ಕಾಂಗ್ರೆಸ್ ನ ಹಿರಿಯ ಮುಖಂಡ, ಪಟಾಕಿ ಉದ್ಯಮಿ ಕೃಷ್ಣರಾಜ್ ಸರಳಾಯ ಆತ್ಮಹತ್ಯೆ
ಉಡುಪಿ: ಕಾಂಗ್ರೆಸ್ ನಹಿರಿಯ ಮುಖಂಡ, ಉಡುಪಿಯ ಪಟಾಕಿ ಉದ್ಯಮಿ ಕೆ.ಕೃಷ್ಣರಾಜ್ ಸರಳಾಯ(90) ಇಂದು ಮಧ್ಯಾಹ್ನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪಣಿಯಾಡಿಯ ಮನೆಯಲ್ಲಿ ಒಬ್ಬರೇ ವಾಸವಾಗಿದ್ದ ಸರಳಾಯರು ಮಧ್ಯಾಹ್ನ ಅವರ ಮನೆಯ ಬಾವಿಗಾ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನೆರೆ ಮನೆಯವರು ಬಾವಿ ಬಳಿ ಏನೋ ಶಬ್ದ ಕೇಳಿ ಬಂದದ್ದನ್ನು ನೋಡಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
ಸರಳಾಯರ ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ಆಸ್ಟ್ರೇಲಿಯಾ ಹಾಗೂ ಬೆಂಗಳೂರಿನಲ್ಲಿ ನೆಲೆಸಿದ್ದರು. ಇವರ ಪತ್ನಿ ಒಂದು ವರ್ಷದಿಂದ ಚೆನ್ನೈನ ಆಸ್ಪತ್ರೆಯಲ್ಲಿ ಅನಾರೋಗ್ಯಗಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದ ಇವರು ಇದೇ ಕೊರಗಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಸರಳಾಯರು 76 ಬಡಗಬೆಟ್ಟು ಬೈಲೂರು ಇದರ ಮಂಡಲ ಪ್ರಧಾನರಾಗಿದ್ದರು. ಮಾತ್ರವಲ್ಲದೆ ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸಹಕಾರಿ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ ಇವರು ಕೊರಂಗ್ರಪಾಡಿ ವ್ಯವಸಾಯಿಕ ಸಹಕಾರಿ ಸಂಘ, ಉಡುಪಿ ಟೌನ್ ಕೋ. ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಲ್ಸಂಕ ಮತ್ತು ರಥಬೀದಿಯಲ್ಲಿ ಹಲವಾರು ವರ್ಷಗಳ ಕಾಲ ಪಟಾಕಿ ಮಾರಾಟದ ವ್ಯವಹಾರ ನಡೆಸುತಿದ್ದರು.
ಟಿ.ಎ.ಪೈ , ಆಸ್ಕರ್ ಫೆರ್ನಾಂಡಿಸ್ ಮಧ್ವಾರಾಜ್ , ಮನೋರಮಾ ಮಧ್ವರಾಜ್ ,ವೀರಪ್ಪ ಮೊಯಿಲಿ , ಜನಾರ್ದನ ಪೂಜಾರಿ ಮೊದಲಾದ ರಾಷ್ಟ್ರ , ರಾಜ್ಯ ಮಟ್ಟದ ನಾಯಕರುಗಳ ಒಡನಾಡಿಯಾಗಿ ಪಕ್ಷದ ಒಳಿತಿಗೆ ಶ್ರಮಿಸಿದ್ದರು. ದಕ ಜಿಲ್ಲಾ ಟೆಲಿಕಾಮ್ ಸಲಹಾಸಮಿತಿ ಸದಸ್ಯ ನೈಋತ್ಯ ರೈಲ್ವೆ ಪಾಲ್ಘಾಟ್ ವಿಭಾಗದ ಸಲಹಾ ಸಮಿತಿ ಸದಸ್ಯ
ಉಡುಪಿ ಮಂಗಳೂರು ಜಿಲ್ಲಾ ಸುಡುಮದ್ದು ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ ಸೇವೆ
ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ವಾಗಿಯೂ ಸಕ್ರಿಯರಾಗಿದ್ದರು. ಅನೇಕ ಪರ್ಯಾಯೋತ್ಸವಗಳಲ್ಲಿ ಪದಾಧಿಕಾರಿಯಾಗಿ ಮಾರ್ಗದರ್ಶನ ಮಾಡುತ್ತಿದ್ದರು.
