ಮಂಗಳೂರು: ರಸ್ತೆಗಳ ಅಭಿವೃದ್ದಿಗೆ 42ಕೋಟಿ ರೂ.ಅನುದಾನ ಬಿಡುಗಡೆ- ಸಂಸದ ಕ್ಯಾ. ಚೌಟ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಟ್ಟು 42 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕ್ಯಾ.ಚೌಟ ಅವರು, ಕೇಂದ್ರ ಸರ್ಕಾರವು, ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ(CRIF) ಅಡಿ ಈ ಅನುದಾನ ನೀಡಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 74.30 ಕಿಲೋ ಮೀಟರ್ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಎಲ್ಲಾ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ 42 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಇದೇ ವೇಳೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಯಾವೆಲ್ಲಾ ರಸ್ತೆಗಳ ಅಭಿವೃದ್ದಿ ಕಾಮಗಾರಿ
ಮಂಗಳೂರು ತಾಲೂಕು ವ್ಯಾಪ್ತಿಯ ಮಾಣಿ-ಉಳ್ಳಾಲ ರಾಜ್ಯ ಹೆದ್ದಾರಿಯಲ್ಲಿ5.7 ಕಿ.ಮೀ ರಸ್ತೆ ನವೀಕರಣಕ್ಕೆ 3.42 ಕೋ.ರೂ.;
ಉಚ್ಚಿಲ-ದೇರಳಕಟ್ಟೆ ಜಿಲ್ಲಾ ರಸ್ತೆಯ 1 ಕಿ.ಮೀ. ನವೀಕರಣಕ್ಕೆ 60 ಲಕ್ಷ ರೂ.;
ಪೆರ್ಮನ್ನೂರು-ಪಾವೂರು ರಸ್ತೆ 1.1 ಕಿ.ಮೀ. ನವೀಕರಣಕ್ಕೆ66 ಲಕ್ಷ ರೂ.;
ಕೋಟೆಕಾರು – ಪಾತೂರು 2.2 ಕಿ.ಮೀ ರಸ್ತೆಗೆ
1.32 ಕೋ.ರೂ
ರಾಜ್ಯ ಹೆದ್ದಾರಿ 64ರ ಕಡೂರು-ಕಾಞಂಗಾಡ್ 2.25ಕಿ.ಮೀ. ರಸ್ತೆಗೆ 1.35 ಕೋ.ರೂ.
ಬಂಟ್ವಾಳ ವ್ಯಾಪ್ತಿಯಲ್ಲಿ ಸುರತ್ಕಲ್ -ಕಬಕ 3.33 ಕಿ.ಮೀ. ರಸ್ತೆ ಕಾಮಗಾರಿಗೆ 2 ಕೋ.ರೂ
ಪಾಣೆಮಂಗಳೂರು-ಪಾತೂರು 3.2 ಕಿ.ಮೀ ರಸ್ತೆಗೆ 1.92 ಕೋ.ರೂ.
ಮಾರಿಪಳ್ಳ-ಕಲ್ಪನೆ 1.22 ಕಿ.ಮೀ. ರಸ್ತೆಗೆ 73 ಲ.ರೂ.
ನಿಂತಿಕಲ್ಲು-ಬೆಳ್ಳಾರೆ-ನೆಟ್ಟಾರು 6.2 ಕಿ.ಮೀ. ರಸ್ತೆ ಮೇಲ್ದರ್ಜೆಗೇರಿಸಲು 3.72 ಕೋ.ರೂ.
ಸುಳ್ಯ-ಪೈಚಾರು-ಬೆಳ್ಳಾರೆ 3.8 ಕಿಮೀ ರಸ್ತೆ ಮೇಲ್ದರ್ಜೆಗೇರಿಸಲು 2.28 ಕೋ.ರೂ.
ರಾಜ್ಯ ಹೆದ್ದಾರಿ ಸುಬ್ರಹ್ಮಣ್ಯ-ಮಂಜೇಶ್ವರದ 5.2 ಕಿಮೀ ರಸ್ತೆಗೆ 3.12ಕೋ.ರೂ.
ಪುತ್ತೂರು ತಾಲೂಕಿನ ನಿಂತಿಕಲ್ಲು-ಬೆಳ್ಳಾರೆ-ನೆಟ್ಟಾರು-ಅಮ್ಚಿನಡ್ಕ-ಕಾವು-ಈಶ್ವರಮಂಗಲ-ಪಲ್ಲತ್ತಾರು ರಾಜ್ಯ ಹೆದ್ದಾರಿಯಿಂದ ಜಿಲ್ಲಾರಸ್ತೆಗೆ ಸಂಪರ್ಕದ 4.8 ಕಿ.ಮೀ ರಸ್ತೆ ಕಾಮಗಾರಿಗೆ 2.88 ಕೋ.ರೂ.
ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ-ಉಪ್ಪಿನಂಗಡಿ 10 ಕಿಮೀ ರಸ್ತೆ ಕಾಮಗಾರಿಗಳಿಗೆ 6 ಕೋ.ರೂ.
ಮಂಗಳೂರು ತಾಲೂಕಿನ ಪುನರೂರು-ಶಾಂತಿಪಲ್ಕೆ-ದಾಮಸ್ಕಟ್ಟೆಯ 11.7 ಕಿ.ಮೀ.ರಸ್ತೆ ನವೀಕರಣಕ್ಕೆ 6 ಕೋ.ರೂ
ಮಂಗಳೂರು ತಾಲೂಕಿನ ಭಟ್ರಕೆರೆ-ಕತ್ತಲ್ಸರ್ -ಕುಕ್ಕುದಕಟ್ಟೆ-
ನೀರ್ಕೆರೆ-ತೋಡಾರು -ಮಾಸ್ತಿಕಟ್ಟೆ 6.1 ಕಿ.ಮೀ. ಜಿಲ್ಲಾ ರಸ್ತೆಗೆ 3ಕೋ.ರೂ.
ಸಂಪಿಗೆ-ಅಶ್ವಥಪುರ -ನೀರ್ಕೆರೆ –
ಮಿಜಾರು 6.5ಕಿ.ಮೀ. ಜಿಲ್ಲಾ ರಸ್ತೆ ಅಭಿವೃದ್ದಿಗೆ 3ಕೋ.ರೂ.