ಉಡುಪಿ: ವೇತನ ಪರಿಷ್ಕರಣೆ, ಸಮಾನ ಪಿಂಚಣಿಗಾಗಿ ಬ್ಯಾಂಕ್ ನೌಕರರ ಮುಷ್ಕರ

ಉಡುಪಿ: ವೇತನ ಪರಿಷ್ಕರಣೆ, ಸಮಾನ ಪಿಂಚಣಿ ಸಹಿತ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆಯ ಕರೆಕೊಟ್ಟ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಇಂದು ಬ್ಯಾಂಕ್ ನೌಕರರು ಮುಷ್ಕರ ನಡೆಸಿದರು.
ಉಡುಪಿ ಕೋರ್ಟ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಎದರು ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು.ಕೇಂದ್ರ ಸರಕಾರ ಬ್ಯಾಂಕ್‌ಗಳ ವಿಲೀನದ ತಪ್ಪು ನಿರ್ಧಾರ, ವೇತನ ಪರಿಷ್ಕರಣಾ ವಿಳಂಬ ನೀತಿಯನ್ನು ಪ್ರತಿಭನಾ ಸಭೆಯಲ್ಲಿ ತೀವೃವಾಗಿ ಖಂಡಿಸಲಾಯಿತು.


ಮುಷ್ಕರದಲ್ಲಿ ಸಂಘಟನೆಯ ಶಶಿಧರ್ ಶೆಟ್ಟಿ, ರವಿಶಂಕರ್, ಸುಪ್ರಿಯಾ, ನಾಗೇಶ್ ನಾಯಕ್, ರವೀಂದ್ರ ,ನಿತ್ಯಾನಂದ, ಬಾಲಗಂಗಾಧರ್ ರಾವ್ , ಜಿಲ್ಲಾ ಬ್ಯಾಂಕ್ ನೌಕರರ ಸಂಘದ ರಾಮಮೋಹನ್ , ವರದರಾಜ್, ಜಯನ್ ಮಲ್ಪೆ, ಹೇಮಂತ್ ಯು. ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!