ಉಡುಪಿ: ಮಹಿಳಾ ಠಾಣೆಯಲ್ಲಿ ಎಎಸ್ಸೈಗೆ ಹಲ್ಲೆಗೈದು, ಜೀವ ಬೆದರಿಕೆ
ಉಡುಪಿ: ಕರ್ತವ್ಯ ನಿರತ ಮಹಿಳಾ ಠಾಣಾ ಎಎಸ್ಸೈಗೆ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಸೋಮವಾರ ನಡೆದಿದೆ.
ಮಹಿಳಾ ಠಾಣಾ ಎಎಸೈ ಮುಕ್ತ ಬಾಯಿ ನಾಲ್ಕು ದಿನಗಳ ರಜೆಯನ್ನು ಮುಗಿಸಿ ಸೋಮವಾರ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು ಬೆಳಿಗ್ಗೆ 11.30 ಗಂಟೆ ಸಮಯಕ್ಕೆ ಕೊಡಂಕೂರಿನ ಉಷಾ ನಾಯ್ಕ್ ಠಾಣೆಗೆ ಬಂದು ಏಕಾಏಕಿ ಮುಕ್ತ ಬಾಯಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಯಾಕೆ ಈ ರೀತಿ ಮಾತನಾಡುವುದು ಎಂದು ಕೇಳಿದ್ದಕ್ಕೆ ಮುಕ್ತ ಬಾಯಿರವರನ್ನು ದೂಡಿ ಕೈಯಿಂದ ಎಡ ಕೆನ್ನಗೆ ಹೊಡೆದು, ಬಲ ಕೈಯನ್ನು ಎಳೆದು ಇನ್ನು ಹೊಡೆಯಲು ಬಂದಾಗ ಠಾಣೆಯಲ್ಲಿದ್ದ ಇತರ ಸಿಬ್ಬಂದಿಯವರು ತಡೆದಿದ್ದಾರೆ.ನಂತರ ಬೈದು ಠಾಣೆಯಲ್ಲಿದ್ದ ಇತರ ಸಂದರ್ಶಕರ ಎದುರು ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿ ಎಎಸೈಐ ಮುಕ್ತ ಮಹಿಳಾ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಈ ಹಿಂದೆ ಕೂಡ ಉಷಾ ನಾಯ್ಕ್ ಕೊಡಂಕೂರಿನಲ್ಲಿ ಇಲ್ಲಿನ ನಿವಾಸಿಗಳಿಗೆ ನಿರಂತರ ಕಿರುಕುಳ ನೀಡಿರುವ ಬಗ್ಗೆ ಹಾಗೂ ನಗರ ಸಭೆಯ ಎದುರು ಬಿಜೆಪಿ ಅಂದಿನ ಪೌರಾಯುಕ್ತ ಮಂಜುನಾಥಯ್ಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಾಗ ನಗರ ಸಭೆ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರಿಗೆ ,ನಾಯಕರಿಗೆ ನಿಂದಿಸಿ ಸುದ್ಧಿಯಾಗಿದ್ದಳು