ಉಡುಪಿ: ಆಶಾ ಕಾರ್ಯಕರ್ತರಿಗೆ ಕಿಟ್ ವಿತರಣೆ

ಉಡುಪಿ : ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತರಿಗೆ ಉಡುಪಿ ನಗರಸಭೆ ಸದಸ್ಯ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಕಿಟ್ ವಿತರಣೆ ನಡೆಯಿತು.


ಅಕ್ಕಿ, ಗೋಧಿ, ಬೇಳೆ, ಚಹಾ ಹುಡಿ ಬೆಲ್ಲ ಸೇರಿದಂತೆ ಒಟ್ಟು 9 ಬಗೆಯ ದಿನಸಿ ಇರುವ 35 ಕಿಟ್ ಗಳನ್ನು ತಾಲೂಕು ಆರೋಗ್ಯಾಧಿಕಾರಿ ನಾಗರತ್ನಾ ಅವರು ವಿತರಿಸಿ, ಲಾಕ್ ಡೌನ್ ಆರಂಭದಿಂದ ಇಲ್ಲಿಯವರೆಗೆ ಆಶಾಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಆರೋಗ್ಯ ವಿಚಾರಿಸುವ ಮೂಲಕ ತಮ್ಮ ಕರ್ತವ್ಯ ನಿಷ್ಠೆಯಿಂದ ನಿವರ್ಹಿಸುತ್ತಿದ್ದಾರೆ, ಇಂತಹವರನ್ನು ಗುರುತಿಸಿ ಅವರ ಕಷ್ಟಕ್ಕೂ ಸ್ಪಂದಿಸಿ ಆಹಾರ ಕಿಟ್‌ಗಳನ್ನು ನೀಡುತ್ತಿರುವುದು ಸಂತೋಷದ ವಿಚಾರ. ಇದು ಆಶಾ ಕಾರ್ಯಕರ್ತೆಯರ ಶ್ರಮವನ್ನು ಗೌರವಿಸಿದಂತೆ ಎಂದರು.

ಸರಕಾರದ ಯೋಜನೆಗಳನ್ನು ಮನೆ – ಮನೆಗೆ ತಲುಪಿಸುವ ಕೆಲಸವನ್ನು ಆಶಾ  ಕಾರ್ಯಕರ್ತರು ಮುತುವರ್ಜಿ ವಹಿಸಿ ಮಾಡುತ್ತಿದ್ದಾರೆ. ಇತರರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಇವರ ತಮ್ಮ ಜೀವನವೂ ಅನೇಕ ಕಷ್ಟದಲ್ಲಿದೆ.ಆದ್ದರಿಂದ  ನೆರವಿಗೆ ಬರುವುದು ಸೂಕ್ತವೆನಿಸಿತು.ಅಗತ್ಯ ವಸ್ತುಗಳನ್ನು ನೀಡಿದರೆ ಸ್ವಲ್ಪ ಸಹಕಾರ ಆಗುವ ಉದ್ದೇಶದಿಂದ ಕಿಟ್ ನೀಡಿದ್ದೇವೆ ಎಂದು ಬೈಲೂರು ನಗರಸಭೆಯ ಸದಸ್ಯ ರಮೇಶ್ ಕಾಂಚನ್ ತಿಳಿಸಿದರು.


ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ| ಹೇಮಂತ್, ವಾರ್ಡ್ನ ಪ್ರಮುಖರಾದ ಶೇಖರ್ ಶೆಟ್ಟಿ ಬನ್ನಂಜೆ, ಮಲ್ಲೇಶ್, ಅನಂತ ಕೃಷ್ಣ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!