ಬಂಟ್ವಾಳ: ಜನಪ್ರತಿನಿಧಿಗಳಿಗೆ ಮೇಲ್ಪಂಕ್ತಿಯಾದ ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ:ಕಳೆದ ರವಿವಾರ ಕೊರೋನ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅತ್ತೆಯು ಗುರುವಾರ ಮೃತಪಟ್ಟ ಹಿನ್ನಲೆಯಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ ವಿರೋಧ ವ್ಯಕ್ತವಾದಾಗ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಮಧ್ಯ ಪ್ರವೇಶಿಸಿ ಗಂಜಿಮಠದಲ್ಲಿರುವ ತನ್ನ ಒಡ್ಡೂರು ಫಾಮ್೯ ನಲ್ಲೆ ಅಂತ್ಯಸಂಸ್ಕಾರ ನಡೆಸುವಂತೆ ನೀಡಿರುವ ಸಲಹೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಶಾಸಕರ ಈ ಮಾನವೀಯತೆಯ ಮಾತು ಈಗ ಸಾಮಾಜಿಕ ಜಾಲತಾಣದಲ್ಲು ಬಿಸಿಬಿಸಿ ಸುದ್ದಿಯಾಗಿ ಹರಿದಾಡುತ್ತಿದೆ.
ಎ. 19 ರಂದು ಮೃತಪಟ್ಟ ಮಹಿಳೆಯ ಅತ್ತೆ 78 ರ ಹರೆಯದ ವೃದ್ದೆಗೆ ಕೊರೋನ ಸೋಂಕು ದೃಢಪಟ್ಟಿದ್ದು,ಸಂಜೆಯ ವೇಳೆಗೆ ಚಿಕಿತ್ಸೆ ಫಲಕಾಎಇಯಾಗದೆ ಕೊನೆಯುಸಿರೆಳೆದಿದ್ದರು. ಬಳಿಕ ಇವರ ಅಂತ್ಯಸಂಸ್ಕಾರ ನಡೆಸಲು ಜಿಲ್ಲಾಡಳಿತ ಸಾಕಷ್ಟು ಕಸರತ್ತು ನಡೆಸಬೇಕಾಯಿತು. ಪಚ್ಚಿನಡ್ಕ,ಮೂಡುಶೆಡ್ಡೆ,ಬೋಳೂರು,ಬಂಟ್ವಾಳ ಬಡ್ಡಕಟ್ಟೆ ಹಿಂದುರುದ್ರಭೂಮಿಯಲ್ಲಿ ವೃದ್ದೆಯ ಶವಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು.ಕೊನೆಗೆ ಜಿಲ್ಲಾಡಳಿತ ಸಂಪರ್ಕಿಸಿದ್ದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರನ್ನು ತಕ್ಷಣವೇ ಮಾನವೀಯತೆ ಮೆರೆದ ಶಾಸಕರು ತನ್ನ ಪತ್ನಿ ,ಪುತ್ರರಲ್ಲಿ ಚರ್ಚಿಸಿ ಸಂಸದ ನಳಿನ್ ಕುಮಾರ್ ಕಟೀಲ್ ರವರಿಗು,ಜಿಲ್ಲಾಡಳಿತಕ್ಕು ತಿಳಿಸಿದರು.
ಶವಸಂಸ್ಕಾರ ನಡೆಸುವುದೆಂದರೆ ಅದೊಂದು ಪಣ್ಯದ ಕೆಲಸ,ವೃದ್ದೆ ನನ್ನ ಕ್ಷೇತ್ರದವರು ಆಗಿದ್ದು,ಶವಸಂಸ್ಕಾರಕ್ಕೆ ದಯನೀಯ ಸ್ಥಿತಿ ಎಂದೂ ಬರಬಾರದು, ಎಲ್ಲಿಯೂ ಅವಕಾಶ ಸಿಗದಿದಲ್ಲಿ ತನ್ನ ಒಡ್ಡೂರು ಫಾಮ್೯ ನ ಸ್ವಂತ ಸ್ಥಳದಲ್ಲಿ ನಾನು ಅವಕಾಶ ನೀಡುತ್ತೇನೆ ಇಲ್ಲಿಯೇ ಅಂತ್ಯ ಸಂಸ್ಕಾರ ಮಾಡಬಹುದು ಎಂದು ಗ್ರೀನ್ ಸಿಗ್ನಲ್ ನೀಡಿ ಇತರೆ ಜನಪ್ರತಿನಿಧಿಗಳಿಗೆ ಮೇಲ್ಪಂಕ್ತಿಯಾಗಿದ್ದಾರೆ. ಶಾಸಕರ ಈ ಮಾತಿನಿಂದ ಜಿಲ್ಲಾಡಳಿತ,ಸಂಸದರು ದಿಗ್ಬ್ರಮೆಗೊಂಡರು.ಸದ್ಯ ಕ್ವಾರಂಟೇನ್ ನಲ್ಲಿರುವ ಮೃತ ವೃದ್ದೆಯ ಇಬ್ಬರು ಮಕ್ಕಳು ಕೂಡ ಇದಕ್ಕೆ ಸಮ್ಮತಿದ್ದರು. ಆದರೆ ಜಿಲ್ಲಾಡಳಿತ ಮಾತ್ರ ಕೊನೆಗೂ ಬಿ.ಸಿ.ರೋಡಿನ ಕೈಕುಂಜದಲ್ಲಿರುವ ಹಿಂದು ರುದ್ರಭೂಮಿಯಲ್ಲಿ ನಡುರಾತ್ರಿ 2 ಗಂಟೆಯ ಹೊತ್ತಿಗೆ ಪೋಲಿಸ್ ಬಂದೋಬಸ್ತ್ ನಲ್ಲಿ ಶವಸಂಸ್ಕಾರ ನಡೆಸಿತು.ಇಲ್ಲಿ ಕೂಡ ಜನರು ವಿರೋಧ ವ್ಯಕ್ತಪಡಿಸಿದರೂ ಜಿಲ್ಲಾ ಎಸ್ಪಿ ಸಹಿತ ಸ್ಥಳೀಯ ಪೋಲಿಸ್ ಅಧಿಕಾರಿಗಗಳು,ತಾಲೂಕಾಡಳಿತ ಜನರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.