ಕಾನೂನನ್ನು ಗೌರವಿಸುವ ನಾಗರಿಕರಿಗೆ ಪೊಲೀಸರು ಸ್ನೇಹಿತರಾಗುತ್ತಾರೆ ; ಅಬ್ದುಲ್ ಖಾದರ್

ಉಡುಪಿ – ಕಾನೂನನ್ನು ಗೌರವಿಸುವ ಉತ್ತಮ ನಾಗರಿಕರಿಗೆ ಪೊಲೀಸರು ಒಳ್ಳೆಯ ಜನ ಸ್ನೇಹಿತರಾಗುತ್ತಾರೆ ಯಾರು ಅಪರಾದ ಮಾಡುತ್ತಾರೋ ಕಾನೂನನ್ನು ಗೌರವಿಸುವುದಿಲ್ಲವೋ ಅವರಿಗೆ ಪೊಲೀಸರು ಶತ್ರುಗಳಾಗುತ್ತಾರೆ ಎಂದು ಶಿರ್ವ ಠಾಣಾ ಉಪನಿರೀಕ್ಷಕರಾದ ಅಬ್ದುಲ್ ಖಾದರ್ ಹೇಳಿದರು.

ಕಳತ್ತೂರು ಕುಶಲ ಶೇಖರ ಶೆಟ್ಟಿ ಚಾಂದಿನಿ ಹಾಲ್‌ನಲ್ಲಿ ನಡೆದ ಶಿರ್ವ ಠಾಣಾ ಹಾಗೂ ಸಮಾಜ ಸೇವಾ ವೇದಿಕೆ ಕಳತ್ತೂರು ಇದರ ಆಶ್ರಯದಲ್ಲಿ ನಡೆದ ಪೊಲೀಸ್ ಜನಸ್ನೇಹಿ ಸಭೆಯಲ್ಲಿ ಮಾತನಾಡಿದ ಅವರು ಸರಕಾರ ಹಾಗೂ ಪೊಲೀಸ್ ಮಹಾನಿರ್ದೇಶಕಕರು ಪೊಲಿಸ್ ಇಲಾಖೆಯಲ್ಲಿ ಕೆಲವೊಂದು ಪೊಲೀಸ್ ಸುಧಾರಣೆಯನ್ನು ಬದಲಾವಣೆ ಮಾಡಿದ್ದಾರೆ. ಪ್ರತಿ ಗ್ರಾಮಕ್ಕೆ ೫ ಜನರಂತೆ ಬೀಟ್ ಪೊಲೀಸರನ್ನು ನೇಮಿಸಿದ್ದಾರೆ. ಈ ಬೀಟ್ ಪೋಲಿಸರು ಗ್ರಾಮ ಗ್ರಾಮಗಳಲ್ಲಿ ಉತ್ತಮವಾಗಿ ನಾಗರಿಕರೊಂದಿಗೆ ಸ್ಪಂದಿಸಿ ಪೊಲೀಸ್ ಸುಧಾರಣೆ ಬಗ್ಗೆ ಸಹಕರಿಸುತ್ತಾರೆ. ಗ್ರಾಮದ ಜನರು ಇದರ ಬಗ್ಗೆ ಎಚ್ಚೆತ್ತು ಯಾವುದೇ ಮಾಹಿತಿ ಇದ್ದರೂ ಪೊಲೀಸರಿಗೆ ತಿಳಿಸಬೇಕು ಗ್ರಾಮಸ್ಥರು ಸಹಕರಿಸಿದರೇ ಸಾಧ್ಯವಾದಷ್ಡು ಅಪಾರಾಧಗಳನ್ನು ಕಡಿಮೆ ಮಾಡಬಹುದು ಅದಲ್ಲದೇ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ಮಾಹಿತಿಯನ್ನು ಉತ್ತಮವಾಗಿ ನೀಡಿದರು.


