ಉಡುಪಿ: ಸಿಟಿ ಬಸ್ ಸಂಪೂರ್ಣ ಬಂದ್, ಸರ್ವಿಸ್ ಅಂಶಿಕ ಸಂಚಾರ

ಉಡುಪಿ:(ಉಡುಪಿ ಟೈಮ್ಸ್ ವರದಿ) ನಗರದಲ್ಲಿ ಇಂದೂ ಕೂಡ ಸಿಟಿ ಬಸ್ ರಸ್ತೆಗೆ ಇಳಿಯಲಿಲ್ಲ ಹಾಗೂ ಹೆಚ್ಚಿನ ಸರ್ವಿಸ್ ಕೂಡ ಬಸ್ ಸ್ಥಗಿತಗೊಳಿಸಿದ ಪರಿಣಾಮ ಇಂದು ಮತ್ತೆ ಉಡುಪಿಯಲ್ಲಿ ಅಂಶಿಕ ಜನತಾ ಕರ್ಫ್ಯೂ ಮುಂದುವರಿದ ಲಕ್ಷಣ ಕಾಣಿಸುತ್ತಿದೆ.

ರವಿವಾರದಂತೆ ಉಡುಪಿ ಸಿಟಿ ಬಸ್ ನಿಲ್ದಾಣ ಸೋಮವಾರ ಕೂಡ ಬೀಕೋ ಏನಿಸುತ್ತಿದೆ. ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ಬಂದವರು ಬಸ್ ಇಲ್ಲದೆ ಪರದಾಡುವಂತೆ ಆಗಿದೆ. ಹೆಚ್ಚಿನ ಸರ್ವಿಸ್ ಬಸ್ ರಸ್ತೆಗೆ ಇಳಿಯಲಿಲ್ಲ, ಕುಂದಾಪುರ, ಕಾರ್ಕಳ, ಕಾಪು ಕಡೆಗೆ ಹೋಗುವ ಕೆಲವೊಂದು ಬಸ್‌ಗಳು ಸಂಚರಿಸುತ್ತಿದೆ. ಮಂಗಳೂರಿಗೆ ತೆರಳುವ ಬಸ್ ಗಳು ಸಂಪೂರ್ಣ ಸ್ಥಗಿತವಾಗಿದೆ. ಬೆಳಗ್ಗೆ ಕೆಲವೊಂದು ಬಸ್ ಹೆಜಮಾಡಿ ವರೆಗೆ ಹೋಗಿದ್ದಾಗಿ ಪ್ರಯಾಣಿಕರೊರ್ವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!