ಭವಿಷ್ಯದ ಪೀಳಿಗೆಗೆ ಉತ್ತಮ ಸಮಾಜ ನೀಡುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು – ಪೂಣಿ೯ಮಾ ರವಿ.

ಮಡಿಕೇರಿ: ಭವಿಷ್ಯದ ಪೀಳಿಗೆಗೆ ಅತ್ಯುತ್ತಮ ಸಮಾಜ ನೀಡುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು ಎಂದು ಇನ್ನರ್ ವೀಲ್ ಜಿಲ್ಲೆ ೩೧೮ ನ  ಖಜಾಂಚಿ  ಪೂಣಿ೯ಮಾ ರವಿ ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿ ಇನ್ನರ್ ವೀಲ್‌ನ ನೂತನ ಅಧ್ಯಕ್ಷೆಯಾಗಿ ನಿಶಾ ಮೋಹನ್ ಮತ್ತು ಕಾಯ೯ದಶಿ೯ಯಾಗಿ ಶಫಾಲಿ ರೈ ಅವರಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದ ಪೂಣಿ೯ಮಾ ರವಿ, ಈ ವಷ೯ ಇನ್ನರ್ ವೀಲ್  ಜಿಲ್ಲೆ ೩೧೮ ಇದೀಗ 50 ನೇ ವಷ೯ದ ಸಂಭ್ರಮಾಚರಣೆಯಲ್ಲಿದ್ದು ಪ್ರತೀ ಇನ್ನರ್ ವೀಲ್ ಕ್ಲಬ್‌ಗಳು  ವಿಶಿಷ್ಟ ಕಾಯ೯ಕ್ರಮ ಆಯೋಜಿಸುವಂತೆ ಕರೆ ನೀಡಿದರು.

ಇನ್ನರ್ ವೀಲ್ ಜಗತ್ತಿನಲ್ಲಿ ಮಹಿಳೆಯರಿರುವ  ಅತೀ ದೊಡ್ಡ ಸೇವಾ ಸಂಸ್ಥೆಯಾಗಿದ್ದು ಇನ್ನೂ ಹೆಚ್ಚಿನ ಸದಸ್ಯೆಯರನ್ನು ಸೇಪ೯ಡೆಗೊಳಿಸಿ ಇನ್ನರ್ ವೀಲ್ ನ್ನು ಬಲಗೊಳಿಸುವಂತೆ ಸೂಚಿಸಿದ ಪೂಣಿ೯ಮಾ ರವಿ, ಮುಂದಿನ ಪೀಳಿಗೆಗೆ ಉತ್ತಮ ಸಮಾಜ ರೂಪಿಸುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಇನ್ನರ್ ವೀಲ್ ಕೂಡ ಕಾಯ೯ಕ್ರಮಗಳನ್ನು ಆಯೋಜಿಸುವಂತೆ ಹೇಳಿದರು.

ಈ ವಷ೯ ಮಿರ್ಯಾಕಲ್  ಎಂಬ ಸಂದೇಶದಡಿ ಇನ್ನರ್ ವೀಲ್ ಕಾಯ೯ಕ್ರಮ ರೂಪಿಸಿದ್ದು  ಅಂತೆಯೇ  ಮಮತಾ ಯೋಜನೆಯಡಿ, ದೇಶದಲ್ಲಿನ ಅನಾಥ ಮಕ್ಕಳನ್ನು ರಕ್ಷಿಸಿ ಅವರಿಗೆ ಸೂಕ್ತ ಆಶ್ರಯ ನೀಡಲಾಗುತ್ತದೆ. ಓವ೯ ಇನ್ನರ್ ವೀಲ್ ಸದಸ್ಯೆ ಓವ೯ ಅನಾಥ ಮಗುವಿನ ಪಾಲಕರಾಗುವಂಥ ಯೋಜನೆ ರೂಪಿಸಲಾಗಿದೆ ಎಂದರು. ಮುಂದಿನ ವಷ೯ ಮಾಚ್೯ನಲ್ಲಿ   ಭಾರತದಲ್ಲಿ ಮೊದಲ ಬಾರಿಗೆ ಇನ್ನರ್ ವೀಲ್‌ನ ೧೮ನೇ ಅಂತರರಾಷ್ಟ್ರೀಯ ಸಮಾವೇಶ ಜೈಪುರದಲ್ಲಿ  ಆಯೋಜಿತವಾಗಿರುವುದು  ಸಂತಸದ ವಿಚಾರ  ಎಂದು ಹಷ೯ ವ್ಯಕ್ತಪಡಿಸಿದ  ಪೂಣಿ೯ಮಾ ರವಿ, 1  ಗ್ರಾಮ, ಆ ಗ್ರಾಮದಲ್ಲಿನ 1 ಶಾಲೆ,ಶಾಲೆಯಲ್ಲಿ ವಿದ್ಯಾಥಿ೯ನಿಯರಿಗೆ ಶೌಚಾಲಯ ಸೇರಿದಂತೆ ಅಗತ್ಯ ಸೌಕಯ೯ಗಳನ್ನು ಕಲ್ಪಿಸುವ ನಿಟ್ಟಿನಲ್ಲಿಯೂ ಅಂತರರಾಷ್ಟ್ರೀಯ ಇನ್ನರ್ ವೀಲ್‌ನಿಂದ  ಯೋಜನೆ ರೂಪುಗೊಂಡಿದೆ ಎಂದರು.