ಅಧ್ಯಕ್ಷತೆ ವಹಿಸಿದ ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಮಾತನಾಡಿ ಪೊಲೀಸರು ನಿದ್ದೆ ಬಿಟ್ಟು ರಾತ್ರಿ ಹಗಲು ಸಾರ್ವಜನಿಕರನ್ನು ಕಾಪಾಡುತ್ತಾರೆ ನಾವು ಕೂಡಾ ಅವರನ್ನು ಗೌರವಿಸಬೇಕು ಅಲ್ಲದೆ ನಮ್ಮ ಊರಿನ ಬೀಟ್ ಪೊಲೀಸರು ಉತ್ತಮವಾಗಿ ಕೆಲಸ ನಿರ್ವಹಿಸುವುದು ಶ್ಲಾಘನೀಯ. ಶಿರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಸಭೆಯ ಉಡುಪಿ ಜಿಲ್ಲೆಯಲ್ಲಿ ಇಲಾಖಾ ವರಿಷ್ಟರ ಮೆಚ್ಚುಗೆಗೆ ಪಾತ್ರರಾಗಿರುತ್ತದೆ. ನಮ್ಮಗೆಲ್ಲ ಸಹಕರಿಸಿದ ಗ್ರಾಮದ ಜನರಿಗೂ ಇಲಾಖಾ ಅಧಿಕಾರಿಗಳು ಸಿಬ್ಬಂದಿಗಳಿಗೆ ನಾವು ಚಿರಋಣಿ ಎಂದರು. ಈ ಸಂದರ್ಭದಲ್ಲಿ ಕಾರ್‍ಯಕ್ರಮ ಆಯೋಜಿಸಿದ ಸಮಾಜ ಸೇವಾ ವೇದಿಕೆಯ ಪದಾಧಿಕಾರಿಗಳಾದ ದಿವಾಕರ ಬಿ ಶೆಟ್ಟಿ ಕಳತ್ತೂರು, ಮೊಹಮ್ಮದ್ ಪಾರೂಕ್ ಚಂದ್ರನಗರ, ದಿವಾಕರ ಡಿ ಶೆಟ್ಟಿ ಕಳತ್ತೂರು, ರಾಜೇಶ್ ಮೂಲ್ಯ ಕುತ್ಯಾರು, ಇವರನ್ನು ಇಲಾಖೆಯ ಪರವಾಗಿ ಠಾಣಾಧಿಕಾರಿ ಸಾಧನಾ ಸ್ಮರಣಿಕೆ ನೀಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಅನಿವಾಸಿ ಭಾರತಿಯ ಉದ್ಯಮಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶೇಖರ್ ಬಿ ಶೆಟ್ಟಿ ಅಬುದಾಬಿ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಧೀರಾಜ್ ಶೆಟ್ಟಿ ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ ಬಿ ಶೆಟ್ಟಿ, ಚಂದ್ರನಗರ ಕ್ರೆಸೆಂಟ್ ಇಂಟರ್‌ನ್ಯಾಷನಲ್ ಸ್ಕೂಲ್ ಸಂಚಾಲಕ ಶಂಶುದ್ದೀನ್ ಯೂಸುಫ್, ಸಮಾಜ ಸೇವಾ ವೇದಿಕೆ ಸಂಚಾಲಕ ದಿವಾಕರ ಡಿ ಶೆಟ್ಟಿ ಕಳತ್ತೂರು, ಉಪಾಧ್ಯಕ್ಷ ರಾಜೇಶ್ ಮೂಲ್ಯ ಕುತ್ಯಾರು, ಹಿರಿಯ ಮಾಜಿ ಯೋಧರಾದ ಗೋಪಾಲಸ್ವಾಮಿ ಬೆಳಪು, ಕಳತ್ತೂರು ರಾಘವೇಂದ್ರ ಭಟ್, ಶಿರ್ವ ರೋಟರಿ ಅಧ್ಯಕ್ಷ ಸುನಿಲ್ ಕಾಬ್ರಲ್ ಉಪಸ್ಥಿತರಿದ್ದರು .
ದಿವಾಕರ ಡಿ ಶೆಟ್ಟಿ ಸ್ವಾಗತಿಸಿ ನಿವೃತ್ತ ಮುಖ್ಯೋಪಾಧ್ಯಾಯರಾದ ನಿರ್ಮಲ್ ಕುಮಾರ್ ಹೆಗ್ಡೆ ನಿರೂಪಿಸಿದರು ಹಾಗು ವಿನೋದ್ ಎಸ್.ಎಮ್ ಧನ್ಯವಾದವಿತ್ತರು.

Leave a Reply

Your email address will not be published. Required fields are marked *

error: Content is protected !!