ಉಡುಪಿ: ಬೈಕ್‌ನಲ್ಲಿ ಬಂದು ನೋಟ್ ಎಸೆದು ಹೋದ ಯುವಕ, ಮುಗಿ ಬಿದ್ದ ಜನತೆ!

ಉಡುಪಿ: ಈ ಕೊರೋನಾ ವೈರಸ್ ಟೆನ್ಷನ್ ನಡುವೆ ರಸ್ತೆಯುದ್ದಕ್ಕೂ ನೋಟ್ ನ್ನು ಎಸೆದು ಹೋದರೆ ಹೇಗಿರಬಹುದು! ಕೆಲಸವಿಲ್ಲದೆ ಕೈಯಲ್ಲಿ ಹಣ ತಿರುಗದ ಈ ಸಮಯದಲ್ಲಿ ರಸ್ತೆಯುದ್ದಕ್ಕೂ ನೋಟ್ ಸಿಕ್ಕರೆ ಆಚಿ ಈಚೆ ನೋಡದೆ ನೋಟನ್ನೇ ಹೆಕ್ಕುವುದು ಬಿಟ್ಟು ಬೇರೇನೂ ಯೋಚನೆ ಬರಲಿಕ್ಕಿಲ್ಲವಲ್ಲ.


ಹೌದು ಈ ರೀತಿ ನೋಟ್ ಎಸೆದು ಹೋದ ಘಟನೆ ಉಡುಪಿ ವಾದಿರಾಜ್ ಅಡ್ಡ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಬೈಕ್‌ನಲ್ಲಿ ಬಂದ ಮೂವತ್ತು ವರ್ಷದ ಯುವಕನೊರ್ವ 2000 ,500 ,200 ರೂ. ಮುಖಬೆಲೆಯ ನೋಟ್‌ಗಳನ್ನು ಎಸೆದು ಹೋಗಿದ್ದು, ಹೆಚ್ಚಿನವರು ನೋಟ್‌ನ್ನು ಹೆಕ್ಕುವುದರಲ್ಲಿ ಬ್ಯೂಸಿಯಾದರೆ ಕೆಲವರು ಆ ಯುವಕನನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಆದರೆ ಯುವಕ ಬೂತಓಣಿ ಕಡೆಯಿಂದ ಬೀಡಿನ ಗುಡ್ಡೆ ಕಡೆ ಓಡಿ ಹೋಗಿದ್ದಾನೆ.


ಸದ್ಯ ಉಡುಪಿ ನಗರ ಠಾಣಾ ಪೊಲೀಸರು ಯುವಕನ ಬಂಧನಕ್ಕೆ ಬಲೆ ಬೀಸಿದ್ದಾರೆ. ಕೆಲವೊಂದು ನೋಟ್ ನ್ನು ಪೊಲೀಸರಿಗೆ ಸ್ಥಳೀಯರು ನೀಡಿದ್ದು, ಯುವಕ ಎಸೆದು ಹೋದ ನೋಟ್ ನಕಲಿ ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!