ಕಾಯ೯ಕ್ರಮದಲ್ಲಿ ಮಾತನಾಡಿದ ಮಡಿಕೇರಿ ಇನ್ನರ್ ವೀಲ್ ಸ್ಥಾಪಕಾಧ್ಯಕ್ಷೆ  ಡಾ.ಜಯಲಕ್ಷ್ಮಿ ಪಾಟ್ಕರ್, ಕಳೆದ ಸಾಲಿನಲ್ಲಿ ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆಯಾಗಿ ಲತಾಚಂಗಪ್ಪ , ಕಾಯ೯ದಶಿ೯ಯಾಗಿ ಕನ್ನು ದೇವರಾಜ್ ಮತ್ತು ತಂಡ ಅತ್ಯುತ್ತಮವಾಗಿ ಕಾಯ೯ನಿವ೯ಹಿಸಿದೆ ಎಂದು ಶ್ಲಾಘಿಸಿದರಲ್ಲದೇ, ಹಲವಷ್ಟು ಜನಪರ ಸೇವಾ ಕಾಯ೯ಗಳನ್ನು ಮಹಿಳಾ ಸದಸ್ಯೆಯರು ಕೈಗೊಂಡಿದ್ದಾರೆ ಎಂದು ಹಷ೯ ವ್ಯಕ್ತಪಡಿಸಿದರು.

ಮಡಿಕೇರಿ ಇನ್ನರ್ ವೀಲ್ ನ ನೂತನ ಅಧ್ಯಕ್ಷೆಯಾಗಿ ನಿಶಾ ಮೋಹನ್, ಕಾಯ೯ದಶಿ೯ಯಾಗಿ ಶಫಾಲಿ ರೈ, ಖಚಾಂಜಿಯಾಗಿ ನಮಿತಾ ರೈ,  ಉಪಾಧ್ಯಕ್ಷೆಯಾಗಿ ಬೊಳ್ಳು ಮೇದಪ್ಪ, ಜಂಟಿ ಕಾಯ೯ದಶಿ೯ಯಾಗಿ ಡಾ.ರೇಣುಕಾ ಸುಧಾಕರ್, ಅಂತರರಾಷ್ಟೀಯ ಸೇವಾ ಪ್ರತಿನಿಧಿಯಾಗಿ ವಿಜಯಲಕ್ಷ್ಮಿ ಚೇತನ್, ವಾತಾ೯ ಪತ್ರ ಸಂಪಾದಕಿಯಾಗಿ ಲಲಿತಾ ರಾಘವನ್,  ಶಿಕ್ಷಣ ಮತ್ತು ಮಿಷನ್ ಮಮತಾ  ಸಮಿತಿ ಸದಸ್ಯೆ  ರೂಪಾಸುಮಂತ್ ಅಧಿಕಾರ ಸ್ವೀಕರಿಸಿದರು.

ಇದೇ ಸಂದಭ೯ ಜಿಲ್ಲಾ ಇನ್ನರ್ ವೀಲ್ ಗೆ 50 ವಷ೯ ತುಂಬಿದ ಸಂಭ್ರಮಕ್ಕಾಗಿ ಕಾಯ೯ಕ್ರಮದಲ್ಲಿ ಪಾಲ್ಗೊಂಡವರಿಗೆ ಸಸಿಗಳನ್ನು ವಿತರಿಸಲಾಯಿತು.  ಮಡಿಕೇರಿ ರೋಟರಿ ಅಧ್ಯಕ್ಷ ರತನ್ ತಮ್ಮಯ್ಯ ಕ್ಲಬ್ ನ ವಾತಾ೯ ಸಂಚಿಕೆ ಬಿಡುಗಡೆಗೊಳಿಸಿದರು. ಸದಸ್ಯೆಯರಾದ ಲಕ್ಷ್ಮೀ ಈಶ್ವರಭಟ್, ಪ್ರಿಯಾ ಜಗದೀಶ್ ಪ್ರಾಥಿ೯ಸಿ, ಬೊಳ್ಳು ಮೇದಪ್ಪ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!