ಉಡುಪಿ: ಮತ್ತೆ 5 ಜನರಿಗೆ ಶಂಕಿತ ಕೊರೋನ ವೈರಸ್
ಉಡುಪಿ: ಇಂದು ಮತ್ತೆ 5 ಜನ ಶಂಕಿತ ಕೊರೋನ ವೈರಸ್ ಹರಡಿರುವ ಸಂದೇಹದಲ್ಲಿ ಐಸೋಲೇಟೆಡ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದರಲ್ಲಿ ಮೂವರು ದುಬೈನಿಂದ ಉಡುಪಿಗೆ ಬಂದವರು, ಮತ್ತಿಬ್ಬರು ಕುವೈಟ್ ಮತ್ತು ಕತಾರ್ ನಿಂದ ಬಂದವರೆಂದು ಜಿಲ್ಲಾ ಆರೋಗ್ಯಧಿಕಾರಿ ತಿಳಿಸಿದ್ದಾರೆ.
ಇನ್ನೋರ್ವರು ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಸುದ್ದಿ ಹಬ್ಬಿಸಲಾಗಿದೆಂದು ಜಿಲ್ಲಾ ಆರೋಗ್ಯಧಿಕಾರಿ ತಿಳಿಸಿದ್ದಾರೆ ,
5 ರೋಗಿಗಳ ಗಂಟಲು ದ್ರವ, ರಕ್ತಗಳನ್ನು ಪರೀಕ್ಷೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಲಾಗಿದೆಂದು ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಐವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ನಿನ್ನೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾದ ದುಬೈನಿಂದ ಬಂದ ಗರ್ಭಿಣಿ ಮಹಿಳೆಯ ವೈದ್ಯಕೀಯ ವರದಿ ಬಂದಿಲ್ಲ, ಒಟ್ಟು ಆರು ಮಂದಿಯ ವರದಿ ಬುಧವಾರ ಬರಲಿದೆ ಎಂದರು.