ಇಂದಿನ ಪೀಳಿಗೆಗೆ ಪ್ರಾಚೀನ ಸಂಪ್ರದಾಯಗಳ ಅರಿವಿರಬೇಕು : ಅಶೋಕ್ ಕುಮಾರ್

ಉಡುಪಿ –  ನಮ್ಮ ಹಿರಿಯರು ಎಷ್ಟೇ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದರೂ ತಮ್ಮ ಸಂಪ್ರದಾಯಗಳನ್ನು ಬಿಡಲಿಲ್ಲ.ಆದರೆ ಇಂದು ಆ ಎಲ್ಲಾ ಸಂಪ್ರದಾಯಗಳು ನಶಿಸಿ ಹೋಗುತ್ತಿವೆ.ಈ ನಶಿಸಿ ಹೋಗುತ್ತಿರುವ ಸಂಪ್ರದಾಯಗಳನ್ನು ಅವರಿಗೆ ತಿಳಿಯಪಡಿಸುವುದು ನಮ್ಮೆಲ್ಲರ ಜವಾಬ್ದಾರಿ.”ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರು ಅವರು ಹೇಳಿದರು.ಅವರು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ  ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ “ಆಟಿಡೊಂಜಿ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ನಾಯಕಿ ಶ್ರೀಮತಿ ಸರಳಾ ಕಾಂಚನ್ ಅವರು ಧಾನ್ಯ ತುಂಬಿದ ಕಳಸೆಯಲ್ಲಿ ಕಲ್ಪವ್ರಕ್ಷದ ಹೂವನ್ನು ಅರಳಿಸುವುದರ ಮೂಲಕ ಸಾಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ಆರಂಭದಲ್ಲಿ ಲತಾ ದೇವರಾಜ್ ಅವರ ನೇತ್ರತ್ವದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಲಾಯಿತು ಶ್ರೀಮತಿ ಚಂದ್ರಿಕಾ ಶೆಟ್ಟಿಯವರು ಸರ್ವರನ್ನೂ ಸ್ವಾಗತಿಸಿದರು.ಉಪಾಧ್ಯಕ್ಷೆ ಶ್ರೀಮತಿ ಜ್ಯೋತಿ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ವೆರೋನಿಕಾ ಕರ್ನೇಲಿಯೋ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಗೀತಾ ವಾಗ್ಳೆ ಯವರು “ಆಟಿ ತಿಂಗಳ ಮಹತ್ವ,ಆಚರಣೆಗಳು,ತಿನಿಸುಗಳ ಕುರಿತು ಪ್ರಾತ್ಯಕ್ಷಿತೆಯ ಮೂಲಕ ಮಾಹಿತಿ ನೀಡಿದರು.ಡಾ.ಸುನೀತಾ ಶೆಟ್ಟಿಯವರು ರಸಪ್ರೆಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಸಭಾ ವೇದಿಕೆಯ ಮೇಲೆ ನಮ್ಮ ಹಿರಿಯರು ಬಳಸುತಿದ್ದ ಮರದಿಂದ  ತಯಾರಿಸಿದ  ಪುರಾತನ ವಸ್ತು ಗಳ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.ಈ ಸಂದರ್ಭದಲ್ಲಿ ಶ್ರೀಮತಿ ಸುಪ್ರೀತಾ ಸರನ್ ಯವರಿಗೆ ಬಯಕೆ ಶಾಸ್ತ್ರವನ್ನು ಹೆಂಗಳೆಯರು ನಡೆಸಿಕೊಟ್ಟರು.
ಬಂದಿರುವ ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ಒಂದೊಂದು ಅಡಿಕೆ ಸಸಿಗಳನ್ನು ನೀಡಿ ಗೌರವಿಸಲಾಯಿತು.ಮಹಿಳಾ ಕಾಂಗ್ರೆಸ್ ಸದಸ್ಯರು ತಮ್ಮ ತಮ್ಮ ಮನೆಗಳಿಂದ ತಯಾರಿಸಿಕೊಂಡು ತಂದಿದ್ದ ಆಟಿ ಖಾದ್ಯಗಳನ್ನು ಭೋಜನದ ರೂಪದಲ್ಲಿ ಎಲ್ಲರಿಗೂ ಉಣಬಡಿಸಲಾಯಿತು.ಈ ಸಂದರ್ಭದಲ್ಲಿ ಅಗಲಿದ ಮಹಾನ್ ನಾಯಕಿ ಶ್ರೀಮತಿ ಶೀಲಾ ಧೀಕ್ಷಿತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು.ಕೊನೆಯಲ್ಲಿ ಹಿರಿಯಡ್ಕ ಬ್ಲಾಕ್ ಅಧ್ಯಕ್ಷೆ ಸ್ರೀಮತಿ ಸಂಧ್ಯಾ ಶೆಟ್ಟಿಯವರು ಧನ್ಯವಾದವಿತ್ತರು.ಹಿರಿಯ ನಾಯಕಿ ಸರಸು ಬಂಗೇರಾ,ಬ್ರಹ್ಮಾವರ ಬ್ಲಾಕ್ ಅಧ್ಯಕ್ಷೆ ಗೋಪಿ.ಕೆ.ನಾಯ್ಕ್,ಹಿರಿಯಡ್ಕ ಜಿ.ಪಂ.ಸದಸ್ಯೆ ಶ್ರೀಮತಿ ಚಂದ್ರಿಕಾ ಕೇಳ್ಕರ್,ಪ್ರಭಾ ಶೆಟ್ಟಿ,ಜಯಶ್ರೀ ಕ್ರಷ್ಣರಾಜ್,ರಾಜೀವ್ ಗಾಂಧೀ ಪಂ.ರಾ.ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವೆರ ,ಕಾಪು ಬ್ಲಾಕ್ ನಿಕಟಪೂರ್ವ ಅಧ್ಯಕ್ಷೆ ಪ್ರಭಾವತಿ ಸಾಲಿಯಾನ್,ತಾ.ಪಂ.ಸದಸ್ಯೆ ಸುಲೋಚನಾ,ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು,ಜನಾರ್ದನ ಭಂಡಾರ್ಕರ್,ನಾಗೇಶ್ ಉದ್ಯಾವರ,ಮಹಾಬಲ ಕುಂದರ್,ರಮೇಶ್ ಕಾಂಚನ್,ಹಾಗೂ ವಿಶೇಷ ಅತಿಥಿಯಾಗಿ ಶ್ರೀಮತಿ ಪ್ರಫುಲ್ಲಾ ಜಯ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.ಶ್ರೀಮತಿ ಸುಮತಿ ಜಯಪ್ರಕಾಶ್ ಸುವರ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!