ಉಡುಪಿ ಬಿಗ್‌ಬಜಾರ್ ಗೆ ಡಿಸಿ ದಿಢೀರ್ ದಾಳಿ: ವ್ಯವಸ್ಥಾಪಕನ ವಶಕ್ಕೆ ಪಡೆಯಲು ಆದೇಶ
ಉಡುಪಿ:(ಉಡುಪಿ ಟೈಮ್ಸ್ ವರದಿ)ಸರಕಾರಿ ಆದೇಶ ಉಲ್ಲಂಘಿಸಿದ ಬಿಗ್‌ಬಜಾರ್ ವ್ಯವಸ್ಥಾಪಕನ್ನು ಸ್ಥಳದಲ್ಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾಧಿಕಾರಿ ಖಡಕ್ ಆದೇಶ ಮಾಡಿದ್ದಾರೆ. ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯದಲ್ಲಿ ನಿನ್ನೆ ರಾತ್ರಿಯಿಂದ ಲಾಕ್ ಡೌನ್ ಆದೇಶ ಹೊರಡಿಸಲಾಗಿತ್ತು, ಆದರೆ ದಿನ ನಿತ್ಯದ ಬಳಕೆ ವಸ್ತುಗಳ ಮಾರಾಟಕ್ಕೆ ಸರಕಾರ ಕೆಲವೊಂದು ಷರತ್ತುಗಳನ್ನು ವಿಧಿಸಿ ಮಾಲ್ ಗಳನ್ನು ತೆರೆಯಲು ಸೂಚಿಸಿತ್ತು.
ಜಿಲ್ಲಾಧಿಕಾರಿ ಜಿ.ಜಗದೀಶ್ ಗೆ ಕೆಲವೊಂದು ಮಾಲ್‌ಗಳು ನಿಬಂಧನೆ ಉಲ್ಲಂಘಿಸಿ ಕಾರ್ಯಚರಿಸುತ್ತಿರುವ ದೂರು ಬಂದಿತ್ತು. ಈ ಬಗ್ಗೆ ಪರಿಶೀಲಿಸಲು ಖುದ್ದು ಉಡುಪಿ ಬಿಗ್ ಬಜಾರ್‌ಗೆ ದಿಡೀರ್ ದಾಳಿ ಮಾಡಿದಾಗ ಮಾಲ್ ಸಂಪೂರ್ಣ ಹವಾನಿಯಂತ್ರಿತವಾಗಿತ್ತು. ಇದರಿಂದ ಕೆಂಡಮಂಡಲವಾದ ಡಿಸಿಯವರು ಅಲ್ಲೆ ಇದ್ದ ವ್ಯವಸ್ಥಾಪಕನ್ನು ತರಾಟೆಗೆ ತೆಗೆದುಕೊಂಡರು, ಮಾತ್ರವಲ್ಲದೆ ಸರಕಾರ ಆದೇಶವನ್ನು ಪಾಲನೆ ಮಾಡದೇ ನಿರಂತರ ತಮಗೆ ಇಷ್ಟದಂತೆ ವರ್ತಿಸುತ್ತಿರಿ, ತಕ್ಷಣ ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್ ಅವರಲ್ಲಿ ವ್ಯವಸ್ಥಾಪಕನ ವಿರುದ್ದ ದೂರು ದಾಖಲು ಮಾಡುವಂತೆ ಆದೇಶಿಸಿದರು.
ಮತ್ತೂ ಮುಂದುವರಿದ ಡಿಸಿ ಅವರಿಗೆ ಕಾದಿತ್ತು ಮತ್ತೊಂದು ಶಾಕ್ ಅದು ತರಕಾರಿ ಬೆಲೆಯನ್ನು ಮೂರು ಪಟ್ಟು ಹೆಚ್ಚಳ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ . ಬಿನ್ಸ್ ಬೆಲೆ ಉಡುಪಿ ಮಾರುಕಟ್ಟೆಯಲ್ಲಿ 49 ರೂ. ಇದ್ದದ್ದನ್ನು ಮೊದಲೇ ತಿಳಿದಿದ್ದ ಡಿಸಿಯವರು ಬಿಗ್ ಬಜಾರ್ ದರದ ಲಿಸ್ಟ್ ನೋಡಿ ದಂಗಾದರು. ಅಲ್ಲಿ 145 ರೂ. ನೋಡಿ ಮಾಲ್ ನವರು ಖರೀದಿಸಿದ ಬಿಲ್ ತರಲು ಹೇಳಿದರು. ಆಗ ವ್ಯವಸ್ಥಾಪಕ ಗರಬಡಿದಂತೆ ನಿಂತಿದ್ದನೇ ಹೊರತು ತಾವು ಖರೀದಿಸಿದ ಬಿಲ್ ತೋರಿಸಿಲ್ಲ. ನಂತರ ಈ ಬಗ್ಗೆ ಕೇಸ್ ದಾಖಲಿಸಿ ವರದಿ ನೀಡುವಂತೆ ತಹಶಿಲ್ದಾರ್‌ಗೆ ಸೂಚನೆ ನೀಡಿದರು.
Good luck. God bless you and your team.