ಸರಕಾರದ ಆದೇಶವನ್ನ ಗಾಳಿಗೆ ತೂರಿದ ಉಡುಪಿಯ ಪ್ರತಿಷ್ಠಿತ ಮಾಲ್ ಗಳು
ಉಡುಪಿ- ಕರೋನ ವೈರಸ್ ಹರಡದಂತೆ ಕ್ರಮ ಕೈಗೊಳ್ಳಲು ಸರಕಾರ ನೀಡಿದ ಒಂದು ವಾರದ ಕರ್ನಾಟಕ ಬಂದ್ ತುರ್ತು ಆದೇಶ ಹೊರಡಿಸಿದೆ ಆದರೆ ಈ ಆದೇಶವನ್ನು ಲೆಕ್ಕಿಸದೆ ಉಡುಪಿಯಲ್ಲಿನ ಪ್ರತಿಷ್ಠಿತ ವ್ಯಾಪಾರ ಸಂಸ್ಥೆಗಳು ಹಿಂದಿನ ಬಾಗಿಲಿನಿಂದ ವ್ಯಾಪಾರ ವಹಿವಾಟುಮಾಡುತ್ತಿರುವುದು ಬಟಾಬಯಲಾಗಿದೆ
ಕರೋನೋ ವೈರಸ್ ಇಡೀ ವಿಶ್ವದಲ್ಲಿ ಮರಣ ತಾಂಡವ ಆಡುತ್ತಿದೆ.ಭಾರತದಲ್ಲೂ ಹಬ್ಬುತ್ತಿದೆ ಹೀಗಾಗಿ ಮುಂಜಾಗರೂಕತಾ ಕ್ರಮವಾಗಿ ಜನರ ಅರೋಗ್ಯದ ದೃಷ್ಟಿಯಿಂದ ಕರ್ನಾಟಕ ರಾಜ್ಯ ಸರಕಾರ ಹಲವಾರು ಕ್ರಮಗಳನ್ನ ಕೈಗೊಂಡಿದೆ.
ಘೋಷಿಸಿರುವ ಸರಕಾರ ಜನ ಸೇರುವಂತಹ ಎಲ್ಲಾ ಕಾರ್ಯಕ್ರಮಗಳನ್ನ ರದ್ದು ಪಡಿಸಿದೆ. ಒಂದು ವಾರಗಳ ಕಾಲ ಸಿನಿಮಾ ಥಿಯೇಟರ್ ಮಾಲ್ ಗಳನ್ನ ಬಂದ್ ಮಾಡಲು ಸೂಚಿಸಿದೆ. ಆದರೆ ಉಡುಪಿಯ ಕೆಲವು ಮಳಿಗೆಗಳ ಮಾಲಕರು ಸರಕಾರದ ಸುತ್ತೋಲೆಯನ್ನೇ ಧಿಕ್ಕರಿಸಿದೆ ಗೀತಾಂಜಲಿ ಸಿಲ್ಕ್ ,ರಿಯಲಾನ್ಸ್ ಮಾರ್ಟ್ ,ಉದ್ಯಾವರದ ಜಯಲಕ್ಷೀ ಸಿಲ್ಕ್ಸ್ ,ಪೈ ಸೇಲ್ಸ್ ,ಬಿಗ್ ಬಾಜಾರ್ ಸಂಸ್ಥೆಗಳು ಮುಂಬಾಗಿಲಿನ ಬಾಗಿಲು ಹಾಕಿ ,ಹಿಂಬಾಗಿಲಿನಿಂದ ಮಾಲ್ ಗಳನ್ನ ತೆರೆದಿಟ್ಟು ವ್ಯಾಪಾರ ನಡೆಸುತ್ತಿದೆ . ಇದರ ವಿರುದ್ಧ ಜಿಲ್ಲಾಧಿಕಾರಿಯವರು ಅತಿ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.