ಮಂಗಳೂರಿನಲ್ಲಿ ಮತ್ತೆ ಎರಡು ಕೊರೋನಾ ಪಾಸಿಟಿವ್ ಪತ್ತೆ
ಉಡುಪಿ – (ಉಡುಪಿ ಟೈಮ್ಸ್ ವರದಿ )- ದಕ್ಷಿಣ ಕನ್ನಡ ಜನತೆಗೆ ಮತ್ತೆ ಕೊರೋನಾ ದುಃಸ್ವಪ್ನವಾಗಿದೆ ಜಿಲ್ಲೆಯಲ್ಲಿ ೨ ಕೊರೋನಾ ಪಾಸಿಟಿವ್ ಕೇಸುಗಳು ಇಂದು ಪತ್ತೆಯಾಗಿದೆ. ಆತಂಕಕಾರಿಯಾದ ವಿಚಾರವೆಂದರೆ ಈ ಎರಡು ಕೇಸುಗಳು ಫಸ್ಟ್ ನ್ಯೂರೋ ಆಸ್ಪತ್ರೆಯ ನಂಟು ಹೊಂದಿದ್ದು ಆಘಾತಕಾರಿಯಾಗಿದೆ.
ಬಂಟ್ವಾಳ ದ ನಿವಾಸಿ 69 ವರ್ಷದ ವೃದ್ಧ ಮತ್ತು ಬೋಳೂರು ಗ್ರಾಮದ 62 ವರ್ಷದ ವೃದ್ಧನಿಗೆ ಸೋಂಕು ತಗುಲಿರುವುದು ದೃಢವಾಗಿದ್ದು . ಬಂಟ್ವಾಳದ 69 ವರ್ಷದ ವೃದ್ಧ ಏ.19 ರಂದು ಕೊರೊನಾಕ್ಕೆ ಬಲಿಯಾದ ಮಹಿಳೆಯ ಸಂಬಂಧಿ ಹಾಗೂ ನೆರೆಮನೆಯವರಾಗಿದ್ದಾರೆ. ರೋಗಿ ಸಂಖ್ಯೆ ಪೇಶಂಟ್ -309 ದ್ವಿತೀಯ ಸಂಪರ್ಕದಿಂದ ವೃದ್ದನಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
62 ವರ್ಷದ ವೃದ್ದ ಬೋಳಾರ ನಿವಾಸಿ ಗುರುವಾರವಷ್ಟೇ ಪಾಸಿಟಿವ್ ಆದ ವೃದ್ದೆ ಪತಿ ಎಂದು ತಿಳಿದುಬಂದಿದೆ. ಇವರಿಬ್ಬರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.