ಉಡುಪಿ: ಸೆಕ್ಷನ್ 144(3) ಮುಂದುವರಿಕೆ,ಜಿಲ್ಲೆಯಲ್ಲಿ ಯಾವುದಕ್ಕೆ ನಿಷೇಧ ಇಲ್ಲಿದೆ ವಿವರ
ಉಡುಪಿ :ಜಿಲ್ಲೆಯಾದ್ಯಂತ ಸೆಕ್ಷನ್ 144(3) ಮುಂದುವರಿಕೆ- ಜಿಲ್ಲಾಧಿಕಾರಿ ಜಿ.ಜಗದೀಶ್
ಏಪ್ರಿಲ್ 16 (ಕರ್ನಾಟಕ ವಾರ್ತೆ) ಕೋವಿಡ್ -19 (ಕೋರೊನ ವೈರಾಣು ಕಾಯಿಲೆ 2019)ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ದೇಶಾದ್ಯಂತ ಲಾಕ್ ಡೌನ್ ಅನ್ನು ದಿನಾಂಕ:03.05.2020 ರವರೆಗೆ
ವಿಸ್ತರಿಸಲಾಗಿದೆ.
ಅದರಂತೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 (ಕೋರೊನ ವೈರಾಣು ಕಾಯಿಲೆ 2019) ರ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲವೊಂದು ನಿರ್ಬ0ದನೆಗಳನ್ನು ವಿಧಿಸುವದು ಅತಿ ಅವಶ್ಯಕವೆಂದು
ಸಾರ್ವಜನಿಕ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೆ , ಸಿಆರ್‌ಪಿಸಿ ಸೆಕ್ಷನ್ 144(3) ಅಡಿಯಲ್ಲಿ ನಿಷೇದಾಜ್ಞೆ ವಿಧಿಸಿ, ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ. ಈ ಅವಧಿಯಲ್ಲಿ ,
1) ಜಿಲ್ಲೆಯಾದ್ಯಂತ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಉತ್ಸವ/ಜಾತ್ರೆಗಳಲ್ಲಿ ಕೇವಲ ಧಾರ್ಮಿಕ ಕೇಂದ್ರಗಳ ಸಿಬ್ಬಂದಿ ಮಾತ್ರ ಭಾಗವಹಿಸುವಂತೆ ಸೂಚಿಸಿದೆ, ಉತ್ಸವಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದೆ.
2) ಬೇಸಿಗೆ ಶಿಬಿರ, ಸಮಾರಂಭಗಳು , ವಿಚಾರ ಸಂರ್ಕಿಣಗಳು, ಕ್ರೀಡಾಕೂಟಗಳು, ಮತ್ತಿತರ ಯಾವುದೇ ಒಂದಡೆ ಜನ ಸೇರುವ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಆದೇಶಿಸಿದೆ.
3) ಬೀಚ್‌ಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ.
4) ಮದುವೆ/ ನಿಶ್ಚಿತಾರ್ಥ ಸಮಾರಂಭಗಳನ್ನು ಜನಸಂದಣಿಗೆ ಅವಕಾಶ ನೀಡದೆ ಅತಿ ಸರಳವಾಗಿ ಆಯೋಜಿಸಲು ಸೂಚಿಸಿದೆ.
5) ವಾರದ ಸಂತೆಗಳನ್ನು ನಿರ್ಬಂಧಿಸಿದೆ.
6) ಸಿನೇಮಾ ಮಂದಿರಗಳು, ಮಾಲ್ ಗಳು, ನಾಟಕಗಳು, ಯಕ್ಷಗಾನಗಳು, ರಂಗಮAದಿರಗಳು, ಪಬ್ ಗಳು, ಕ್ಲಬ್ ಗಳು,ಹಾಗು ನೈಟ್ ಕ್ಲಬ್ ಗಳನ್ನು ತೆರೆಯತಕ್ಕದ್ದಲ್ಲ.
7) ವಸ್ತು ಪ್ರದರ್ಶನಗಳು, ಸಂಗೀತ ಹಬ್ಬಗಳು, ಮ್ಯಾರಾಥಾನ್ ಇತ್ಯಾದಿಗಳನ್ನು ನಡೆಸುವಂತಿಲ್ಲ.