ಉಡುಪಿ ರಂಗಭೂಮಿ ಸದಸ್ಯ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ
ಪಣಿಯಾಡಿ ಯುವಕ ಮಂಡಲದ ಗೌರವ ಅಧ್ಯಕ್ಷ ಉಡುಪಿ ಲಯನ್ಸ್ ಕ್ಲಬ್ .ರೋಟರಿ ಕ್ಲಬ್ ಗಳ ಅಧ್ಯಕ್ಷ ಪಣಿಯಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿಯೂ ಸೇವೆ ಕಾಣಿಯೂರು ಪರ್ಯಾಯದಲ್ಲಿ ಶ್ರೀಕೃಷ್ಣ ನೃಸಿಂಹಾನುಗ್ರಹ ಪ್ರಶಸ್ತಿ ಪುತ್ತಿಗೆ ಶ್ರೀಗಳಿಂದ ಸಂಮಾನ , ಹಾಗೂ ಉಡುಪಿಯ ಎಲ್ಲ ಮಠಾಧೀಶರಿಂದ ಸಂಮಾನಿಸಲ್ಪಟ್ಟಿದ್ದರು.
ರಾಜ್ಯ ಸರಕಾರದಿಂದ ಸಹಕಾರಿ ರತ್ನ ಪ್ರಶಸ್ತಿ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಸಂಮಾನ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದರು.
ಅದಮಾರು ,ಪುತ್ತಿಗೆ , ಪೇಜಾವರ, ಕಾಣಿಯೂರು , ಕೃಷ್ಣಾಪುರ ,ಸೋದೆ ,ಪೇಜಾವರ , ಪಲಿಮಾರು , ಭಂಡಾರಕೇರಿ ಶ್ರೀಗಳು ಸರಳಾಯರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಮಾಜಿ ಸಚಿವರಾದ ಜನಾರ್ದನ ಪೂಜಾರಿ ಆಸ್ಕರ್ ಫೆರ್ನಾಂಡಿಸ್ಮಾಜಿ ಸಚಿವರಾದ ಮನೋರಮಾ ಮಧ್ವರಾಜ್ ಎಚ್ ಕೆ ಪಾಟೀಲ್ ವಿನಯಕುಮಾರಸೊರಕೆ ಜಯಪ್ರಕಾಶ್ ಹೆಗ್ಡೆ ಪ್ರಮೋದ್ ಮಧ್ವರಾಜ್ ,ಮಾಜಿಮುಖ್ಯಮಂತ್ರಿ ವೀರಪ್ಪ ಮೊಯಿಲಿ , ಮಾಜಿ ಶಾಸಕ ಯು ಆರ್ ಸಭಾಪತಿ ,ಕೆ ಗೋಪಾಲ ಪೂಜಾರಿ , ಬಸವರಾಜ್ , ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ , ಸಂಸದೆ ಶೋಬಾ ಕರಂದ್ಲಾಜೆ ,ಸಚಿವ ಕೋಟ ಶ್ರೀನಿವಾಸ ಪೂಜಾರಿಶಾಸಕರಾದ ಕೆ ರಘುಪತಿ ಭಟ್ ,ಲಾಲಾಜಿ ಮೆಂಡನ್ , ಸುನಿಲ್ ಕುಮಾರ್ , ಹಾಲಾಡಿ ಶ್ರೀನಿವಾಸ ಶೆಟ್ಡಿ , ಬಿ ಎಂ ಸುಕುಮಾರ ಶೆಟ್ಟಿ , ಎಂ ಎನ್ ರಾಜೇಂದ್ರ ಕುಮಾರ್ , ಉಡುಪಿ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ ಜಯಕರ ಶೆಟ್ಟಿ ಇಂದ್ರಾಳಿ,ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ ಶಂಭು ಶೆಟ್ಟಿ ,ಅಶೋಕ್ ಕುಮಾರ್ ಕೊಡವೂರು , ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ , ರಂಗಭೂಮಿ , ಕರಂಬಳ್ಳಿ ಬ್ರಾಹ್ಮಣ ಸಮಿತಿ ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕ್ ಆಡಳಿತ ಮಂಡಳಿ ,ಹಾಗೂ ಅಧ್ಯಕ್ಷ ಕೆ ಜಯಪ್ರಕಾಶ ಕೆದ್ಲಾಯ , ಲಯನ್ಸ್ ,ರೋಟರಿ ಸಂಸ್ಥೆಗಳು ,ಪಣಿಯಾಡಿ ಯುವಕ ಮಂಡಲ ಮೊದಲಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.