ದೇವರ ಮೇಲಿನ ನಂಬಿಕೆಯಿಂದ ಧರ್ಮದ ಉಳಿವು: ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ಕಾರ್ಕಳ: ಕರಿಯಾಲು ಶ್ರೀ ವಿಠಲ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅಂಡಾರು, ಶಿರ್ಲಾಲು ಗ್ರಾಮ ಇದರ ಶ್ರೀ ವಿಠಲ ದೇವರ ಗರ್ಭಗುಡಿ ಹಾಗೂ ತೀರ್ಥಮಂಟಪದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಶಿಲಾನ್ಯಾಸ ನೆರವೇರಿಸಿ ನಂತರ ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಶ್ರದ್ಧೆಯಿಂದ ದೇವರ ಆರಾಧನೆ ಮಾಡಿ ದೇವರ ಮೇಲೆ ನಂಬಿಕೆ ಇರಿಸಿದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ ಎಂದರು. ಧಾರ್ಮಿಕ ಕೇಂದ್ರಗಳು ಅಭಿವೃದ್ಧಿಗೊಂಡಾಗ ಗ್ರಾಮವು ಸುಭೀಕ್ಷೆಯಿಂದ ಕೂಡಿರಲಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕ ಹೆಚ್. ಗೋಪಾಲ ಭಂಡಾರಿ ವಹಿಸಿ ಮಾತನಾಡಿ ಧಾರ್ಮಿಕ ಹಾಗೂ ಶಿಕ್ಷಣ ಕೇಂದ್ರಗಳು ಮಾನವೀಯ ಮೌಲ್ಯವನ್ನು ಬೆಳೆಸುವ ಕೇಂದ್ರಗಳಾಗಿವೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ದೇವಸ್ಥಾನದ ಅಭಿವೃದ್ದಿಗೆ ಅನುದಾನ ಒದಗಿಸುವ ಭರವಸೆ ನೀಡಿದರು.

ವೇದಿಕೆಯಲ್ಲಿ ಉದ್ಯಮಿಗಳಾದ ಜನಾರ್ಧನ ಶೆಟ್ಟಿ ಶಿರ್ಲಾಲು, ಶಿವರಾಮ್ ಜಿ. ಶೆಟ್ಟಿ ಮುಂಬೈ, ಕೆ. ಗುಣಪಾಲ ಕಡಂಬ, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಡಾ| ಮಹಾವೀರ್ ಜೈನ್ ಮೂಡಬಿದ್ರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲೆ ನಿರ್ದೇಶಕರಾದ ಗಣೇಶ್ ಜಿ., ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!