ಉಡುಪಿ: ರೈಲಿನಲ್ಲಿ ಅಕ್ರಮವಾಗಿ 1.633 ಕೆ.ಜಿ ಚಿನ್ನ ಸಾಗಾಟ, 3 ಬಂಧನ
ಉಡುಪಿ: ರೈಲಿನಲ್ಲಿ ಅಕ್ರಮವಾಗಿ ಚಿನ್ನಾಭರಣ ಸಾಗಿಸುತ್ತಿದ್ದ 3 ಬಂಧನ, ಆರೋಪಿಗಳಿಂದ 1.633 ಕೆ.ಜಿ. ಚಿನ್ನಾಭರಣ ವಶಕ್ಕೆ .
ಮಂಗಳವಾರ ಉಡುಪಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಅನ್ವಯ ಕುಂದಾಫುರ, ಬೈಂದೂರು ಹಾಗೂ ಭಟ್ಕಳ ರೈಲು ನಿಲ್ದಾಣದಲ್ಲಿ ಕಾದು ಕುಳಿತ ಪೊಲೀಸರಿಗೆ ಬೈಂದೂರು ರೈಲು ನಿಲ್ದಾಣದಲ್ಲಿ ಇಳಿದ ಮಹಮ್ಮದ್ ಇಸ್ಮಾಯಿಲ್ ಭಟ್ಕಳ ಎಂಬಾತನಿಂದ 253.022 ಗ್ರಾಂ ತೂಕದ ಚಿನ್ನದ ಕಾಯಿನ್ ಮತ್ತು ಆಭರಣಗಳನ್ನು, ಭಟ್ಕಳ ರೈಲು ನಿಲ್ದಾಣದಲ್ಲಿ ಇಳಿದ ರಾಹೀಫ್ ಭಟ್ಕಳ ಎಂಬಾತನಿಂದ 1.166 ಕಿಲೋ ಗ್ರಾಮ್ ತೂಕದ ಚಿನ್ನದ ಬಿಸ್ಕೆಟ್ ಮತ್ತು ಸಯ್ಯದ್ ಉಮೈರ್ ಭಟ್ಕಳ ಎಂಬಾತನಿಂದ 213 ಗ್ರಾಂ ತೂಕದ ಚಿನ್ನದ ಕಾಯಿನ್ ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಶಪಡಿಸಿಕೊಳ್ಳಲಾದ ಚಿನ್ನದ ಒಟ್ಟು ತೂಕ 1.633ಕಿಲೋ ಗ್ರಾಮ್ ಆಗಿದ್ದು, ಅಂದಾಜು ಮೌಲ್ಯ 61,47,756/- ರೂಪಾಯಿಗಳಾಗಿರುತ್ತದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಂತೆ, ಕಾರ್ಯಚರಣೆಯಲ್ಲಿ ಭಟ್ಕಳ ಸಹಾಯಕ ಪೊಲೀಸ್ ಅಧೀಕ್ಷಕರಾದ ನಿಖಿಲ್ (ಐಪಿಎಸ್), ಮತ್ತು ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ (ಐಪಿಎಸ್), ಸುರೇಶ ನಾಯಕ್ ಸಿ.ಪಿ.ಐ ಬೈಂದೂರು ಮತ್ತು ಮಂಜುನಾಥ, ಸಿ.ಪಿ.ಐ. ಉಡುಪಿ, ಹರೀಶ್ ಆರ್, ಪಿ.ಎಸ್.ಐ. ಕುಂದಾಪುರ, ಪಿ.ಎಸ್.ಐ. ಭಟ್ಕಳ, ಪಿ.ಎಸ್.ಐ ಕುಮಟಾ, ಸುದರ್ಶನ್ ಪಿ.ಎಸ್.ಐ. (ಪ್ರೊಬೇಷನರಿ) ಮತ್ತು ಕುಂದಾಪುರ ಉಪವಿಭಾಗದ ಅಪರಾಧ ವಿಭಾಗದ ತಂಡದ ಸಿಬ್ಬಂದಿಯವರಾದ ಮೋಹನ್, ಸಂತೋಷ್ ಕೊರವಡಿ, ಸಂತೋಷ್ ಹೊನ್ನಾಳ, ಸಂತೋಷ್ ಕುಮಾರ್, ವಿಜಯ ಕುಮಾರ್, ಮಂಜುನಾಥ, ಅವಿನಾಶ್, ಕೃಷ್ಣ, ಪ್ರಿನ್ಸ್, ಚಂದ್ರಶೇಖರ, ಚೇತನ್, ಶಂಕರ್, ಶಾಂತರಾಮ್, ರವಿ, ಪ್ರಾಣೇಶ್ ಮತ್ತು ಸಲಿಂವುಲ್ಲಾ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.