8) ಹೆಚ್ಚಾಗಿ ಜನರು ಬಳಸುವ ಸ್ವಿಮ್ಮಿಂಗ್ ಫೂಲ್, ಜಿಮ್, ಫಿಟ್ನೆಸ್ ಸೆಂಟರ್, ಉದ್ಯಾನವನ, ಇತ್ಯಾದಿಗಳನ್ನು ಮುಚ್ಚುವುದು.
9) ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ವಾಣಿಜ್ಯ ಶಾಲೆಗಳನ್ನು , ಟ್ಯುಟೋರಿಯಲ್ಸ್ ಮತ್ತು ಕೋಚಿಂಗ್ ಸೆಂಟರ್ ಗಳನ್ನು ಬಂದ್ ಮಾಡಲಾಗಿದ್ದು , ಅವುಗಳನ್ನು ತೆರೆಯತಕ್ಕದ್ದಲ್ಲ.
10) ಎಲ್ಲಾ ಮಸೀದಿಗಳಲ್ಲಿ ದೈನಂದಿನ ಪ್ರಾರ್ಥನೆಗಳನ್ನು(ಶುಕ್ರವಾರದ ಜುಮ್ಮಾ ಫ್ರಾರ್ಥನೆ ಸೇರಿದಂತೆ) ನಿರ್ಬಂಧಿಸಲಾಗಿದೆ.
11) ರೆಸ್ಟೋರೆಂಟ್ / ಉಪಾಹಾರ ಗೃಹ/ ಹೋಟೆಲ್ / ಊಟ /ಉಪಹಾರ ಮಾಡುವುದನ್ನು ನಿಷೇದಿಸಲಾಗಿದೆ. ಅಡುಗೆ ಮನೆಗಳು ತೆರೆದಿದ್ದು,ನಿಗದಿತ ಅವಧಿಯಲ್ಲಿ ಗ್ರಾಹಕರು ಆಹಾರವನ್ನು ಖರೀದಿಸಿ ಕೇವಲ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ.
12) ಹವಾ ನಿಯಂತ್ರಿತ ವ್ಯವಸ್ಥೆಯುಳ್ಳ ಬಟ್ಟೆ ಅಂಗಡಿಗಳು , ಚಿನ್ನಾಭರಣ ಮಳಿಗೆಗಳು, ಎಲೆಕ್ಟ್ರಾನಿಕ್ ಮಳಿಗೆಗಳು, ಮತ್ತಿತರ ಮಳಿಗೆಗಳನ್ನು ತೆರೆಯತಕ್ಕದ್ದಲ್ಲ.
13) ಸಾರ್ವಜನಿಕ ಬಸ್ಸ್ ಸಾರಿಗೆಯನ್ನು ನಿರ್ಭಂಧಿಸಲಾಗಿದೆ.
14) ಸಾರ್ವಜನಿಕ ಟ್ಯಾಕ್ಸಿ / ಆಟೋ ಸಾರಿಗೆ ನಿರ್ಬಂಧಿಸಲಾಗಿದೆ( ತುರ್ತು ಸಂದರ್ಭ ಹೊರತುಪಡಿಸಿ)
15) ಸಾರ್ವಜನಿಕರಿಗೆ ತುರ್ತು ವೈಧ್ಯಕೀಯ ಕಾರಣಗಳನ್ನು ಹೊರತು ಪಡಿಸಿ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ಪ್ರಯಾಣವನ್ನು ನಿರ್ಬಂಧಿಸಿದೆ..
16) ಮಾರ್ಗಸೂಚಿಯಂತೆ ಅನುಮತಿಸಲಾದ ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ , ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿದೆ.
17) ಎಲ್ಲಾ ರಾಜಕೀಯ / ಸಾಮಾಜಿಕ /ಕ್ರೀಡಾ/ ಮನೋರಂಜನಾ/ಶೈಕ್ಷಣಿಕ /ಸಾಂಸೃತಿಕ ಮತ್ತು ದಾರ್ಮಿಕ ಮತ್ತು ಇತರ ಜನಸೇರುವ ಕಾರ್ಯಕ್ರಮಗಳನ್ನು ನಿರ್ಬಂಧಿಸಿದೆ.
