ತ್ರಿವಳಿ ತಲಾಖ್ ನಿಷೇಧದಿಂದ ಮಹಿಳೆಯರ ಶೋಷಣೆಗೆ ಕಡಿವಾಣ : ರಹೀಂ ಉಚ್ಚಿಲ್
ಉಡುಪಿ: ವಿವಾಹಿತ ಮಹಿಳೆಯರಿಗಾಗುತ್ತಿದ್ದ ಶೋಷಣೆಗೆ ತ್ರಿವಳಿ ತಲಾಖ್ ಕಾಯ್ದೆ ನಿಷೇಧ ಜಾರಿಯಿಂದ ಕಡಿವಾಣ ಬಿದ್ದಿದೆ ಎಂದು ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ರಹೀಂ ಉಚ್ಚಿಲ್ ಹೇಳಿದ್ದಾರೆ. ಅವರು ಜಮ್ಮು ಕಾಶ್ಮೀರಕ್ಕಿದ್ದ 370, 35ಎ ವಿಧಿ ರದ್ದು ಹಾಗೂ ತ್ರಿವಳಿ ತಲಾಖ್ ಕಾನೂನು ತಿದ್ದುಪಡಿ, ಅಲ್ಲಿನ ಈಗೀನ ಪರಿಸ್ಥಿತಿ ಕುರಿತು ಬಿಜೆಪಿ ನಗರ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದಲ್ಲಿ
ಕಡಿಯಾಳಿ ಬಿಜೆಪಿ ಜಿಲ್ಲಾ ಕಛೇರಿಯ ನಡೆದ ಕಾರ್ಯಕರ್ತರ ಸಮಾವೇಶ ಮುಸ್ಲಿಂ ಮತ್ತು ಅವಲೋಕನ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಸಹಿತ ಪ್ರತಿ ಪಕ್ಷಗಳಿಂದ ಮುಸ್ಲಿಂ ಮನಸ್ಸು, ಹೃದಯದಲ್ಲಿ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ಜಮ್ಮು ಕಾಶ್ಮೀರಕ್ಕೆ 70 ವರ್ಷಗಳಿಂದ ಇದ್ದ ವಿಶೇಷಾಧಿಕಾರ ರದ್ದಿನಿಂದ ಒಕ್ಕೂಟ ವ್ಯವಸ್ಥೆಯೊಳಗೆ ಸಮಾನತೆಯ ಅವಕಾಶ ದೊರೆತಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಬಿಜೆಪಿ ಗೆಲುವು ನಲ್ಲಿ ಅಲ್ಪಸಂಖ್ಯಾತರ ಕೊಡುಗೆಯಿದೆ. ಹಿಂದುತ್ವ ಧರ್ಮವಲ್ಲ, ಅದೊಂದು ಜೀವನದ ಪದ್ದತಿ.ಬಿಜೆಪಿ ಆಡಳಿತದಲ್ಲಿ ದೇಶದ ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದರೆ ಎಂದರು.
ಸಮಾರಂಭದಲ್ಲಿ ಶಾಸಕ ರಘುಪತಿ ಭಟ್, ನಗರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಪ್ರಭಾಕರ ಪೂಜಾರಿ, ಯುವಮೋರ್ಚ ಜಿಲಾಧ್ಯಕ್ಷ ಶ್ರೀಶ ನಾಯಕ್, ರಜನಿ ಹೆಬ್ಬಾರ್ ಉಪಸ್ಥಿತರಿದ್ದರು. ಜುನೈದ್ ಸ್ವಾಗತಿಸಿ, ಮಂಜುನಾಥ್ ನಿರೂಪಿಸಿ,ಜಗದೀಶ ಆಚಾರ್ಯ ಧನ್ಯವಾದಗೈದರು.