರಣಕ್ಕೆ ಮೈಮರೆಯುವಂತಿಲ್ಲ, ಜನರು ಪರಿಸ್ಥಿತಿಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದು ಡಿಸಿ ಜಿ.ಜಗದೀಶ್ ಹೇಳಿದರು. ಎಎಸ್ಪಿ ಕುಮಾರಚಂದ್ರ, ಡಿವೈಎಸ್‌ಪಿ ಜೈಶಂಕರ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮುಂತಾದವರಿದ್ದರು.