ಮಧ್ಯಮ ವರ್ಗದವರ ಕೈಯಲ್ಲೀಗ ಸಾಕಷ್ಟು ಹಣವಿದೆ: ನಿರ್ಮಲಾ ಸೀತಾರಾಮನ್
ಮುಂಬೈ: “ಹಣಕಾಸು ಮಸೂದೆಯಲ್ಲಿ ಹೊಸ ಪ್ರಸ್ತಾವಿತ ಆದಾಯ ತೆರಿಗೆ ನಿಯಮಗಳ ಜಾರಿ ನಂತರ ಮಧ್ಯಮ ವರ್ಗದವರು ಖರ್ಚು ಮಾಡಲು ಹೆಚ್ಚಿನ ಹಣವನ್ನು ಹೊಂದಿದ್ದಾರೆ.” ಎಂದು ಸೀತಾರಾಮನ್ ಹೇಳಿದರು,
ಫೆಬ್ರವರಿ 1ರಂದು ಮಂಡನೆಯಾದ ಬಜೆಟ್ ಪ್ರಸ್ತಾಪಗಳ ಕುರಿತು ಚರ್ಚಿಸಲು ಸಂವಾದಾತ್ಮಕ ಸಭೆ ನಡೆಸಿದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮುಂಬೈನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.
ಮಧ್ಯಮ ವರ್ಗದ ಹೆಚ್ಚಿನ ಜನಸಮುದಾಯ ಲಾಭಾಂಶದ ಮೇಲೆ ಕಡಿಮೆ ದರದಲ್ಲಿ ತೆರಿಗೆ ಪಾವತಿಸುತ್ತದೆ.
“ನಾವು ಕಾನೂನುಗಳನ್ನು ನ್ಯಾಯಸಮ್ಮತವಾಗಿ ಜಾರಿಗೊಳಿಸಲು ಬಯಸುತ್ತೇವೆ. ನಾವು ಕಂಪನಿಗಳ ಕಾಯ್ದೆಯಿಂದ ಪ್ರಾರಂಭಿಸಿ ಈಗ ಆದಾಯ ತೆರಿಗೆ ಕಾಯ್ದೆಯತ್ತ ಬಂದಿದ್ದೇವೆ” ಎಂದ ಸಚಿವೆ ಸಿವಿಲ್ ಅಪರಾಧಗಳನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸದಂತೆ ಸರ್ಕಾರ ತೀರ್ಮಾನಿಸಲು ಯೋಜಿಸಿದೆ ಎಂದರು.ತೆರಿಗೆ ಆಡಳಿತವನ್ನು ಸರಳಗೊಳಿಸುವುದು ನರೇಂದ್ರ ಮೋದಿಯವರ ಸರ್ಕಾರದ ಉದ್ದೇಶ ಎಂದು ಹಣಕಾಸು ಸಚಿವರು ಹೇಳಿದರು.
ಕೇಂದ್ರ ಬಜೆಟ್‌ನಲ್ಲಿ ಮಾಡಿದ ಎಲ್‌ಐಸಿ ಷೇರು ಮಾರಾಟ ಪ್ರಕಟಣೆಗೆ ಸಂಬಂಧಿಸಿದಂತೆ ಮಾತನಾಡಿದ ಸೀತಾರಾಮನ್, “ಉದ್ದೇಶಿತ ಐಪಿಒ ಚಿಲ್ಲರೆ ಹೂಡಿಕೆದಾರರನ್ನು ಸೆಳೆಯುತ್ತದೆ. ಹಾಗೆಯೇ ಸಮಸ್ಯೆಗಳತ್ತ ಹೆಚ್ಚು ಪಾರದರ್ಶಕವಾಗಿರಲಿದೆ” ಎಂದು ಹೇಳಿದರು. ಈ ಐಪಿಒ ತೆರೆದರೆ ಅದು ಭಾರತದ ಅತಿದೊಡ್ಡ ಐಪಿಒ ಆಗಬಹುದು ಎನ್ನುವ ಊಹಾಪೋಹಗಳು ಮಾರುಕಟ್ಟೆ ವಲಯದಲ್ಲಿ ಕೇಳಿಬಂದಿದೆ.