ಕೋವಿಡ್ ಲಸಿಕೆ ಎಂದು ಪೋಲಿಯೋ ಔಷಧಿ ಕಳ್ಳತನ!
ಬೆಳಗಾವಿ ಮೇ.7: ರೆಮ್‍ಡಿಸಿವಿರ್ ಕೋವಿಡ್ ಲಸಿಕೆ ಎಂದು ಕಳ್ಳರು ಪೋಲಿಯೋ ಔಷಧಿ ಕಳ್ಳತನ ಮಾಡಿರುವ ಘಟನೆ ಬೆಳಗಾವಿಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಗೆ ನುಗ್ಗಿದ ಕಳ್ಳರು , ಔಷಧಿಗಳನ್ನೂ ಕದಿಯಲು ಆರಂಭಿಸಿದ್ದರು ಈ ವೇಳೆ ರೆಮ್‍ಡಿಸಿವಿರ್ ಎಂದು ಭಾವಿಸಿ ಪೋಲಿಯೋ ಇಂಜೆಕ್ಷನ್ ಕದ್ದಿದ್ದಾರೆ. ಪೋಲಿಯೋ ಔಷಧಿ ಎಂದು ಗೊತ್ತಾಗಿ ಸಂಗಮೇಶ್ವರ್ ನಗರದ ಬಳಿಯ ರಸ್ತೆಯಲ್ಲೇ ಔಷಧಿ ಎಸೆದು ಖದೀಮರು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.