ದುರ್ಬಲ, ಅಶಕ್ತರ ಸೇವೆಯೇ ಗುರುಗಳ ಸೇವೆ; ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ

ಉಡುಪಿ : ಸಮಾಜದ ಸೇವೆ ಅಂದರೆ ದೀಪದ ಬೆಳಕಿನಂತೆ, ದೀಪಕ್ಕೆ ಬತ್ತಿ , ಹಣತೆ ಹಾಗೂ ಗಾಳಿ ಎಲ್ಲವೂ ಅಗತ್ಯ. ಅದೇ ರೀತಿ ಸಮಾಜದ ಎಲ್ಲಾ ವರ್ಗದ ಸಮಾನ ಮನಸ್ಕರು ಸೇವೆಗೆ ಕೈಜೋಡಿಸಬೇಕು ಎಂದು ಆನೆಗುಂದಿ ಮಹಾಸಂಸ್ಥಾನ ಮಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಉಡುಪಿ ವಲಯದ ಗುರುಸೇವಾ ಪರಿಷತ್ ಸಂಘಟನೆ ಉದ್ಘಾಟಿಸಿ ಅವರು ಮಾತನಾಡಿದರು, ಸಮಾಜದಲ್ಲಿರುವ ದುರ್ಬಲ ಮತ್ತು ಅಶಕ್ತರ ಸೇವೆ ಮಾಡಿದರೆ ಗುರುಗಳ ಸೇವೆ ಮಾಡಿದಂತೆ. ಚಿಕ್ಕ ಚಿಕ್ಕ ಸೇವೆಯಿಂದ ಆರಂಭವಾದದ್ದು ಬಳಿಕ ದೊಡ್ಡ ಸೇವಾ ಸಂಸ್ಥೆಯಾಗಿ ಬೆಳೆಯಬೇಕು ಎಂದರು.ವಿದ್ವಾನ್ ಉಮೇಶ್ ಆಚಾರ್ಯ ಪಡೀಲ್ ಅವರು ಮಾತನಾಡಿ ತಾಯಿಗೆ ಮೊದಲ ಸ್ಥಾನ , ತಾಯಿಯ ನಂತರದ ಸ್ಥಾನ ಗುರುವಿಗೆ. ಜೀವನದಲ್ಲಿ ಗುರುವನ್ನು ಮರೆತರೆ ತಾಯಿಯನ್ನೇ ಮರೆತಂತೆ ಎಂದರು.

ಸಭಾ ಕಾರ್‍ಯಕ್ರಮಕ್ಕೂ ಮುನ್ನ ಎಂಜಿಎಂ ಕಾಲೇಜಿನಿಂದ ಕಲ್ಯಾಣ ಮಂಟಪದ ವರೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಸಂಘದ ಅಧ್ಯಕ್ಷರಾದ ಸುಧಾಕರ್ ಆಚಾರ್ಯ ದಂಪತಿ ಗುರುಗಳ ಪಾದಾಪೂಜೆ ಮಾಡಿದರು. ಮಹಾಸಂಸ್ಥಾನದ ಅಧ್ಯಕ್ಷ ಸೂರ್ಯ ಕುಮಾರ್, ಗುರುಸೇವಾ ಪರಿಷತ್ ಅಧ್ಯಕ್ಷರಾದ ಮಧು ಆಚಾರ್ಯ, ದಿವಾಕರ ಆಚಾರ್ಯ ಒಳಕಾಡು , ಗೋಕುಲ್ ಆಚಾರ್ಯ ನಿಟ್ಟೂರು, ಕಿಶೋರ್ ಆಚಾರ್ಯ ಗುಂಡಿಬೈಲು ಮತ್ತಿತರರು ಕಾರ್‍ಯಕ್ರಮದಲ್ಲಿ ಉಪಸ್ಥಿರಿದ್ದರು.

Leave a Reply

Your email address will not be published. Required fields are marked *

error: Content is protected !!