ಭಟ್ಕಳದ ಕೊರೋನಾ ಸೋಂಕಿತೆ ಗರ್ಭಿಣಿಗೆ ಉಡುಪಿಯಲ್ಲಿ ಚಿಕಿತ್ಸೆ
ಉಡುಪಿ: ಭಟ್ಕಳದ ಕೊರೋನಾ ಪಾಸಿಟಿವ್ ಸೋಂಕಿತೆ 26 ವರ್ಷದ ಗರ್ಭಿಣಿಯೊರ್ವರನ್ನು ಉಡುಪಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಜಿಲ್ಲೆಯ
ಮೂವರು ಕೊರೋನಾ ಸೋಂಕಿತರಿಗೆ ಚಿಕಿತ್ಸೆಯನ್ನು ಉಡುಪಿಯ ಡಾ.ಟಿ.ಎಮ್.ಎ.ಪೈ. ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ.
ಇಲ್ಲಿ ನೂರು ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಜಿಲ್ಲೆಯ ರೋಗಿಗಳಿಗೆ ಮಾತ್ರವೆಂದು ಜಿಲ್ಲಾಡಳಿತ ಸ್ಪಷ್ಟವಾಗಿ ಹೇಳಿದ್ದರೂ ಇದೀಗ ನೇರೆಯ ಜಿಲ್ಲೆಯ ಕೊರೋನಾ ಸೋಂಕಿತರನ್ನು ಈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿರುವುದು ಎಷ್ಟು ಸರಿ ಎಂದು ಸ್ಥಳೀಯ ಪ್ರಶ್ನಿಸುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾ ಆರೋಗ್ಯಧಿಕಾರಿ ಸುಧೀರ್ ಚಂದ್ರ ಸೂಡ ಅವರನ್ನು “ಉಡುಪಿ ಟೈಮ್ಸ್” ಮಾತನಾಡಿಸಿದಾಗ, ಇದೊಂದು ವಿಶೇಷ ಪ್ರಕರಣವೆಂದು ಉಡುಪಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಸೋಂಕಿತೆ ಗರ್ಭಿಣಿಯಾದ್ದರಿಂದ ಅಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ ಉಡುಪಿಯಲ್ಲಿ ಚಿಕಿತ್ಸೆ ನೀಡುತ್ತೇವೆ ಎಂದರು.