ಉಡುಪಿ: ಮೈದಾನದಲ್ಲೇ ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ ಸಾವು

ಉಡುಪಿ: ರಾಜ್ಯಮಟ್ಟದ ಕ್ರಿಕೆಟ್ ಆಟಗಾರ ಪ್ರಶಾಂತ್ ಪಾಂಗಾಳ ಇಂದು ತುಮಕೂರುನಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪ್ರತಿಭಾವಂತ ಆಲ್‌ರೌಂಡರ್ ಕ್ರಿಕೆಟ್ ಆಟಗಾರನಾಗಿದ್ದ ಪ್ರಶಾಂತ್(32)ಯಾನೆ ಪಚ್ಚು ಪಾಂಗಾಳ ಟೆನ್ನಿಸ್ ಬಾಲ್ ಟೂರ್ನ್‌ಮೆಂಟ್‌ಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದರು.
ಅವಿಭಜಿತ ಜಿಲ್ಲೆಯಲ್ಲಿ ಅತೀ ಸಣ್ಣ ವಯಸ್ಸಿನಲ್ಲಿ ಕ್ರಿಕೆಟ್ ಪಂದ್ಯಾಟದಲ್ಲಿ ಸಾಕಷ್ಟು ಹೆಸರುಗಳಿಸಿದ್ದ ಪ್ರಶಾಂತ್, ತನ್ನ ಬ್ಯಾಟಿಂಗ್ ಮತ್ತು ಬೌಲಿಂಗ್‌ನ ವಿಶಿಷ್ಟ ಶೈಲಿಯಲ್ಲಿ ಹೆಸರುಗಳಿಸಿದ್ದರು.


ತನ್ನ ವಿಶಿಷ್ಟ ಶೈಲಿಯ ಬೌಲಿಂಗ್‌, ಬ್ಯಾಟಿಂಗ್‌ ಹಾಗೂ ಪೀಲ್ಡಿಂಗ್‌ ಮೂಲಕ ಆಲ್‌ ರಂಡರ್‌ ಆಟಗಾರನಾಗಿದ್ದ ಪ್ರಶಾಂತ್‌ ಶುಕ್ರವಾರದ ಪಂದ್ಯದಲ್ಲಿ ಸತತ 2 ಸಿಕ್ಸರ್‌ ಬಾರಿಸಿದ್ದರು. ಆ ಬಳಿಕ ಅವರು ನೀರು ಕುಡಿದಿದ್ದು ಮರುಕ್ಷಣದಲ್ಲೇ ಕುಸಿದು ಬಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಅಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಶಾಂತ್ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!