ಅನಾರೋಗ್ಯ ಪೀಡಿತ ಮಕ್ಕಳ ಸಹಾಯಕ್ಕಾಗಿ ‘ವಾಂಪೈರ್’ ವೇಷ: ರವಿ ಕಟಪಾಡಿ

ಉಡುಪಿ: ಅನಾರೋಗ್ಯ ಪೀಡಿತ ಮಕ್ಕಳ ಸಹಾಯಕ್ಕಾಗಿ  ಪ್ರತಿವರ್ಷದಂತೆ ಈ ವರ್ಷ ವು ರವಿ ಕಟಪಾಡಿಯವರು ‘ವಾಂಪೈರ್’ ವೇಷ ಹಾಕಿದ್ದಾರೆ.

ರವಿ ಕಟಪಾಡಿ ಯವರು ಹಾಕಿದ ವೇಷದಿಂದ  ಸಂಗ್ರಹವಾದ  ಹಣದಿಂದ, ಮೊದಲ ವರ್ಷ 1.04 ಲಕ್ಷದಲ್ಲಿ ಎಳ್ಳಂಪಳ್ಳಿ ದಿಪಾನ್ ಗುಡ್ಡೆಯ ಮುಕಾಂಬಿಕಾ ಅವರ ಪುತ್ರಿ ಅನ್ವಿತಾಳ ಶಸ್ತ್ರಚಿಕಿತ್ಸೆಗೆ ನೀಡಲಾಯಿತು.

2ನೇ ವರ್ಷದ ₹3.20 ಲಕ್ಷವನ್ನು ನಾಲ್ಕು ಮಕ್ಕಳಿಗೆ,

3ನೇ ವರ್ಷದ ₹4.65 ಲಕ್ಷವನ್ನು ಮೂರು ಮಕ್ಕಳಿಗೆ

4ನೇ ವರ್ಷ ಸಂಗ್ರಹವಾದ 5.12 ಲಕ್ಷವನ್ನು ಮೂವರು ಮಕ್ಕಳಿಗೆ,

ಹಾಗೂ 5ನೇ ವರ್ಷ ಸಂಗ್ರಹವಾದ ₹5.32 ಲಕ್ಷವನ್ನು ಹಾಗೂ ಮಿಲಾಪ್ ಸಂಸ್ಥೆ ನೀಡಿದ ₹16 ಲಕ್ಷವನ್ನು 7 ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ  ನೀಡಲಾಯಿತು.

ಈ ವರ್ಷ ವೇಷದಿಂದ ಸಂಗ್ರಹವಾಗುವ  ಹಣವನ್ನು ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿರುವ ಮೂಡುಬಾರಳಿಯ ಮಂದರ್ತಿಯ ಕುಶಲ ಹಾಗೂ ಉಷಾ ದಂಪತಿ ಪುತ್ರ ಶ್ರೀತನ್ ಚಿಕಿತ್ಸೆಗೆ, ಬಿಳಿ ರಕ್ತಕಣ ಸಮಸ್ಯೆ ಇರುವ ಕಳ್ಳಿಗುಡ್ಡೆ ವಕ್ವಾಡಿಯ ರವೀಂದ್ರ ಯಶೋಧ ದಂಪತಿ ಪುತ್ರ ಪ್ರಥಮ್, ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿರುವ ಪಂಚಬೆಟ್ಟು ಹಿರಿಯಡಕ ಕೃಷ್ಣಮೂರ್ತಿ ಆಚಾರ್ಯ, ಕುಶಲ ದಂಪತಿ ಪುತ್ರ ಕಿರಣ್ ಸೇರಿದಂತೆ 5 ಮಕ್ಕಳ ಚಿಕಿತ್ಸೆಗೆ ನೀಡಲಾಗುವುದು .

Leave a Reply

Your email address will not be published. Required fields are marked *

error: Content is protected !!