ಉಡುಪಿ: ಡೆತ್ ನೋಟ್ ಬರೆದಿಟ್ಟು ಪಿಪಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಉಡುಪಿ: ಪೂರ್ಣಪ್ರಜ್ಞಾ ಕಾಲೇಜ್‌ನ ಪ್ರತಿಭಾನ್ವಿತ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ನಗರದ ಹೊರವಲಯದ ಬೀಡಿನಗುಡ್ಡೆ ಪಿಜಿ ಸೆಂಟರ್ನಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಉಳಿದುಕೊಂಡಿದ್ದ ವೀಕ್ಷಿತಾ(೨೦) ತಾನು ಪ್ರೀತಿಸುತ್ತಿದ್ದ ಯುವಕ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ವಿದ್ಯಾರ್ಥಿನಿಯ ಊರಾದ ತೀಥಹಳ್ಳಿಯ ಬಾಳಗಾರು ನಿವಾಸಿ ಪರಿಚಯದ ಕಿರಣ ಎಂಬಾತ ಈಕೆಯನ್ನು ಪ್ರೀತಿಸುತ್ತಿದ್ದು, ನಿರಂತರ ಕಿರುಕುಳ ನೀಡುತ್ತಿದ್ದ ಮಾತ್ರವಲ್ಲದೆ ಪಿಜಿ ಸೆಂಟರ್ ಗೂ ಬಂದು ಗಲಾಟೆ ಮಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೊಲೀಸರ ಹೇಳಿಕೆಯಲ್ಲಿ ಗೊಂದಲ?
ಯುವಕನ ಕಿರುಕುಳವ ಅಥವಾ ಬೇರೆ ಏನೋ ಕಾರಣ ಇದೆಯೇ ಎಂಬ ಸಂಶಯ ಸಾರ್ವಜನಿಕರಲ್ಲಿದೆ. ಯುವಕ ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡಿದ್ದು ಆಕೆಯನ್ನು ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ, ಆಕೆಯೂ ಕಿರಣ್‌ನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು. ತನ್ನ ರೂಮ್‌ನಲ್ಲಿದ್ದ ಗೆಳತಿಯರು ಪರ್ಯಾಯ ಮೆರವಣಿಗೆ ವೀಕ್ಷಿಸಲು ಕರೆದರೂ ಬಾರದೆ ಒಬ್ಬಂಟಿಯಾಗಿ ಕೋಣೆಯಲ್ಲಿ ಬಾಗಿಲು ಹಾಕಿ ಇದ್ದಳು. ಗೆಳತಿಯರು ಮೆರವಣಿಗೆ ನೋಡಿ ಹಿಂದಕ್ಕೆ ಬಂದ ಸಮಯ ವೀಕ್ಷೀತಾ ಎಚ್ಚರವಿದ್ದು, ಒಬ್ಬಂಟಿಯಾಗಿ ಇರಬೇಕು ಎಂದು ಹೇಳಿ ತನ್ನ ರೂಮ್‌ನ ಬಾಗಿಲು ಹಾಕಿ ಮಲಗಿದ್ದಳು.

ಬೆಳಗ್ಗೆ ಬಾಗಿಲು ತೆರೆಯದ್ದನ್ನು ಕಂಡು ಕಿಟಕಿಯಲ್ಲಿ ನೋಡಿದಾಗ ವೀಕ್ಷೀತಾ ಆತ್ಮತ್ಯೆಗೆ ಶರಣಗಿದ್ದಳು. ವಿದ್ಯಾರ್ಥಿನಿಗೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆಯಡಿ ಕಿರಣ್ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!