ಗಡಿ ಲಾಕ್ ಡೌನ್ ಮಾಡಿದರು ತಪ್ಪಿಲ್ಲ ಸಂಕಟ, ಸುಳ್ಳು ನೆಪವೊಡ್ಡಿ ಅನ್ಯ ರಾಜ್ಯದಿಂದ ಜಿಲ್ಲೆಯೊಳಗೆ ಪ್ರವೇಶ
ಉಡುಪಿ (ಉಡುಪಿ ಟೈಮ್ಸ್ ವರದಿ )- ಕೊರೋನಾ ಎಮರ್ಜೆನ್ಸಿ ಹಿನ್ನಲೆಯಲ್ಲಿ ಗಡಿ ಲಾಕ್ ಡೌನ್ ಮಾಡಿದ್ರೂ ಇನ್ನು ಸುಳ್ಳು ನೆಪ ಹೇಳಿ ಕಳ್ಳ ಸಂಚಾರ ಜಿಲ್ಲೆಯೊಳಗೆ ಪ್ರವೇಶಿಸುತ್ತಿದ್ದಾರೆ, ಮಹಾರಾಷ್ಟ್ರ ರಾಜ್ಯದ ನೊಂದಣಿ ಅಂಬುಲೆನ್ಸ್ ನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ನೆಪವೊಡ್ಡಿ 6 ಜನ ಜಿಲ್ಲೆಯ ಗಡಿ ಪ್ರವೇಶ ಮಾಡಿದ್ದಾರೆ.
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಎಂಬ ಸುಳ್ಳು ನೆಪವೊಡ್ಡಿ ಬಂದಿದ್ದು ಸಂಶಯಗೊಂಡ ಕೆಎಂಸಿ ಆಸ್ಪತ್ರೆಯವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಬಂದಿರುವ ವ್ಯಕ್ತಿಗಳು ಮುಂಬೈಯಿಂದ ಮಣಿಪಾಲಕ್ಕೆ ಬರಲು ಯಾವುದೇ ಪೂರ್ವಾನುಮತಿಯಾಗಲಿ, ವೈದ್ಯಾಧಿಕಾರಿಯಿಂದ ಯಾವುದೇ ದೃಢೀಕರಣ ಪತ್ರವಾಗಲಿ ಪಡೆದಿಲ್ಲ ಎಂದು ಬೆಳಕಿಗೆ ಬಂದಿದೆ . ಸದ್ಯ ಅನಾರೋಗ್ಯಪೀಡಿತ ವ್ಯಕ್ತಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು ಜೊತೆಗೆ ಬಂದ ಎಲ್ಲಾ ಆರು ಮಂದಿಗೆ 28 ದಿನಗಳ ಕಾಲ ಉದ್ಯಾವರ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅಂಬುಲೆನ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದ್ದಾರೆ.