ಮುಂಬಾಯಿ ಬಾರ್ ಮಾಲಕನ ಹತ್ಯೆಯಲ್ಲಿ ಉಡುಪಿಯ ಬಸ್ ಮಾಲಕನ ಕೈವಾಡ?
ಉಡುಪಿ: ಮುಂಬಾಯಿಯ ಲೇಡಿಸ್ ಬಾರ್ ಮಾಲಕನ ಹತ್ಯೆಯಲ್ಲಿ ಉಡುಪಿಯ ಬಸ್ ಮಾಲಕನ ಕೈವಾಡವಿದ್ದು, ಕೊಲೆಯಲ್ಲಿ ಭಾಗಿಯಾದ ನಾಲ್ವರನ್ನು ಹಿರಿಯಡ್ಕ ಪೊಲೀಸರು ವಶಕ್ಕೆ ಪಡೆದು ತೀವೃ ವಿಚಾರಣೆಗೆ ಒಳಪಡಿಸಿದ್ದಾರೆ.
ಈಗಾಗಲೇ ಕೊಲೆ ಮತ್ತು ಹಲವಾರು ಕೊಲೆ ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾದ ಉಡುಪಿಯ ಬಸ್ ಮಾಲಕ ಮುಂಬಾಯಿಯ ವಶಿಷ್ಠ ಯಾದವ್ ಜೊತೆ ಸೇರಿಕೊಂಡು ನವಿಮುಂಬಾಯಿಯ ಮಾಯಾ ಲೇಡಿಸ್ ಬಾರ್‌ನ ಪಾಲುದಾರಿಕೆ ಪಡೆದಿದ್ದ. ಇದರ ಹಣಕಾಸಿನ ವಿಚಾರವಾಗಿ ಮಾಲಕ ವಶಿಷ್ಠನನ್ನು ಉಡುಪಿಗೆ ಕಳೆದ ಹದಿನೈದು ದಿನಗಳ ಹಿಂದೆ ಕರೆಸಿಕೊಂಡ ಬಸ್ ಮಾಲಕ ಯಾವುದೇ ಸುಳಿವು ಸಿಗದ ರೀತಿಯಲ್ಲಿ ಭಾನುವಾರ ಕೊಲೆಗೈದು ಬೆಳ್ಳಂಪಳ್ಳಿಯ ರಸ್ತೆ ಬದಿಯ ಪೊದೆಗೆ ಎಸೆದು ಹೋಗಿದ್ದಾರೆಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಮಣಿಪಾಲದ ಐಷಾರಾಮಿ ಹೋಟೆಲ್‌ನಲ್ಲಿ ಉಳಿದುಕೊಂಡ ವಶಿಷ್ಠ ಭಾನುವಾರ ರಾತ್ರಿ ಹೋಟೆಲ್‌ನ ಬಾಡಿಗೆ ಕಾರಿನಲ್ಲಿ ಆತ್ರಾಡಿ ಕಡೆ ಹೋಗಿದ್ದ ಸಿಸಿಟಿವಿ ದೃಶ್ಯವಳಿ ಪೊಲೀಸರ ಕೈಗೆ ಸಿಕ್ಕದ್ದು, ಅದರ ಜಾಡು ಹಿಡಿದು ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರೆನ್ನಲಾಗಿದೆ. ಕಾರಿನಲ್ಲಿ ಹೋಗುತ್ತ ಕೇಬಲ್ ವಯರ್ ನಲ್ಲಿ ವಶಿಷ್ಠನ ಕುತ್ತಿಗೆ ಬೀಗಿದು ಹತ್ಯೆ ಮಾಡಲಾಗಿದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಕೃತ್ಯದಲ್ಲಿ ಕೊಲೆಯ ಪ್ರಮುಖ ಆರೋಪಿ ದೆಹಲಿ ಜಗಜಿತ್ ನಗರ ನ್ಯೂಸ್ ಹುಸಮನ್ ಪುರ ನಿವಾಸಿ ಸುಮಿತ್ ಮಿಶ್ರ್ (23)-ಈತ ಮಾಯ ಬಾರನ ಉದ್ಯೋಗಿಯಾಗಿದ್ದು. ಮೂರು ತಿಂಗಳು ಹಿಂದೆ ಕೊಲೆಯಾದ ವಶಿಷ್ಟರೊಂದಿಗೆ ಜಗಳವಾಡಿ ಕೆಲಸ ಬಿಟ್ಟಿದ್ದ. ಸುರತ್ಕಲ್ ಚೋಕ್ಕಬೆಟ್ಟು ನಿವಾಸಿ ಅಬ್ದುಲ್ ಶುಕೂರ್ @ ಅದ್ದು (35), ಮಂಗಳೂರು ತೆಂಕಮಿಜಾರು ಕಂದಾಲಬೆಟ್ಟು ನಿವಾಸಿ ಅವಿನಾಶ್ ಕರ್ಕೆರಾ ( 25), ಉಡುಪಿ ಶಿವಳ್ಳಿ ಕುಂಜಿಬೆಟ್ಟು ನಿವಾಸಿ ಮೊಹಮ್ಮದ್ ಶರೀಪ್ (32)- ಈ ಮೂವರು ಆರೋಪಿಗಳು ಉಡುಪಿ ಮೂಲದ ಎ.ಕೆ.ಎಮ್.ಎಸ್ ಬಸ್ ನಲ್ಲಿ ಉದ್ಯೋಗಿಗಳು.
