ಕೋವಿಡ್ ನ ಹೊಡೆತದಿಂದ ಹೊರಬರಲು ಸಾಧ್ಯವಾಗದ ಜನರಿಗೆ ವಿದ್ಯುತ್ ದರ ಏರಿಕೆ ಮತ್ತೊಂದು ಶಾಕ್: ವೆರೋನಿಕಾ

ಉಡುಪಿ: ಕೋವಿಡ್ ನ ದೊಡ್ಡ ಹೊಡೆತದಿಂದ ಹೊರಬರಲು ಕಷ್ಟಪಡುತ್ತಿರುವ ಬಡಜನರ ಮೇಲೆ ರಾಜ್ಯ ಸರಕಾರದ ವಿದ್ಯುತ್ ದರ ಏರಿಕೆ ಇನ್ನೊಂದು ಹೊಡೆತವಾಗಿದ್ದು ಜನಸಾಮಾನ್ಯರನ್ನು ಕಂಗೆಡುವಂತೆ ಮಾಡಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.ಈಗಾಗಲೇ ಅನೇಕ ತಿಂಗಳುಗಳಿಂದ ಕೆಲಸವಿಲ್ಲದೆ ಮೂರು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಈ ಸಂದರ್ಭದಲ್ಲಿ ಸರಕಾದ ಬೆಲೆ ಏರಿಕೆಯ ವಿಚಾರಗಳು ಜನರನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಅತೀ ಕಡಿಮೆಯಾಗಿ ಬ್ಯಾರಲಿಗೆ 38 ಡಾಲರಿದೆ ( ಮನಮೋಹನ್ ಸಿಂಗ್ ಸರಕಾರದ ಸಂದರ್ಭದಲ್ಲಿ ಅದು 150 ಡಾಲರಿಗೆ ತಲುಪಿತ್ತು)ಆದರೂ ಬೆಲೆ ಏರಿಕೆ ನಡೆಯುತ್ತಿದೆ.

ನೀರುಳ್ಳಿಯ ಬೆಲೆ ಮಾರುಕಟ್ಟಯಲ್ಲಿ 100 ರೂಪಾಯಿಗಿಂತಲೂ ಅಧಿಕವಾಗಿದ್ದರೂ ಮೋದಿ ಸರಕಾರ ಮೌನ ವಹಿಸಿದೆ.ಬ್ಯಾಂಕುಗಳಲ್ಲಿ ಇಷ್ಟು ವರ್ಷ ವ್ಯವಹಾರಗಳಿಗೆ ಯಾವುದೇ ಶುಲ್ಕವಿರಲಿಲ್ಲ ಆದರೆ ಬಿಜೆಪ ನೇತೃತ್ವದ ಮೋದಿ ಸರಕಾರ ಅದಕ್ಕೂ ಶುಲ್ಕ ವಿಧಿಸಲು ಆರಂಭಿಸಿದೆ. ಕಾರ್ಮಿಕರಿಂದ ವಸೂಲಿ ಮಾಡಿದ ಇ ಎಸ್ ಐ ಹಣವನ್ನು ಆಸ್ಪತ್ರೆಗಳಿಗೆ ಪಾವತಿಸದೆ ಕಾರ್ಮಿಕರನ್ನು ವಂಚನೆ ಮಾಡುತ್ತಿದೆ.

ಇಡೀ ದೇಶದಲ್ಲಿ ಅನೇಕ ಯುವಕರು ಮಹಿಳೆಯರು, ಕೂಲಿ ಕಾರ್ಮಿಕರು ಕೆಲಸವನ್ನು ಕಳೆದುಕೊಂಡು ಮನೆಯಲ್ಲಿದ್ದಾರೆ. ಇನ್ನೊಂದೆಡೆ ಈಗಾಗಲೇ ಮಾಡಿದ ಬ್ಯಾಂಕ್ ಸಾಲವನ್ನು ಮರು ಪಾವತಿಸುವ ಬಗ್ಗೆ ಚಿಂತಿತರಾಗಿದ್ದಾರೆ.

ಅನೇಕ ಉದ್ಯಮಗಳು ಮುಚ್ಚಿಹೋಗಿದ್ದು ಉದ್ಯಮಿಗಳು ಸಮಸ್ಯೆ ಅನುಭವಿಸುತ್ತಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸಾಂತ್ವಾನ ಹೇಳಿ ಧ್ಯೇರ್ಯ ತುಂಬಬೇಕಾದ ಸರಕಾರ, ಶಾಸಕರು, ಮಂತ್ರಿಗಳು ಜನರಿಂದ ಹಣವನ್ನು ದೋಚಿ ತನ್ನ ಜೇಬುಗಳನ್ನು ತುಂಬಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಕಷ್ಟದಲ್ಲಿ ತತ್ತಿರಿಸಿರುವ ಜನರ ಮೇಲೆ ನಡೆಯುತ್ತಿರುವ ಈ ದಬ್ಬಾಳೀಕೆ ಹಾಗೂ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ವಿದ್ಯುತ್ ದರ ಏರಿಕೆಯ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!