ಕನ್ನಂಗಾರ್ ಮಸೀದಿ ಬಗ್ಗೆ ಸುಳ್ಳು ಆರೋಪ ಸದಸ್ಯನ ಅಮಾನತು

ಕಾಪು : ಜಮಾತಿನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಲೋಕಾಯುಕ್ತ ವಕ್ಫ್ ಇಲಾಖೆ ಹಾಗೂ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ಸರಕಾರದಿಂದ ಜಮಾತಿಗೆ ಅನುದಾನ ತಡೆದಿರುವ ಆರೋಪದ ಮೇಲೆ ಜಮಾತಿನ ಸದಸ್ಯ ಕೆ. ಅಬ್ದುಲ್ ರಹಿಮಾನ್ ರವರನ್ನು ಒಂದು ವರ್ಷದ ಅವಧಿಗೆ ಜಮಾತಿನಿಂದ ಅಮಾನತು ಮಾಡಲಾಗಿದೆ ಎಂದು ಕನ್ನಂಗಾರ್  ಜುಮ್ಮಾ ಮಸೀದಿಯ ಆಡಳಿತ ಮಂಡಳಿ ತಿಳಿಸಿದೆ.


ಬುಧವಾರ ಉಡುಪಿ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಕೆ ಅಬ್ದುಲ್ ರಹೆಮಾನ್, ಕನ್ನಂಗಾರ್ ಜುಮ್ಮಾ ಮಸೀದಿಯ ಆಡಳಿತ ಕಮಿಟಿ ವಿರುದ್ಧ ಅವ್ಯವಹಾರದ ಆರೋಪ ಮಾಡಿದ್ದರು. 
ಪ್ರತಿಷ್ಠಿತ ಕನ್ನಂಗಾರ್ ಸಮಿತಿಗೆ ಒಳಪಟ್ಟ 9 ಮಸೀದಿ ಮದ್ರಸಗಳ ಆಡಳಿತ ಸಮಿತಿಗಳ ವಿಶೇಷ ಸಭೆ ಸೆ.27 ರಂದು ಶುಕ್ರವಾರ ಜಿಲ್ಲಾ ವಕ್ಫ್ ಉಪಾಧ್ಯಕ್ಷರಾದ ಗುಲಾಂ ಮಹಮ್ಮದ್ ಅವರ ಉಪಸ್ಥಿತಿಯಲ್ಲಿ ಜಮಾತ್ ಅಧ್ಯಕ್ಷರಾದ ಎಚ್. ಬಿ. ಮೊಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ಹೈಬಾ ಅಡಿಟೋರಿಯಂನಲ್ಲಿ ಜರಗಿತು.

ಜಮಾತಿನ ವಿರುದ್ಧ ಸುಳ್ಳು ಆರೋಪ ಮತ್ತು ಜಮಾತಿನ ತೇಜೋವಧೆಗೆ ಯತ್ನಿಸಿರುವ ಆರೋಪದ ಮೇಲೆ ಕೆ. ಅಬ್ದುಲ್ ರಹಿಮಾನ್ ಅವರನ್ನು ಒಂದು ವರ್ಷದ ಕಾಲ ಅಮಾನತು ಮಾಡಲಾಗಿದೆ ಮತ್ತು ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಶಿಯಾಲಿ ಹಾಜಿ, ಎಚ್ ಸೂಫಿ, ಇದ್ದಿನಬ್ಬ ಹಾಜಿ, ಹನೀಫ್ ಅಬ್ದುಲ್ಲ, ಕೆ.ಎಸ್. ಅಜೀಜ್ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಮುಂದೆ ತೊಂದರೆ ಮಾಡಿದಲ್ಲಿ ಇವರುಗಳನ್ನು ಸಹ ಜಮಾತಿನಿಂದ ಅಮಾನತು ಮಾಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕನ್ನಂಗಾರ್ ಜುಮಾ ಮಸೀದಿಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!