ಉಂಡ ಮನೆಗೆ ಕನ್ನ ಎಸೆದ ಚೋರ್ ಅಂದರ್

ಉಡುಪಿ: ಮಾಲೀಕನ ಮನೆಯಲ್ಲಿ ಹಾಡುಹಗಲೇ 22 ಲಕ್ಷ ನಗದು ದೋಚಿದ ಪ್ರಕರಣದ ಇಬ್ಬರು ಆರೋಪಿಗಳು ಉಡುಪಿ ನಗರ ಪೊಲೀಸರ ವಶಕ್ಕೆ .
 ಉಡುಪಿ ವೆಂಕಟರಮಣ ದೇವಾಸ್ಥಾನದ ಬಳಿಯ ನಿವಾಸಿಯಾದ ಸುನಂದ ಮಾಣಿಕ್ ಪಾಟೀಲ್  ಮನೆಯ ಬಾಗಿಲು  ಮುರಿದು ಅಡುಗೆ ಕೋಣೆಯ ಡಬ್ಬದಲ್ಲಿದ್ದ 22 ಲಕ್ಷ ನಗದು ಮತ್ತು ಅರ್ಧ ಕೆಜಿ ಬೆಳ್ಳಿಯ ಗಟ್ಟಿಯನ್ನು ಕಳವು ಮಾಡಿದ ಆರೋಪಿಯಾದ ಸಾಂಗ್ಲಿಯ ಅತುಲ್ ಬಾಗ್ನೆ (25) ಮತ್ತು ಆತನ ಸ್ನೇಹಿತನನ್ನು ಗೋವಾ ಪೊಲೀಸರು ಶುಕ್ರವಾರ ತಮ್ಮ ವಶಕ್ಕೆ ಪಡೆದಿದ್ದಾರೆ.
 ಮನೆ ದೋಚಿರುವುದು ಈ ಹಿಂದೆ ತನ್ನ ಅಂಗಡಿಯಲ್ಲಿ ಕೆಲಸಕ್ಕಿದ್ದ ಅತುಲ್ ಮಾಡಿರುವ ಸಾಧ್ಯತೆ ಬಗ್ಗೆ , ಮನೆ ಮಾಲೀಕ ಪೊಲೀಸರಿಗೆ ನೀಡಿರುವ ಮಾಹಿತಿಯಾನುಸಾರ ಉಡುಪಿ ಪೊಲೀಸರು ತಕ್ಷಣ ಗೋವಾದ ಮಡಾಗಾಂವ್ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ಅಲ್ಲಿನ ಪೊಲೀಸರು ಆರೋಪಿಗಳು ಮುಂಬಾಯಿಗೆ ಪರಾರಿಯಾಗುತ್ತಿದ್ದ ಕಳ್ಳರನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್ ರವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಮತ್ತು ಉಡುಪಿ ಉಪವಿಭಾಗದ ಡಿವೈಎಸ್‌ಪಿ ಟಿ.ಆರ್.ಜೈಶಂಕರ ರವರ ಮಾರ್ಗದರ್ಶನದಲ್ಲಿ  ಉಡುಪಿ ನಗರ ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಸಿಬ್ಬಂದಿಯವರು,  ಬೈಂದೂರು ಪೊಲೀಸ್ ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಯವರೊಂದಿಗೆ ಪ್ರಕರಣದ ಮಹಾರಾಷ್ಟ್ರದ ಸಾಂಗ್ಲಿ ವಾಸಿ ಅತುಲ್ ಮಹಾದೇವ್ ಬಾಗ್ನೆ ಗೋವಾ ರಾಜ್ಯದ ಮಡಗಾಂವ್ ರೈಲ್ವೇ ನಿಲ್ಡಾಣದಲ್ಲಿ ಆರ್.ಪಿ.