ಕುಂದಾಪುರ: ಖಾಸಗಿ ಕಂಪೆನಿಯ ಉದ್ಯೋಗಿ ನೇಣಿಗೆ ಶರಣು
ಕುಂದಾಪುರ, ಎ.11(ಉಡುಪಿ ಟೈಮ್ಸ್ ವರದಿ) : ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಕೋಟೇಶ್ವರದ ಸುಜಯ್ ಪೂಜಾರಿ ಎಂಬ ಯುವಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಸುಜಯ್ ಪೂಜಾರಿ(21) ಅವರು ಕೋಟೇಶ್ವರದ ಮನೆಯಲ್ಲಿ ವರ್ಕ್ ಫ್ರಂ ಹೋಂ ನಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಸುಜಯ್ ಪೂಜಾರಿ ಅವರು ಹೊರಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ವಾಪಾಸು ಬಾರದೇ ಇದ್ದಾಗ ಮನೆಯವರು ಅವರನ್ನು ಹುಡುಕಿದ್ದಾರೆ. ಈ ವೇಳೆ ಕೋಣಿ ಗ್ರಾಮದ ಮೇಲ್ಕಟ್ಕೇರೆ ಅಂಗನವಾಡಿ ಸಮೀಪದ ಖಾಸಗಿ ಹಾಡಿಯಲ್ಲಿ ಸುಜಯ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವುದು ತಿಳಿದು ಬಂದಿದೆ.
ಅದರಂತೆ ಸುಜಯ್ ಪೂಜಾರಿಯವರು ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಅಣ್ಣಾ ಸಂಜಯ್ ಪೂಜಾರಿ ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.