ಇಂದು ಕಡೇ ಕ್ಷಣದ ಆಟ – ದೋಸ್ತಿಗಳ ಶಾಸಕರು ನಾಪತ್ತೆ !

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ, ಪಕ್ಷೇತರ ಶಾಸಕರ ಬೆಂಬಲ ಹಿಂಪಡೆತದಿಂದ ಸರ್ಕಾರ ಅಲ್ಪಮತಕ್ಕೆ ಕುಸಿದರೂ ದೋಸ್ತಿ ನಾಯಕರು ವಿಶ್ವಾಸಮತದಲ್ಲಿ ನಾವು ಜಯಗಳಿಸುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದಾರೆ.
ಹೌದು. ಒಟ್ಟು 224 ಮಂದಿ ಶಾಸಕರ ಪೈಕಿ 16 ಮಂದಿ ಶಾಸಕರ ರಾಜೀನಾಮೆ ನೀಡಿದ್ದರಿಂದ ಸದನದ ಬಲ 208ಕ್ಕೆ ಕುಸಿದಿದೆ. ಒಟ್ಟು 79 ಕಾಂಗ್ರೆಸ್ ಶಾಸಕರ ಪೈಕಿ 13 ಮಂದಿ ರಾಜೀನಾಮೆ ನೀಡಿದ್ದು, ಸ್ಪೀಕರ್ ಸೇರಿ 66 ಸದಸ್ಯರ ಬಲ ಹೊಂದಿದ್ದಾರೆ. ಮೂರು ಮಂದಿ ಜೆಡಿಎಸ್ ಶಾಸಕರ ರಾಜೀನಾಮೆಯಿಂದ ದಳ ಶಾಸಕರ ಸಂಖ್ಯೆ 34ಕ್ಕೆ ಕುಸಿದಿದೆ. ಇಬ್ಬರು ಪಕ್ಷೇತರರ ಬೆಂಬಲದಿಂದ ಬಿಜೆಪಿ ಬಲ 107ಕ್ಕೆ ಏರಿಕೆಯಾಗಿದ್ದರೆ ಬಿಎಸ್‍ಪಿ ಶಾಸಕ ಎನ್ ಮಹೇಶ್ ವಿಧಾನಸಭೆಯಲ್ಲಿ ಪ್ರತ್ಯೇಕ ಸೀಟ್ ಕೇಳಿದ್ದಾರೆ.
208 ಶಾಸಕರು ಇರುವ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 105 ಶಾಸಕರ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ದೋಸ್ತಿಗಳಿಗೆ 99 ಶಾಸಕರ ಬೆಂಬಲವಿದೆ. ಅಲ್ಪ ಮತಕ್ಕೆ ಕುಸಿದಿದ್ದರೂ ಸರ್ಕಾರಕ್ಕೆ ಏನು ಆಗುವುದಿಲ್ಲ. ಸರ್ಕಾರ ವಿಶ್ವಾಸಮತ ಪರೀಕ್ಷೆಯಲ್ಲಿ ಗೆಲ್ಲಲಿದೆ ಎಂದು ದೋಸ್ತಿ ನಾಯಕರು ಹೇಳುತ್ತಿದ್ದಾರೆ.
ವಿಶ್ವಾಸಕ್ಕೆ ಕಾರಣ ಏನು?
1. ವಿಶ್ವಾಸ ಮತಯಾಚನೆಗೆ ಇಂದೇ ದಿನಾಂಕ ನಿಗದಿಯಾಗಿದ್ದರು ಇವತ್ತೇ ವಿಶ್ವಾಸಮತ ಸಾಬೀತು ಮಾಡಬೇಕಿಲ್ಲ. ಇಂದಿನಿಂದ 3-4 ದಿನ ಚರ್ಚೆಯಲ್ಲೇ ದಿನ ದೂಡಲು ತಂತ್ರ ಹೆಣೆಯಲಾಗಿದೆ ಎನ್ನಲಾಗಿದೆ. ಅಷ್ಟರಲ್ಲಿ ಅತೃಪ್ತ ಶಾಸಕರ ಮನವೊಲಿಕೆ ಮಾಡಬಹುದು.
3. ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದರೂ ಹಲವು ಶಾಸಕರು ಮುಂಬೈಗೆ ತೆರಳಿಲ್ಲ. ರಾಮಲಿಂಗಾ ರೆಡ್ಡಿ ಈಗಾಗಲೇ ರಾಜೀನಾಮೆ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಇದರ ಜೊತೆಯಲ್ಲೇ ರೋಶನ್ ಬೇಗ್, ಆನಂದ್ ಸಿಂಗ್, ಮಹೇಶ್ ಬೆಂಬಲಿಸಿದ್ರೆ ಸಂಖ್ಯಾಬಲ 104 ಆಗುತ್ತದೆ. ಅನರ್ಹತೆಗೆ ಹೆದರಿ ಶಂಕರ್ ಬೆಂಬಲಿಸಿದ್ರೆ ಸಮಬಲ ಸಾಧಿಸುವ ನಂಬಿಕೆ.
4. ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಈ ಮೂಲಕ ಅವರ ಬೆಂಬಲ ಮುಂದಿಟ್ಟು ಬೆಂಗಳೂರಿನ ಶಾಸಕರಾದ ಮುನಿರತ್ನ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಗೋಪಾಲಯ್ಯ ವಾಪಸ್ ಬರಬಹುದು ಎನ್ನುವ ನಿರೀಕ್ಷೆ.
 ದೋಸ್ತಿ ನಾಯಕರು ಈಗಾಗಲೇ ನಾವು ಕೈ ಕಟ್ಟಿ ಕುಳಿತಿಲ್ಲ. ಬಿಜೆಪಿಯವರು ಆಪರೇಷನ್ ಮಾಡಿದರೆ ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವುದು ನಮಗೂ ಗೊತ್ತಿದೆ ಎಂದು ಹೇಳಿಕೊಂಡು ಬಂದಿದ್ದಾರೆ. ಈ ಪ್ರಕಾರ ಬಿಜೆಪಿಯ ಐವರು ಶಾಸಕರು ಸದನಕ್ಕೆ ಗೈರಾಗಿ ಅಥವಾ ಸರ್ಕಾರದ ಪರವಾಗಿ ಮತ ಹಾಕುವ ಸಾಧ್ಯತೆಯಿದೆ.
Attachments area

Leave a Reply

Your email address will not be published. Required fields are marked *

error: Content is protected !!