ಉಡುಪಿ:ಮೂವರಿಗೆ ಶಂಕಿತ ಕೊರೋನ ವೈರಸ್ ಚಿಕಿತ್ಸೆ ಮುಂದುವರಿಕೆ, ಮಹಿಳೆಗಿಲ್ಲ ರೋಗ ಲಕ್ಷಣ

ಉಡುಪಿ: ನಾಲ್ವರಲ್ಲಿ ಮೂವರಿಗೆ ಮಾತ್ರ ಶಂಕಿತ ಕೊರೋನ ವೈರಸ್ ಚಿಕಿತ್ಸೆ ಮುಂದುವರೆದಿದೆ. ಚೀನದಲ್ಲಿ ನೆಲೆಸಿದ್ದ ಬ್ರಹ್ಮಾವರ ತಾಲೂಕಿನ ಕುಟುಂಬ ಕಳೆದ ಹದಿನೈದು ದಿನಗಳ ಹಿಂದೆ ಭಾರತಕ್ಕೆ ಮರಳಿದ್ದು ಸಾಮಾನ್ಯ ಜ್ವರ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ಮಗು ಮತ್ತು ತಂದೆಗೆ ಮಾತ್ರ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ಮಾಡಲಾಗಿತ್ತು. ಮಹಿಳೆಗೆ ಯಾವುದೆ ಶಂಕಿತ ಕೊರೋನ ವೈರಸ್‌ಗೆ ಸಂಬಂಧಿಸಿ ಲಕ್ಷಣ ಇರಲಿಲ್ಲ.  ಮಗು ಜತೆಗಿರಬೇಕು ಎಂಬ ಕಾರಣಕ್ಕೆ ವಾರ್ಡ್‌ನಲ್ಲಿದ್ದರು. ಇದೀಗ ಅವರನ್ನು ಮನೆಗೆ ಕಳಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.

ಕಾಪು ತಾಲೂಕಿನ ಯುವಕನಿಗೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. 4 ವರ್ಷದ ಮಗು ಸೇರಿದಂತೆ ಮೂವರ ಆರೋಗ್ಯ ಸ್ಥಿತಿ ಸಮಾನ್ಯವಾಗಿದೆ. ಮಂಗಳವಾರ ವೈದ್ಯಕೀಯ ಪರೀಕ್ಷಾ ವರದಿ ಬರಬಹುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

Leave a Reply

Your email address will not be published. Required fields are marked *

error: Content is protected !!