ಚುನಾವಣಾ ಪ್ರಚಾರದಿಂದ ದೂರ ಉಳಿದ ‘ಕೈ’ ನಾಯಕರು
ಬೆಂಗಳೂರು: ಉಪಚುನಾವಣಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನಾಯಕರಲ್ಲಿ ಮನಸ್ತಾಪ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ರ್ಯಾಲಿಯಿಂದ ದೂರ ಉಳಿದಿರುವುದು ಕಂಡು ಬಂದಿತ್ತು.
ಚುನಾವಣಾ ರ್ಯಾಲಿಯಿಂದ ಪಕ್ಷದ ನಾಯಕರು ದೂರ ಉಳಿದಿದ್ದರೂ, ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಮಾತ್ರ ಕುಗ್ಗದೆ, ಭರದ ಪ್ರಚಾರ ನಡೆಸಿದರು.
ರ್ಯಾಲಿ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ಒಬ್ಬಂಟಿಯಲ್ಲ. ಲಕ್ಷಾಂತರ ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಸಾವಿರಾರು ನಾಯಕರು ನನ್ನ ಜೊತೆಗಿದ್ದಾರೆಂದು ಹೇಳಿದ್ದಾರೆ.
ಯಾವ ಯಾವ ಹಿರಿಯ ನಾಯಕರು ತಮ್ಮೊಂದಿಗಿದ್ದಾರೆಂದು ಸಿದ್ದರಾಮಯ್ಯ ಅವರು ಹೇಳಿಲ್ಲ ಹೀಗಾಗಿ ಇದೊಂದು ಟೊಳ್ಳು ಹೇಳಿಕೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಾಳಯದಲ್ಲಿ ಹಿರಿಯ ನಾಯಕರೆದರೆ, ಹೆ.ಹೆಚ್.ಮುನಿಯಪ್ಪ, ಬಿಕೆ ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ, ಹೆಚ್.ಕೆ.ಪಾಟೀಲ್. ಈಗಾಗಲೇ ಈ ನಾಯಕರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪಕ್ಷದ ಮೇಲೆ ಬೇಸರಗೊಂಡಿದ್ದಾರೆ. ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ ಮತ್ತೆ ಇದೀಗ ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದು, ಇದು ಪಕ್ಷದ ನಾಯಕರಲ್ಲಿ ಸಾಕಷ್ಟು ಇರಿಸುಮುನಿಸು ಎದುರಾಗಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ನೆನೆದಿದ್ದ ಪರಮೇಶ್ವರ ಅವರು ಈ ಹಿಂದೆ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆಯಿದೆ ಎಂದು ಹೇಳಿದ್ದರು.
ಇದರಂತೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಪ್ರತಿಕ್ರಿಯೆ ನೀಡಿ, ಹಿಂದಿನದ್ದನ್ನು ನೆನೆಯುವುದು ಬೇಡ. ಚುನಾವಣೆ ಹತ್ತಿರ ಬರುತ್ತಿದ್ದು, ಸಮರಕ್ಕೆ ಸಿದ್ಧಗೊಳ್ಳೋಣ ಎಂದರು.