ಹದಿನೈದು ದಿನಗಳಿಂದ ಉಡುಪಿಯಲ್ಲಿದ್ದ ವಶಿಷ್ಠ
ನನ್ನ ಗಂಡ ಸಾಮಾಜಿಕ,ರಾಜಕೀಯಾ ಜೀವನದಲ್ಲಿ ಗುರುತಿಸಿಕೊಂಡವರು, ವ್ಯವಹಾರ ಸಂಬಂಧ ಉಡುಪಿಗೆ ಕಳೆದ ಹದಿನೈದು ದಿನಗಳ ಹಿಂದೆ ಉಡುಪಿಗೆ ಬಂದಿದ್ದರು, ದಿನ ನಿತ್ಯ ದೂರವಾಣಿ ಮೂಲಕ ಮಾತನಾಡುತ್ತಿದ್ದ ನನ್ನ ಪತಿ ಫೆ. 9 ರಂದು ವಿಡಿಯೋ ಕಾಲ್ ಮಾಡಿದ್ದರು. ಆ ಸಂದರ್ಭ ಸೈಫ್ ಮತ್ತು ಅಕ್ರಮ ಎಂದು ಇಬ್ಬರು ವ್ಯವಹಾರದ ಪಾರ್ಟನರ್ ಎಂದು ವಿಡಿಯೋ ಕಾಲ್ ಮಾಡಿ ಪರಿಚಯ ಮಾಡಿಸಿದ್ದರು. ನಂತರ ಮಾತನಾಡುತ್ತ ನನ್ನ ಫೋನ್ ಸ್ವೀಚ್ ಆಫ್ ಆಗುತ್ತದೆ ನಾಳೆ ಮಾತನಾಡುತ್ತೇನೆಂದು ಹೇಳಿದ್ದರು. ಆ ನಂತರ ಫೋನ್ ಸಂಪರ್ಕಕ್ಕೆ ಸಿಗಲಿಲ್ಲವೆಂದು ಇಂದು ಮೃತ ದೇಹ ಕೊಂಡು ಹೋಗಲು ಆಗಮಿಸಿದ ವಶಿಷ್ಠ ಯಾದವ್‌ರ ಪತ್ನಿ ನೀತಾ ಯಾದವ್ ಮಾಧ್ಯಮಕ್ಕೆ ತಿಳಿಸಿದರು.
ಉಡುಪಿ ಎಸ್ಪಿ ವಿಷ್ಣುವರ್ಧನ, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಮತ್ತು ಉಡುಪಿ ಡಿವೈಎಸ್ಪಿ ಟಿ. ಜೈ ಶಂಕರ್ ಮಾರ್ಗದರ್ಶದಲ್ಲಿ ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ ಮತ್ತು ಹಿರಿಯಡ್ಕ ಪೊಲೀಸ್ ಠಾಣೆ ಉಪ ನಿರೀಕ್ಷಕ ಸುಧಾಕರ ತೋನ್ಸೆ, ಸಿಬ್ಬಂದಿಗಳಾದ ಎಎಸ್ಐ ಗಂಗಪ್ಪ, ಎಎಸ್ಐ ಜಯಂತ, ಸಿಬ್ಬಂದಿಗಳಾದ ಯಶವಂತ್ ,ಸದಾಶಿವ, ರಘು , ದಿನೇಶ್, ಇಂದ್ರೇಶ್, ಬಸವರಾಜ್, ನಿತೀನ್, ರಾಕೇಶ್ ಶೆಟ್ಟಿ, ಭೀಮಪ್ಪ , ಆನಂದ್ ಮೊದಲಾದವರು ಈ ಮಿಂಚಿನ ಕಾರ್ಯದಲ್ಲಿ ಇದ್ದರು