ಎಫ್. ಇನ್ಸ್ಪೆಕ್ಟರ್ ರಣೀತ್ ಮರಾಂಡಿ ಮತ್ತು ಕೊಂಕಣ ರೈಲ್ವೇ ಪೊಲೀಸ್ ಇನ್ಸ್ಪೆಕ್ಟರ್ ಶೈಲೇಶ್ ನಾರ್ವೇಕರ್ವರ ಸಹಾಯದಿಂದ ಅದೇ ದಿನ ರಾತ್ರಿ ಬಂಧಿಸಿದ್ದು, ಇನ್ನೊಬ್ಬ ಆರೋಪಿ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ವಾಸಿ ಸಂದೀಪ್ ಚಂದ್ರಕಾಂತ್ ಶಿಂಧೆ (25 ವರ್ಷ) ಎಂಬವನನ್ನು ಸಪ್ಟೆಂಬರ್ 13 ರಂದು ಸಾಯಂಕಾಲ ಬೈಂದೂರು ರೈಲ್ವೇ ನಿಲ್ಡಾಣದಲ್ಲಿ ಬಂಧಿಸಿ, ಬಂಧಿತರಿಂದ ರೂಪಾಯಿ 21,84,500/- ನಗದು ಹಾಗೂ ಅರ್ಧ ಕೆ.ಜಿ. ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ದಿನಾಂಕ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು 3 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.   ಆರೋಪಿತರಿಬ್ಬರು ಸಾಂಗ್ಲಿಯಲ್ಲಿ ಸ್ನೇಹಿತರಾಗಿದ್ದು, ಸಾಂಗ್ಲಿಯಲ್ಲಿಯೇ ಈ ಬಗ್ಗೆ ಯೋಜನೆ ನಡೆಸಿ, 2 ದಿನ ಮುಂಚೆಯೇ ಉಡುಪಿಗೆ ಆಗಮಿಸಿ, ಲಾಡ್ಜ್ ನಲ್ಲಿ ರೂಂ ಮಾಡಿ, ಸಂದರ್ಭ ನೋಡಿ ಕೃತ್ಯ ಎಸಗಿದ್ದಾಗಿದೆ.    
  ಈ ಹಿಂದೆ ಸಾಂಗ್ಲಿಯಲ್ಲಿ ಹಲವಾರು ದರೋಡೆ ಪ್ರಕರಣದಲ್ಲಿ ಇವರುಗಳು ಭಾಗಿಯಾಗಿದ್ದರು . ಅತುಲ್ ಸ್ನೇಹಿತ ರೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದು ಗೋವಾ ಪೊಲೀಸರ ಶ್ರಮದಿಂದ ಆತನ್ನು ಬಂಧಿಸಲಾಗಿದೆಂದು ಮಾಹಿತಿ ಲಭಿಸಿದೆ.  ಪ್ರಮುಖ ಆರೋಪಿ ಅತುಲ್ ಬಾಗ್ನೆ, ಮಾಣಿಕ್ ಪಾಟೀಲ್‌ನ ಚಿನ್ನದ ವ್ಯವಹಾರದ ಅಂಗಡಿಯಲ್ಲಿ ಎರಡು ತಿಂಗಳು ಕೆಲಸಕ್ಕಿದ್ದು ಅಲ್ಲಿ ಈ ವ್ಯವಹಾರದ ಹಣವನ್ನು ಲಪಾಟಾಯಿಸಿ ಸಿಕ್ಕಿ ಬಿದ್ದಿದ್ದ. ನಂತರ ಆತನನ್ನು ಮಾಲೀಕ ಮಾಣಿಕ್ ಕೆಲಸದಿಂದ ವಜಾಗೊಳಿಸಿದ್ದರು. ಇದೇ ಕೋಪದಲ್ಲಿ ಆರೋಪಿ ತನ್ನೂರಾದ ಸಾಂಗ್ಲಿಯ ಸ್ನೇಹಿತನ್ನು ಕರೆದುಕೊಂಡು ಮಾಲೀಕನ ಮನೆಗೆ ಕನ್ನ ಹಾಕಿಈಗ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರಕರಣವು ದಾಖಲಾಗಿ 24 ಘಂಟೆಯ ಒಳಗೆ ಭೇಧಿಸಿದ್ದಕ್ಕಾಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರು ಪತ್ತೆ ತಂಡಕ್ಕೆ ನಗದು ಪಾರಿತೋಷಕವನ್ನು ನೀಡಿ ಗೌರವಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!