ಕೋಮುಸೂಕ್ಷ್ಮ ಪ್ರದೇಶವಾದ ಮಂಗಳೂರಿನಲ್ಲಿ ಗಲಭೆ ನಡೆಸಲು ಹುನ್ನಾರ
ಮಂಗಳೂರು: ನ್ಯಾಯಾಲದಿಂದ ಬೀಡಿಸಿಕೊಂಡು ಹೋದ ಗೋವುಗಳನ್ನು ಪಟಾಕಿ ಸಿಡಿಸಿ ಮೆರವಣಿಗೆ ಮಾಡಿಕೊಂಡು ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೋಮುಸೂಕ್ಷ್ಮ ಪ್ರದೇಶವಾದ ಮಂಗಳೂರಿನಲ್ಲಿ ಗಲಭೆ ನಡೆಸಲು ಹುನ್ನಾರ.
ಘಟನೆಯ ವಿವರ:
ಕಳೆದ ಜೂನ್ 4 ರಂದು ಪಣಂಬೂರೂ ಠಾಣಾ ವ್ಯಾಪ್ತಿಯ ಜೋಕಟ್ಟೆಯ ಬಳಿ ೨೩ ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೂಡಿಹಾಕಿದ ಮಹಿತಿ ಪಡೆದ ಪಣಂಬೂರು ಪೊಲೀಸರು ದಾಳಿ ನಡೆಸಿ ಮಹಮ್ಮದ್ ಹನೀಫ್ ಸಹಿತ ಹಲವು ಆರೋಪಿಗಳನ್ನು ಬಂಧಿಸಿದ್ದರು, ಈ ಸಂದರ್ಭ ವಶಪಡಿಸಿಕೊಂಡ ಗೋವುಗಳನ್ನು ಗೋವನಿತಾಶ್ರಮ ಗೋಶಾಲೆಯ ಅಧೀನಕ್ಕೆ ನೀಡಲಾಗಿತ್ತು.
ನಿನ್ನೆ ನ್ಯಾಯಾಲದ ಆದೇಶದಂತೆ ಜೋಕಟ್ಟೆಯ 23 ದನಗಳನ್ನು ಬೀಡಿಸಿಕೊಂಡು ಹೋಗುವ ಸಂಧರ್ಭ ಜನರನ್ನು ಸೇರಿಸಿ ,ಪಟಾಕಿ ಸಿಡಿಸಿ ,ಅದರ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಕೋಮುಪ್ರಚೋದನೆ ಸೃಷ್ಠಿಸಲು ಹುನ್ನಾರ ನಡೆಸಿದರವ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ವಿಶ್ವಹಿಂದು ಪರಿಷತ್ತು ಜಿಲ್ಲಾ ಪೊಲೀಸ್ ಕಮೀಷನರ್ ಮನವಿ ಮಾಡಿದೆ.
ಸುಳ್ಳು ದಾಖಲೆ ಸೃಷ್ಠಿಸಿ ನ್ಯಾಯಾಲಯದಿಂದ ಕೊಂಡುಹೋದ ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಕೊಂಡುಹೋಗುತ್ತಿರಬಹುದು ಎಂದು ವಿಶ್ವಹಿಂದು ಪರಿಷತ್ತು ಸಂಶಯ ವ್ಯಕ್ತಪಡಿಸಿದ್ದು ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಮಾತ್ರವಲ್ಲದೆ ಸಂಭ್ರಮಾಚಾರಣೆಯ ವಿಡಿಯೋವನ್ನು ನ್ಯಾಯಾಲದ ಗಮನಕ್ಕೆ ತಂದು ಗೋವುಗಳನ್ನು ಹಿಂದಕ್ಕೆ ಪಡೆದು, ಸಮಾಜದ ಸ್ವಾಸ್ಥ್ಯಕೆಡೆಸಲು ಯತ್ನಿಸಿದ ಇವರ ವಿರುದ್ಧ ಸೂಕ್ತಕಾನೂನುಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದು ಪರಿಷತ್ತಿನ ಅಧ್ಯಕ್ಷ ಗೋಪಾಲ ಕುತ್ತಾರ್ ,ಗೋರಕ್ಷಕ ಪ್ರಮುಖ್ ಜಗದೀಶ ಶೇಣವ, ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ .