ಶ್ರೀ ದೇವಿ ಗ್ಲಾಸ್ ಹೌಸ್‌ನ ಫಾರ್ಚೂನ್ ಸೇಫ್ಟಿ ಗ್ಲಾಸ್ ಶುಭಾರಂಭ

ಉಡುಪಿ: ಶ್ರೀ ದೇವಿ ಗ್ಲಾಸ್ ಹೌಸ್‌ನ ನೂತನ ಸಹ ಸಂಸ್ಥೆ ಫಾರ್ಚೂನ್ ಸೇಫ್ಟಿ ಗ್ಲಾಸ್ ಉದ್ಘಾಟನಾ ಸಮಾರಂಭ ಬೆಳಗ್ಗೆ 9.30ಕ್ಕೆ ಪಡುಬಿದ್ರಿ ಸಮೀಪದ ನಂದಿಕೂರು ಇಂಡಸ್ಟ್ರಿಯಲ್ ಏರಿಯಾದಲ್ಲಿ  ನಡೆಯಲಿದೆ ಎಂದು ಸಂಸ್ಥೆಯ ಮಾಲಿಕ ಸುರೇಶ್ ನಾಯ್ಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ ಜಿ. ಶಂಕರ್ ಉದ್ಘಾಟಿಸಲಿದ್ದಾರೆ. ಉಡುಪಿ ಸಿವಿಲ್ ಎಂಜಿನಿಯರ್ ಅಸೋಸಿಯೇಶನ್ ಅಧ್ಯಕ್ಷ ಎಂ. ಗೋಪಾಲ್ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಡಾ  ಜೆರಿ ವಿನ್ಸೆಂಟ್ ಡಯಾಸ್, ಉದ್ಯಮಿ ಪಿ. ಪುರುಷೋತ್ತಮ ಶೆಟ್ಟಿ , ಸಾಯಿರಾಧಾ ಡೆವಲಪರ್ಸ್‌  ಮುಖ್ಯಸ್ಥ ಮನೋಹರ್ ಶೆಟ್ಟಿ , ವಿವಾ ಕಂಪೊಸೈಟ್ ಪೆನೆಲ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಜೈನ , ಎಸಿಸಿಸಿಇ ಮಂಗಳೂರು ಘಟಕದ ಅಧ್ಯಕ್ಷ ಅರುಣ ಪ್ರಭಾ , ಕ್ರೆಡೈ ಮಂಗಳೂರು  ಅಧ್ಯಕ್ಷ ನವೀನ್ ಕಾರ್ಡೋಜಾ ಭಾಗವಹಿಸಲಿದ್ದಾರೆ ಎಂದರು.

ಸಂಸ್ಥೆ ಬೆಳವಣಿಗೆ
1990ರಲ್ಲಿ ಉಡುಪಿ ನಗರದ ಕೇಂದ್ರ ಭಾಗ ಗೀತಾಂಜಲಿ ಥಿಯೇಟರ್ ರಸ್ತೆಯಲ್ಲಿರುವ ಪುಟ್ಟ ಕಟ್ಟಡದಲ್ಲಿ ಆರಂಭಗೊಂಡ ಶ್ರೀದೇವಿ ಗ್ಲಾಸ್ ಹೌಸ್ ಸಂಸ್ಥೆಯು ಆರಂಭದ ದಿನಗಳಲ್ಲಿ ಗಾಜಿನ ಉತ್ಪನ್ನಗಳ ರಿಟೇಲ್ ವ್ಯವಹಾರವನ್ನು ನಡೆಸಿದೆ.  ಇದೀಗ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಯಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಿದ ನೂತನ ಘಟಕವನ್ನು ಲೋಕಾರ್ಪಣೆಗೊಳಿಸುತ್ತಿದೆ. ಪುಟ್ಟ ಗಾತ್ರದ ಗಾಜುಗಳನ್ನು ಕಟ್ಟಡಗಳಿಗೆ ಅಳವಡಿಸಿಕೊಳ್ಳುತ್ತಿದ್ದ ದಿನಗಳಲ್ಲಿ 8*12 , 17*10 ಅಡಿ ಗಾತ್ರದ ವಿಭಿನ್ನ ವಿನ್ಯಾಸದ  ಗಾಜುಗಳನ್ನು ಉಡುಪಿಗೆ ಮೊದಲ ಬಾರಿಗೆ ಪರಿಚಯಿಸಿದೆ.

2004 ರಲ್ಲಿ ಉಡುಪಿಗೆ ಮೊತ್ತಮೊದಲ ಬಾರಿಗೆ ಗಾಜಿನ ವಾಶ್ ಬೇಸಿನ್‌ಗಳನ್ನು ಪರಿಚಯಿಸಿದ ಕೀರ್ತಿಯೂ ಸಂಸ್ಥೆಗಿದೆ.  ಉಷ್ಣ ಹವಾಮಾನವನ್ನು ಹೊಂದಿರುವ ಉಡುಪಿಯಂಥಹ ನಗರಗಳ ಮನೆ ಹಾಗೂ ಕಟ್ಟಡಗಳ ಒಳಗೆ ಉರಿ ಬೇಸಿಗೆಯ ದಿನಗಳಲ್ಲಿ ವಾತಾವರಣದ ಉಷ್ಣತೆಯನ್ನು ಹತೋಟಿಯಲ್ಲಿಡಬಲ್ಲ ಗಾಜುಗಳನ್ನೂ ಅನೇಕ ಕಟ್ಟಡಗಳಿಗೆ ಅಳವಡಿಸಲಾಗಿದೆ.

ಸಂಸ್ಥೆ ಉದ್ಯಮ ಹಾಗೂ ಸೇವೆಯನ್ನು ಕರಾವಳಿ ಜಿಲ್ಲೆಗಳು ಮಾತ್ರವಲ್ಲದೇ ಗೋವಾ ರಾಜ್ಯದ ವರೆಗೂ ವಿಸ್ತರಿಸಿಕೊಂಡಿದೆ. ಪ್ರಸ್ತುತ ನೂರಕ್ಕೂ ಅಧಿಕ ಉದ್ಯೋಗಿಗಳು ದುಡಿಯುತ್ತಿದ್ದಾರೆ.  ಫಾರ್ಚೂನ್ ಸೇಫ್ಟಿ ಗ್ಲಾಸ್ ಸಂಸ್ಥೆಯಲ್ಲೂ ಬಹು ವಿನ್ಯಾಸದ ಗಾಜಿನ ಉತ್ಪನ್ನಗಳನ್ನು ಸಿದ್ಧಪಡಿಸುವ ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಕೊಳ್ಳಲಾಗಿದ್ದು, ಉದ್ಯಮವು ಐಎಸ್‌ಒ 9001:2015 ಅನ್ವಯ ಮಾನ್ಯತೆಯನ್ನು ಪಡೆದಿದೆ.

ಪತ್ರಿಕಾಗೋಷ್ಠಿಯಲ್ಲಿ  ಸಂಸ್ಥೆಯ ಎಂಜಿನಿಯರ್ ಶಾಜಿ, ಟೆಕ್ನಿಕಲ್ ಎಂಜಿನಿಯರ್ ಸೋಮನಾಥ ಬಬಲಾದಿ, ವ್ಯವಸ್ಥಾಪಕ ಗೋಪಾಲ್ ಹೇರೂರ್, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ವಾಸುದೇವ ಭಟ್ ಪೆರಂಪಳ್ಳಿ , ಶ್ರೀಪತಿ ಭಟ್ ಹಾಗೂ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!