ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕೋತ್ಸವ
ಉಡುಪಿ: ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕೋತ್ಸವ ಸಂಘದ ವಾರ್ಷಿಕೋತ್ಸವ ಸಮಾರಂಭ ಉಡುಪಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅಧ್ಯಕ್ಷರಾದ ಕಿಶೋರ್ ಆಚಾರ್ಯ ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಎಸ್ ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಸೊಸೈಟಿಯ ಅಧ್ಯಕ್ಷ ಪಿ ಉಪೇಂದ್ರ ಆಚಾರ್ಯ, ಸಂಘದ ಗೌರವ ಅಧ್ಯಕ್ಷ ಅಲೆವೂರು ಸುಂದರ ಆಚಾರ್ಯ, ಉಪಾಧ್ಯಕ್ಷ ಟಿ ಜಿ ಪ್ರಭಾಕರ ಆಚಾರ್ಯ, ಕಾರ್ಯದರ್ಶಿ ಪ್ರಶಾಂತ ಆಚಾರ್ಯ ನೇಜಾರು,ಕಾನೂನು ಸಲಹೆಗಾರ ಗಂಗಾಧರ ಹೆಚ್ ಎಮ್
ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಹೆಚ್ ರತ್ನಾಕರ ಆಚಾರ್ಯ, ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾಗಿ ರಾಜೇಶ್ ಆಚಾರ್ಯ, ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕಿಶೋರ್ ಆಚಾರ್ಯ,ನೂತನ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಳಿ, ನೂತನ ಗೌರವ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ಚಿನ್ನಬೆಳ್ಳಿ ಕುಶಲಕರ್ಮಿಗಳಾದ ಶ್ಯಾಮರಾಯ ಆಚಾರ್ಯ ಹಾಗೂ ಶ್ರೀನಿವಾಸ ಶೇಟ್, ಸಮಾಜ ಸೇವಕ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ಕ್ರೀಡಾಪಟು ಶಶಾಂಕ್ ಆಚಾರ್ಯ ಇವರುಗಳನ್ನು ಸನ್ಮಾನಿಸಲಾಯಿತು.
17 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂದರ್ಭದಲ್ಲಿ ಅಲೆವೂರು ಸುಂದರ ಆಚಾರ್ಯ ಹಾಗೂ ಕಿಶೋರ್ ಆಚಾರ್ಯ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.