18) ಎಲ್ಲಾ ಧಾರ್ಮಿಕ / ಪೂಜಾ ಸ್ಥಳಗಳಿಗೆ ಸಾರ್ವಜನಿಕ ಪ್ರವೇಶವನ್ನು ಹಾಗೂ ಧಾರ್ಮಿಕವಾಗಿ ಜನರ ಒಟ್ಟು ಗೂಡುವಿಕೆಯನ್ನು ನಿರ್ಬಂಧಿಸಿದೆ.
ಪಿ.ಜಿ ಮತ್ತು ವಸತಿ ನಿಲಯಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳು
1) ಪಿ.ಜಿ ಮತ್ತು ವಸತಿ ನಿಲಯಗಳಲ್ಲಿ ವಾಸಿಸುವ ವಿದ್ಯಾರ್ಥಿ /ವಿದ್ಯಾರ್ಥಿನಿಯರನ್ನು ಯಾವುದೇ ಕಾರಣಕ್ಕೆ ಪಿ.ಜಿ ಮತ್ತು ವಸತಿ ನಿಲಯಗಳಿಂದ ಹೊರಕ್ಕೆ ಕಳುಹಿಸಲು ಅವಕಾಶ ಇಲ್ಲ . ಅವರಿಗೆ ವಸತಿ/ ಉಟೋಪಚಾರದ ವ್ಯವಸ್ಥೆಯನ್ನು ಮುಂದುವರಿಸಿಕೊoಡು ಹೋಗತಕ್ಕದ್ದು. ಪಿ.ಜಿ / ವಸತಿ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಅವರಿಗೆ ವಸತಿ / ಉಟೋಪಚಾರದ ವ್ಯವಸ್ಥೆ ಮಾಡದೆ ಇರುವಂತಿಲ್ಲ.
2) ಪಿಜಿ ಹಾಗೂ ವಸತಿ ನಿಲಯಗಳ ಮಾಲಿಕರು / ವ್ಯವಸ್ಥಾಪಕರು ಕರ್ನಾಟಕ ಸರಕಾರವು ನೀಡಿರುವ ಸಲಹೆಗಳಂತೆ ವೈಯಕ್ತಿಕ ಸ್ವಚ್ಚತೆಗಳ ಬಗ್ಗೆ ಮನವರಿಕೆ ಮಾಡಿಕೊಂಡು ಪಾಲಿಸತಕ್ಕದ್ದು.
3) ನಿಯತಕಾಲಿಕವಾಗಿ ಪಿ.ಜಿ. ವಸತಿ ನಿಲಯಗಳಲ್ಲಿ ನೈರ್ಮಲ್ಯತೆ ಹಾಗೂ ಸ್ವಚ್ಚತೆಯನ್ನು ಕಾಪಾಡುವುದು ಪಿ.ಜಿ. ವಸತಿ ನಿಲಯಗಳ ಮಾಲಿಕರ / ವ್ಯವಸ್ಥಾಪಕರ ಜವಾಬ್ದಾರಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.
ಇದು ಮಾಡಿದ್ದು ಕರೆಕ್ಟ್. ಆದ್ರೆ ಬೇರೆ ಊರಿನಲ್ಲಿ ಕೆಲವು ಮಕ್ಕಳು ತನ್ನ ಊರಿಗೆ ಸೇರುಬೇಕಂತ ಆಸೆ ಯಲ್ಲಿದ್ದಾರೆ ಅವರನ್ನ ಚೆಕ್ ಮಾಡಿ ಕಳಿಸಿ ಕೊಡಬೊಹುದಲ್ಲವೇ
ಇದು ಮಾಡಿದ್ದು ಕರೆಕ್ಟ್. ಆದ್ರೆ ಬೇರೆ ಊರಿನಲ್ಲಿ ಕೆಲವು ಮಕ್ಕಳು ತನ್ನ ಊರಿಗೆ ಸೇರುಬೇಕಂತ ಆಸೆ ಯಲ್ಲಿದ್ದಾರೆ ಅವರನ್ನ ಚೆಕ್ ಮಾಡಿ ಕಳಿಸಿ ಕೊಡಬೊಹುದಲ್ಲವೇ.
Can any body clarify point number 16, which are the industries comes under this category and can be functioned. Is Ayurvedic medicine manufacturing unit situated at Village limit is permitted to run as per this guidelines. Further to get information whom should be contacted.
Please give information
With regards
Dr Yathiraja K