ಹುಲಿ ದಾಳಿ – ಆರ್.ಎಫ್.ಓ. ಗಾಯ

ಚಾಮರಾಜನಗರ ಜಿಲ್ಲೆ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಅರಣ್ಯದಂಚಿನ ಕಳ್ಳೀಪುರ ಗ್ರಾಮದಲ್ಲಿ ಇಂದು ಬೆಳ್ಳಿಗೆ  ಜಮೀನೊಂದರಲ್ಲಿ ಹುಲಿ ಕಾಣಿಸಿಕೊಂಡಿದ್ದು ಈ  ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ  ದೂರು  ನೀಡಿದ್ದರು.

ಗ್ರಾಮಸ್ಥರ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಆರ್.ಎಫ್.ಓ.ರಾಘವೇಂದ್ರ ರವರ ಮೇಲೆ ಪೊದೆಯಲ್ಲಿ ಅಡಗಿದ್ದ ಹುಲಿ ಹಠಾತ್ತನೆ ದಾಳಿ ಮಾಡಿದ್ದೂ , ಸುತ್ತಮುತ್ತಲಿನವರು ಕೂಗಿಕೊಳುತ್ತಿದ್ದಂತೆ  ಹುಲಿ ಓಡಿ ಹೋಗಿದೆ , ಆರ್. ಎಫ್. ಓ. ರಾಘವೇಂದ್ರರವರಿಗೆ ಕಾಲಿಗೆ ಗಾಯವಾಗಿ ಅದ್ರಷ್ಟವಶಾತ್ ಪಾರಾಗಿದ್ದಾರೆ, ಗಾಯಾಳುವನ್ನು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!