ದೇಶದಲ್ಲಿ ಸಂವಿಧಾನ ಇದ್ರೂ ದಲಿತರ ಪರಿಸ್ಥಿತಿ ಚಿಂತಾಜನಕವಾಗಿದೆ: ಜಯನ್

ಉಡುಪಿ: ಕಾಯುವ ದೇವರೇ ಕೊಲ್ಲಲು ಮುಂದಾದರೆ ಮೊರೆಯಿಡುವುದಾದರೂ ಯಾರಿಗೆ? ದೇಶದಲ್ಲಿ ಕಾನೂನು ಇದೆ ನ್ಯಾಯ ಇಲ್ಲ, ಸಂವಿಧಾನ ಇದೆ ರಕ್ಷಣೆ ಇಲ್ಲ ಇಂದು ದಲಿತರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಜನಪರ ಹೋರಾಟಗಾರ ದಲಿತ ಚಿಂತಕ ಜಯನ್ ಮಲ್ಪೆ ಹೇಳಿದ್ದಾರೆ.


ಅವರು ರವಿವಾರ ಕೆಮ್ಮಣ್ಣು ಪಡುಕುದ್ರು ಬಬ್ಬುಸ್ವಾಮಿ ದೈವಸ್ಥಾನದ ಸಭಾಂಗಣದಲ್ಲಿ ಅಂಬೇಡ್ಕರ್ ಯುವಸೇನೆಯ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಾ,
ದಲಿತ ನಾಯಕರುಗಳು ಒಂದೇ ಕುಲದವರಾದರೂ ಒಟ್ಟಿಗೆ ಹೆಜ್ಜೆಹಾಕಲ್ಲ.ಇಂದಿನ ದಲಿತ ಚಳವಳಿಗೆ ಗುರಿ-ದಾರಿ ಯಾವುದೂ ಇಲ್ಲ ಎಕೆಂದರೆ ನಮ್ಮಲ್ಲಿ ಆಡಂಬರ ಇದೆ ಅಂಬೇಡ್ಕರ್ ಇಲ್ಲ.

ಯಾವಾಗ ನಮ್ಮ ಹೃದಯದಲ್ಲಿ,ನರನಾಡಿನಲ್ಲಿ ಅಂಬೇಡ್ಕರ್ ವಿಚಾರಧಾರೆ ತುಂಬಿ ಹರಿಯುವುದೊ ಅಂದೇ ಈ ದೇಶದ ಅಧಿಕಾರ ನಮ್ಮದಾಗುತ್ತದೆ ಎಂದ ಜಯನ್ ಮಲ್ಪೆ .
ದಲಿತ ವಿದ್ಯಾವಂತ ಜನಾಂಗ ಪ್ರಸ್ತುತ ವ್ಯವಸ್ಥೆಯ ವಿರುದ್ಧ ಘರ್ಜಿಸದೆ ಇರುವುದು ಮತ್ತು ಬಾಬಾ ಸಾಹೇಬರ ತತ್ವಗಳನ್ನು ಸಮಾಜಕ್ಕೆ ಹೇಳದೆ ದ್ರೋಹ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು.


ಮುಖ್ಯ ಅತಿಥಿಗಳಾದ ಮಲ್ಪೆ ಠಾಣಾಧಿಕಾರಿ ಬಿ,ಎನ್.ತಿಮ್ಮೇಶ್ ಮಾತನಾಡಿ ದಲಿತರು ಸುಶಿಕ್ಷಿತರಾಗಬೇಕು,ಯಾವುದೇ ಅಪರಾಧ ಪ್ರಜ್ಙೆಯನ್ನು ಬಳಸದೆ ಕಾನೂನಿಗೆ ಗೌರವಕೊಡಬೇಕು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ಜನಾರ್ದನ ತೋನ್ಸೆ ಮಾತನಾಡಿ ದಲಿತರಲ್ಲಿ ಆತ್ಮಗೌರವ ಮೂಡಿಸುವಲ್ಲಿ ಅಂಬೇಡ್ಕರ್ ಚಿಂತನೆ ಅಗತ್ಯ.ದೇಶದ ಸಂವಿಧಾನದ ಆಶಯಕ್ಕೆ ಧಕ್ಕೆಯಾದರೆ ಏಲ್ಲರಿಗೂ ಗಂಢಾಂತರ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.


ಅಂಬೇಡ್ಕರ್ ಯುವಸೇನೆಯ ಮಾರ್ಗದರ್ಶಿ ರಮೇಶ್ ಪಾಲ್ ದಲಿತ ಕುಟುಂಬದ ಆರೋಗ್ಯ,ಶೈಕ್ಷಣಿಕ,ಆರ್ಥಿಕ ಮತ್ತು ಸಾಮಾಜಿಕ ಅಭಿವೃಧ್ಧಿಗೆ ಪೂರಕವಾಗುವ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು. ಸಮಾಜ ಸೇವಕಿ ವೆರೋನಿಕಾ ಕರ್ನೊಲಿಯೋ, ಟಿ ಸತೀಶ್ ಶಟ್ಟಿ, ಗುರುರಾಜ್ ಭಟ್,ತಾ.ಪ ಸದಸ್ಯೆಸರೋಜ,ಮುಂತ್ತಾದವರು ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ದಲಿತ ಮುಖಂಡರಾದ ಸುಂದರ್ ಕಪ್ಪೆಟ್ಟು,ಗಣೇಶ್ ನೆರ್ಗಿ,ಗ್ರಾ.ಪ.ಸದಸ್ಯರಾದ ಜನನಿಯಾ ಪಿಂಟೊ,ಕಡಂಜರ ಗುರಿಕಾರ,ಅಚ್ಚುತ್ತ ಗುರಿಕಾರ ಮತ್ತು ಸುಧಾಕರ್ ಉಪಸ್ಥಿತರಿದ್ದರು. ರಾಜೇಶ್ ಸ್ವಾಗತಿಸಿ ಕುಮಾರಿ ಲತಾ ಪಡುಕುದ್ರು ವಂದಿಸಿದರು,ಜಯಕರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!