ನಾಳೆ “ವಿಶ್ವ ಯೋಗ ದಿನಾಚರಣೆ”- ಉಡುಪಿಯಲ್ಲೂ ಸಕಲ ಸಿದ್ಧತೆ

ಉಡುಪಿ : ನಾಳೆ ಅಂತರಾಷ್ಟ್ರೀಯ ಯೋಗ ದಿನ. 5ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶಾದ್ಯಂತ ಅದ್ಧೂರಿಯಾಗಿ ಆಚರಿಸಲು ಯೋಗಾಭ್ಯಾಸಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ, ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಗ್ಗೆ 6.30 ರಿದ ನಡೆಯಲಿರುವ ಯೋಗಾಸನಗಳ ಪ್ರಾತ್ಯಕ್ಷಿಕೆ ಹಾಗೂ ಬೆಳಗ್ಗೆ 8 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಜೂನ್ 21 ರಂದು ಬೆಳಗ್ಗೆ 9.30 ಕ್ಕೆ ರೆಡ್‍ಕ್ರಾಸ್ ಭವನದ ಜೀನ್ ಹೆನ್ರಿ ಡ್ಯುನಂಟ್ ಹಾಲ್‍ನಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಮ್ಯಾನೆಜಿಂಗ್ ಟ್ರಸ್ಟಿ ಡಾ. ಎನ್.ಬಿ. ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದು, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಉಮೇಶ್ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ “ವಿಶ್ವ ಯೋಗ ದಿನ”ವನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿ೦ದ ನಾಳೆ (ಜೂನ್ 21, ಶುಕ್ರವಾರ) ಬೆಳಿಗ್ಗೆ ಗ೦ಟೆ 7:45ಕ್ಕೆ ಹೋಟೆಲ್ ಕಿದಿಯೂರ್‌ನ ಶೇಷಶಯನ ಸಭಾ೦ಗಣದಲ್ಲಿ ಸಾಮೂಹಿಕ ಯೋಗ ಅಭ್ಯಾಸದೊ೦ದಿಗೆ ಆಚರಿಸಲಾಗುವುದು.

ಇನ್ನೂ 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀ ಕೃಷ್ಣಮಠ ರಾಜಾಂಗಣದಲ್ಲೂ ಬೆಳಿಗ್ಗೆ 5:30 ರಿಂದ 7:00 ಗಂಟೆಯವರೆಗೆ ನಡೆಯಲಿದೆ. ಶ್ರೀ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ದೀಪ ಬೆಳಗಿಸಿ ಉದ್ಘಾಟಿಸಿ ಆರ್ಶೀವಚನ ನೀಡಲಿದ್ದಾರೆ. ಶ್ರೀ ಶ್ರೀ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಕರಂಬಳ್ಳಿ ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಯೋಗ ಕಾರ್‍ಯಕ್ರಮ ನಾಳೆನಡೆಯಲಿದೆ.

ಮುನಿಯಾಲ್ ಆರ್ಯುವೇದ ಕಾಲೇಜಿನಲ್ಲೂ ಯೋಗ ದಿನದ ಅಂಗವಾಗಿ ಬೆಳಿಗ್ಗೆ 9: 15ರಿಂದ ಕಾರ್‍ಯಕ್ರಮ ಆರಂಭವಾಗಲಿದೆ. ಯೋಗ ನೃತ್ಯ, ಯೋಗಾಸನ ನಡೆಯಲಿದೆ. ವಿಶ್ವ ಯೋಗಾ ದಿನವನ್ನು ಒಂದು ದಿನದ ಕಾರ್‍ಯಕ್ರಮವಾಗಿ ಆಯೋಜಿಸಲಾಗಿದೆ.

ಇನ್ನೂ ಮಣಿಪಾಲದ ಮಾಹೆಯಲ್ಲೂ ಯೋಗ ದಿನವನ್ನು ಬಹಳ ಅದ್ಧೂರಿಯಿಂದ ಆಚರಿಸಲು ಸಕಲ ಸಿದ್ಧತೆ ನಡೆಸಲಾಗಿದೆ. ಬೆಳಿಗ್ಗೆ 8:00 ಗಂಟೆಯಿಂದ 9:20 ರವರೆಗೆ ಕಾರ್‍ಯಕ್ರಮ ನಡೆಯಲಿದ್ದು, ಮುಖ್ಯ ಅಥಿತಿಗಳಾಗಿ ಕುಲಪತಿ ಡಾ|| ಪಿ.ಎಲ್.ಎನ್.ಜಿ ರಾವ್ ಡಾ| ನಾರಾಯಣ ಸಾಬಾಹಿತ್, ಸಿ.ಜೆ ಮುತ್ತನ, ಡಾ|| ಪದ್ಮರಾಜ್ ಹೆಗಡೆ ಉಪಸ್ಥಿತಿಯಲ್ಲಿ ಯೋಗ ಕಾರ್‍ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!