ದುಬೈನಿಂದ ಬಂದ ಉಡುಪಿ ವೃದ್ದೆಗೆ‌ ಮಂಗಳೂರಿನಲ್ಲಿ ಕೊರೋನಾ ಪಾಸಿಟಿವ್

ಉಡುಪಿ: ಮಂಗಳೂರು ಇಎಸ್ಐ ಆಸ್ಪತ್ರೆಗೆ ದಾಖಲಾಗಿದ್ದ ಉಡುಪಿ ಜಿಲ್ಲೆಯ ವೃದ್ದೆಗೆ‌ ಶನಿವಾರ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 4ಕ್ಕೆ ಏರಿದೆ.

ಸೋಂಕಿತರನ್ನು P142 ಎಂದು ಹೇಳಲಾಗಿದ್ದು ಅವರು 63 ವರ್ಷ ಪ್ರಾಯದ ವೃದ್ದೆಯಾಗಿದ್ದಾರೆ. ಇವರು ದುಬೈನಿಂದ ಮಾ.22 ರಂದು ಭಾರತಕ್ಕೆ ಬಂದಿದ್ದರು.

ಕಳೆದ ಕೆಲ ದಿನಗಳ‌ ಹಿಂದೆ ಉಡುಪಿಯಲ್ಲಿ 3 ಕರೋನ ಪಾಸಿಟಿವ್ ಪ್ರಕರಣ ಇದ್ದಿದ್ದು ವೃದ್ದೆಯ ವೈದ್ಯಕೀಯ ವರದಿ ಪಾಸಿಟಿವ್ ಬಂದ ಹಿನ್ನೆಲೆ ಕರೋನಾ ಸೋಂಕಿತರ ಸಂಖ್ಯೆ 4 ಆಗಿದೆ. ಸದ್ಯ ವೃದ್ದೆ ಮಂಗಳೂರು ಇಎಸ್ಐ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!