ಪಾಕಿಸ್ಥಾನ ಪರ ಘೋಷಣೆ ಕೂಗಿದವರು ರಾಷ್ಟ್ರೀಯ ನಾಯಕರಾಗುತ್ತಿದ್ದಾರೆ: ವಿದ್ಯಾ
ಕಾರ್ಕಳ: ನಮ್ಮದೇ ದೇಶದ ಅನ್ನವುಂಡು ಈ ದೇಶದಲ್ಲಿ ವಾಸಿಸುತ್ತಿರುವವರು ಪಾಕಿಸ್ಥಾನದ ಪರವಾಗಿ ಹೇಳಿಕೆ ನೀಡಿ ಅಮೂಲಕ ರಾಷ್ಟ್ರೀಯ ನಾಕರಾಗಲು ಯತ್ನಿಸುವ ದೇಶದ್ರೋಹಿಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ದುರ್ಗಾ ವಾಹಿನಿ ಪ್ರಾಂತ ಸಂಯೋಜಕಿ ವಿದ್ಯಾ ಮಲ್ಯ ಆಗ್ರಹಿಸಿದ್ದಾರೆ.
ಕಾರ್ಕಳದಲ್ಲಿ ಮಂಗಳವಾರ ಅಮೂಲ್ಯ ಲಿಯೋನಾ ಪಾಕಿಸ್ಥಾನದ ಪರವಾಗಿ ಘೋಷಣೆ ಕೂಗಿರುವ ಪ್ರಕರಣವನ್ನು ಖಂಡಿಸಿ ದುರ್ಗಾ ವಾಹಿನಿ, ವಿ.ಹಿಂ.ಪ ಹಾಗೂ ಬಜರಂಗದಳ ಸಂಘಟನೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಮೂಲ್ಯ ಲಿಯೋನಾ ದೇಶದ್ರೋಹದ ಹೇಳಿಕೆ ಹಿಂದೆ ಭಯೋತ್ಪಾದಕ ಸಂಘಟನೆಗಳ ಬೆಂಬಲವಿದೆ, ದೇಶದ ವಿರುದ್ದ ಮುಸ್ಲಿಂ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು, ಪೌರತ್ವ ಕಾಯಿದೆ ವಿರೋಧಿ ಹೋರಾಟದ ನೆಪದಲ್ಲಿ ಎಡಪಂಥೀಯ ನಾಯಕರ ಮೂಲಕ ದೇಶವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.
ಸಿಎಎ ಹೋರಾಟದಲ್ಲಿ ಭಾಗವಹಿಸುವ ನಾಯಕರಿಗೆ ಓಡಾಡಲು ವಿಮಾನದ ಟಿಕೆಟ್, ಉಳಿದುಕೊಳ್ಳಲು ಹೋಟೆಲ್ ವ್ಯವಸ್ಥೆ ಕಲ್ಪಿಸುತ್ತಿರುವುದಕ್ಕೆ ಲಕ್ಷಾಂತರ ರೂ ಖರ್ಚು ಮಾಡಲಾಗುತ್ತಿದ್ದು, ಇದಕ್ಕೆ ಹಣದ ಮೂಲ ಯಾವುದು ಎಂದು ಪತ್ತೆ ಹಚ್ಚಬೇಕಿದೆ ಎಂದರು.
ರಾಜಕೀಯ ಲಾಭಕ್ಕಾಗಿ ದೇಶದ್ರೋಹಿಗಳೊಂದಿಗೆ ಸೇರಿಕೊಂಡ ವಿರೋಧಪಕ್ಷಗಳು ದೇಶವಿರೋಧಿ ಹೇಳಿಕೆಗಳನ್ನು ಬೆಂಬಲಿಸುತ್ತಿದ್ದು, ಅಮೂಲ್ಯ ಲಿಯೋನಾ ಬೆಂಬಲಕ್ಕೆ ನಿಂತಿರುವುದು ದುರದೃಷ್ಟಕರ ಹಾಗೂ ಇಂತಹ ನೀಚ ರಾಜಕೀಯಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಸುನಿಲ್ ನಿಟ್ಟೆ, ಮನೋಜ್ ಕರಿಯಕಲ್ಲು, ರಾಜೇಶ್ ಪೇರಲ್ಕೆ, ದುರ್ಗಾ ವಾಹಿನಿ ಸಂಚಾಲಕಿ ರಶ್ಮಿತಾ ಈದು, ತಾಲೂಕು ಬಜರಂಗದಳ ಪ್ರಖಂಡ ಸಂಚಾಲಕ ಚೇತನ್ ಪೇರಲ್ಕೆ, ತಾಲೂಕು ವಿ.ಹಿಂ.ಪ ಉಪಾಧ್ಯಕ್ಷ ಹರಿಪ್ರಸಾದ್ ಉಪಸ್ಥಿತರಿದ್ದರು.